Advertisement

ಭಾರತ-ಐರ್ಲೆಂಡ್‌ ಟಿ20 ಸರಣಿ: ಇಂದು ಮೊದಲ ಪಂದ್ಯ: ಮೀಸಲು ಸಾಮರ್ಥ್ಯಕ್ಕೊಂದು ಪರೀಕ್ಷೆ

11:46 PM Jun 25, 2022 | Team Udayavani |

ದಿ ವಿಲೇಜ್‌ (ಡಬ್ಲಿನ್‌): ಎರಡು ಪಂದ್ಯಗಳ ಟಿ20 ಕಿರು ಸರಣಿಗಾಗಿ ಭಾರತ ತಂಡ ಐರ್ಲೆಂಡ್‌ಗೆ ಆಗಮಿಸಿದೆ. ರವಿವಾರ ಮತ್ತು ಮಂಗಳವಾರ ಈ ಪಂದ್ಯ ಗಳು ನಡೆಯಲಿವೆ. ಮೊದಲ ಪ್ರಯತ್ನದಲ್ಲೇ ಗುಜರಾತ್‌ ತಂಡವನ್ನು ಚಾಂಪಿಯನ್‌ ಪಟ್ಟ ಕ್ಕೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಹಾರ್ದಿಕ್‌ ಪಾಂಡ್ಯ ಮೊದಲ ಸಲ ಭಾರತ ವನ್ನು ಮುನ್ನಡೆಸಲಿರುವುದು ವಿಶೇಷ.

Advertisement

ಇದು ಭಾರತದ ಮೀಸಲು ಸಾಮರ್ಥ್ಯ ವನ್ನು ಪರೀಕ್ಷಿಸಲಿರುವ ಸರಣಿ. ಸ್ಟಾರ್‌ ಆಟಗಾರರೆಲ್ಲ ನಾನಾ ಕಾರಣಗಳಿಂದ ಲಭ್ಯ ರಾಗದೇ ಇದ್ದುದರಿಂದ ಐಪಿಎಲ್‌ನಲ್ಲಿ ಮಿಂಚಿದ ಪ್ರತಿಭಾನ್ವಿತರ ಪಡೆಯೊಂದು ಇಲ್ಲಿ ಕಣಕ್ಕಿಳಿಯಲಿದೆ. ಮುಂಬರುವ ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ಇವರ ಸಾಮರ್ಥ್ಯ ವನ್ನು ಪರೀಕ್ಷಿಸಲು ಇದೊಂದು ವೇದಿಕೆ.

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಭಾರತ ಇತ್ತೀಚೆಗಷ್ಟೇ 2-2 ಸಮಬಲದಲ್ಲಿ ಮುಗಿಸಿತ್ತು. ಆಗ ರಿಷಭ್‌ ಪಂತ್‌ ಟೀಮ್‌ ಇಂಡಿಯಾ ನಾಯಕರಾಗಿದ್ದರು. ರಾಹುಲ್‌ ಗಾಯಾಳಾಗಿ ಹೊರಗುಳಿದುದರಿಂದ ಪಂತ್‌ಗೆ ನಾಯಕತ್ವ ಒಲಿದಿತ್ತು. ಈಗ ಪಂತ್‌ ಟೆಸ್ಟ್‌ ತಂಡವನ್ನು ಸೇರಿಕೊಂಡಿದ್ದಾರೆ. ನಾಯಕತ್ವ ಪಾಂಡ್ಯ ಹೆಗಲೇರಿದೆ. ಆದರೆ ಐಪಿಎಲ್‌ ಬೇರೆ, ಅಂತರಾಷ್ಟ್ರೀಯ ಕ್ರಿಕೆಟ್‌ ಸರಣಿ ಬೇರೆ ಎಂಬ ಸಂಗತಿ ಎಲ್ಲರ ಅರಿವಿನಲ್ಲಿರಬೇಕು.

