ಬೆಂಗಳೂರು :’ಭಾರತ ಕೊಲೆಗಡುಕರ ರಾಷ್ಟ್ರವಾಗಿದೆ,ಭಾರತ ದನಗಳ ಭಾರತವಾಗಬಾರದು,ಜನಗಳ ಭಾರತವಾಗಬೇಕು.ಕನ್ನಡದ ಹುಲಿ, ಕ್ರಾಂತಿ ವೀರ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಕ್ಕಾಗಿ ಮಕ್ಕಳನ್ನು ಅಡವಿಟ್ಟಿದ್ದ, ಅವರ ಪ್ರತಿಮೆ ಕೆಂಪುಕೋಟೆಯ ಮೇಲಿರಬೇಕಿತ್ತು. ಸ್ವಾತಂತ್ರ್ಯಕ್ಕಾಗಿ ಗಾಂಧಿ,ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್ ಏನೂ ಮಾಡಿಲ್ಲ…’ ಇದು ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಪಿಎಫ್ಐ ಸಮಾವೇಶದಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾಡಿದ ಭಾರೀ ವಿವಾದಾತ್ಮಕ ಭಾಷಣ.
‘ಮೋದಿ ಅವರೇ ಪಿಎಫ್ಐ ಭಯೋತ್ಪಾದಕ ಸಂಘಟನೆಯಲ್ಲ, ದೇಶವನ್ನು ಒಡೆಯುತ್ತಿರುವ ನೀವು ನಿಜವಾದ ಭಯೋತ್ಪಾದಕರು’ ಎಂದರು.
‘ಬಿಜೆಪಿ ಹೇಳುತ್ತದೆ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು, ನಾಳೆ ಮುಸಲ್ಮಾನ ಮುಕ್ತ ಭಾರತ ಮಾಡುತ್ತೇವೆ, ಬೌದ್ಧ ಮುಕ್ತ, ಜೈನ ಮುಕ್ತ , ಹಲವು ಮುಕ್ತ ಮಾಡುತ್ತೇವೆ ಅನ್ನುತ್ತಾರೆ’ ಎಂದರು.
‘ಭಾರತ ಸುಳ್ಳಿನ ಸಾಮ್ರಾಜ್ಞವಾಗಿದೆ, ಕೊಲೆಗಡುಕರ ರಾಷ್ಟ್ರವಾಗಿ ಪ್ರಸಿದ್ಧಿಯಾಗುತ್ತಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ‘ನಿಜವಾದ ಭಯೋತ್ಪಾದಕ ಯಾರು’ ಎಂದು ಪಿಎಫ್ಐ ಕಾರ್ಯಕರ್ತರನ್ನು ಪ್ರಶ್ನಿಸಿದರು. ಎಲ್ಲರೂ ಮೋದಿ..ಮೋದಿ ಎಂದು ಕೂಗಿದರು.
Related Articles
‘ದನ ಕಡಿದವರನ್ನು ಬಂಧಿಸುತ್ತಾರೆ, ಆದರೆ ಜನರನ್ನು ಕೊಂದವರನ್ನು ಬಂಧಿಸುವುದಿಲ್ಲ’ ಎಂದು ಸ್ವಾಮೀಜಿ ಭಾರೀ ವಿವಾದ ಹುಟ್ಟು ಹಾಕಿದ್ದಾರೆ.
ಬಿ.ಟಿ.ಲಲಿತಾ ನಾಯಕ್ ಅವರೂ ವೇದಿಕೆಯಲ್ಲಿದ್ದರು. ಅವರು ಗೋ ಸಂರಕ್ಷಣೆಗೆ ಪಣ ತೊಟ್ಟಿರುವ ರಾಘವೇಶ್ವರ ಶ್ರೀಗಳ ವಿರುದ್ಧ ಕಿಡಿ ಕಾರಿದರು.