ಲಕ್ಷ್ಮಣ್‌ ಕಾರ್ಯತಂತ್ರ ಏನು?
ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಸರಣಿಯಲ್ಲಿ ಭಾರತ ಒಂದೇ ತಂಡವನ್ನು ಕಣಕ್ಕಿಳಿಸಿ ಅನೇಕ ಆಟಗಾರರನ್ನು ಬೆಂಚ್‌ ಮೇಲೆ ಕೂರಿಸಿತ್ತು. ಉಮ್ರಾನ್‌ ಮಲಿಕ್‌, ಆರ್ಷದೀಪ್‌ ಸಿಂಗ್‌, ದೀಪಕ್‌ ಹೂಡಾ, ವೆಂಕಟೇಶ್‌ ಅಯ್ಯರ್‌, ರವಿ ಬಿಷ್ಣೋಯಿ ಅವರನ್ನು ಬದಿಗಿರಿಸಿ ಟೀಕೆ ಗೊಳಗಾಗಿತ್ತು. ಐರ್ಲೆಂಡ್‌ ವಿರುದ್ಧದ ಸರಣಿಯಲ್ಲಾದರೂ ಇವರಿಗೆ ಅವಕಾಶ ಲಭಿಸೀತೇ ಎಂಬುದೊಂದು ನಿರೀಕ್ಷೆ. ಈ ತಂಡಕ್ಕೆ ಎನ್‌ಸಿಎ ಅಧ್ಯಕ್ಷ, ಮಾಜಿ ಬ್ಯಾಟರ್‌ ವಿವಿಎಸ್‌ ಲಕ್ಷ್ಮಣ್‌ ಕೋಚ್‌ ಆಗಿದ್ದು, ಇವರ ಕಾರ್ಯತಂತ್ರ ಹೇಗಿದ್ದೀತೆಂಬುದು ಕೂಡ ಕುತೂಹಲದ ಸಂಗತಿ. ರಾಹುಲ್‌ ದ್ರಾವಿಡ್‌ಗಿಂತ ಲಕ್ಷ್ಮಣ್‌ ಹೇಗೆ ಭಿನ್ನ ಎಂಬುದನ್ನು ಅರಿಯುವ ಕುತೂಹಲವೂ ಇದೆ.

ಸೂರ್ಯಕುಮಾರ್‌ ಆಗಮನ
ಸೂರ್ಯಕುಮಾರ್‌ ಯಾದವ್‌ ತಂಡಕ್ಕೆ ಮರಳಿರುವುದರಿಂದ ಹಾಗೂ ಐಪಿಎಲ್‌ನಲ್ಲಿ ಮಿಂಚಿದ ರಾಹುಲ್‌ ತ್ರಿಪಾಠಿ ಮೊದಲ ಸಲ ಅವಕಾಶ ಪಡೆದಿರುವುದರಿಂದ ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಒಂದಿಷ್ಟು ಬದಲಾ ವಣೆ ಸಂಭವಿಸುವುದರಲ್ಲಿ ಅನುಮಾ ನವಿಲ್ಲ. ಪಂತ್‌ ಜತೆಗೆ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಆಡಿದ ಶ್ರೇಯಸ್‌ ಅಯ್ಯರ್‌ ಕೂಡ ಟೆಸ್ಟ್‌ ತಂಡದಲ್ಲಿದ್ದಾರೆ. ಈ ಎರಡು ಸ್ಥಾನಕ್ಕಾಗಿ ಸಾಕಷ್ಟು ಪೈಪೋಟಿ ಇದೆ.

Advertisement

ಓಪನರ್‌ ಋತುರಾಜ್‌ ಗಾಯಕ್ವಾಡ್‌ ಅವರ ಬ್ಯಾಟಿಂಗ್‌ ಫಾರ್ಮ್ ನಿರೀಕ್ಷಿತ ಮಟ್ಟ ದಲ್ಲಿಲ್ಲ. ಇವರ ಬ್ಯಾಟಿಂಗ್‌ ಸುಧಾರಣೆಗೆ ಮತ್ತೂಂದು ಅವಕಾಶ ಲಭಿಸಿದೆ.

ಐರ್ಲೆಂಡ್‌ ಟ್ರ್ಯಾಕ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡುವುದರಿಂದ ಅವಳಿ ಸ್ಪಿನ್‌ ಆಕ್ರಮಣ ಅನಗತ್ಯ ಎಂಬುದೊಂದು ಲೆಕ್ಕಾ ಚಾರ. ಹೀಗಾಗಿ ವೇಗಿ ಉಮ್ರಾನ್‌ ಮಲಿಕ್‌ ಅಥವಾ ಆರ್ಷದೀಪ್‌ ಸಿಂಗ್‌ ಅವರನ್ನು ಆಡಿಸುವುದರಿಂದ ಹೆಚ್ಚಿನ ಲಾಭವಿದೆ.

ಅಪಾಯಕಾರಿ ಐರ್ಲೆಂಡ್‌
ಐರ್ಲೆಂಡ್‌ ಬಲಿಷ್ಠ ಅಲ್ಲವಾದರೂ ತವ ರಲ್ಲಿ ಅಪಾಯಕಾರಿಯಾಗಿ ಗೋಚರಿಸುವ ಸಾಧ್ಯತೆ ಇದೆ. ತಂಡದಲ್ಲಿ ಸಾಕಷ್ಟು ಮಂದಿ ಅನುಭವಿ ಆಟಗಾರರಿದ್ದಾರೆ. ಸ್ಟೀಫ‌ನ್‌ ಡೊಹೆನಿ, ಕಾನರ್‌ ಓಲ#ರ್ಟ್‌ ಅವರಂಥ ಹೊಸ ಮುಖಗಳೂ ಇವೆ. ರೋಹಿತ್‌, ಕೊಹ್ಲಿ, ಬುಮ್ರಾ ಅವರ ಗೈರಲ್ಲೂ ಭಾರತ ತಂಡ ಬಲಿಷ್ಠವಾಗಿದೆ; ಪಾಂಡ್ಯ ಪಡೆಯನ್ನು ಕಡೆಗಣಿಸುವುದಿಲ್ಲ ಎಂದಿದ್ದಾರೆ ನಾಯಕ ಆ್ಯಂಡ್ರೂé ಬಾಲ್‌ಬಿರ್ನಿ.

ಸಂಭಾವ್ಯ ತಂಡಗಳು
ಭಾರತ: ಇಶಾನ್‌ ಕಿಶನ್‌, ಋತುರಾಜ್‌ ಗಾಯಕ್ವಾಡ್‌, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ (ನಾಯಕ), ದಿನೇಶ್‌ ಕಾರ್ತಿಕ್‌, ಅಕ್ಷರ್‌ ಪಟೇಲ್‌, ಹರ್ಷಲ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಆವೇಶ್‌ ಖಾನ್‌/ಉಮ್ರಾನ್‌ ಮಲಿಕ್‌/ಆರ್ಷದೀಪ್‌ ಸಿಂಗ್‌, ಯಜುವೇಂದ್ರ ಚಹಲ್‌.

ಐರ್ಲೆಂಡ್‌: ಆ್ಯಂಡಿ ಬಾಲ್‌ಬಿರ್ನಿ (ನಾಯಕ), ಪಾಲ್‌ ಸ್ಟರ್ಲಿಂಗ್‌, ಗ್ಯಾರೆತ್‌ ಡೆಲಾನಿ, ಹ್ಯಾರಿ ಟೆಕ್ಟರ್‌, ಲಾರ್ಕಾನ್‌ ಟ್ಯುಕರ್‌ (ವಿ.ಕೀ.), ಕರ್ಟಿಸ್‌ ಕ್ಯಾಂಫ‌ರ್‌, ಆ್ಯಂಡಿ ಮೆಕ್‌ಬ್ರೈನ್‌, ಜಾರ್ಜ್‌ ಡಾಕ್ರೆಲ್‌, ಮಾರ್ಕ್‌ ಅಡೈರ್‌, ಬ್ಯಾರಿ ಮೆಕಾರ್ತಿ, ಜೋಶುವ ಲಿಟ್ಲ.

ಆರಂಭ: ರಾತ್ರಿ 9.00, ಪ್ರಸಾರ: ಸೋನಿ ಸಿಕ್ಸ್‌

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next