Advertisement
ಇದು ಭಾರತದ ಮೀಸಲು ಸಾಮರ್ಥ್ಯ ವನ್ನು ಪರೀಕ್ಷಿಸಲಿರುವ ಸರಣಿ. ಸ್ಟಾರ್ ಆಟಗಾರರೆಲ್ಲ ನಾನಾ ಕಾರಣಗಳಿಂದ ಲಭ್ಯ ರಾಗದೇ ಇದ್ದುದರಿಂದ ಐಪಿಎಲ್‌ನಲ್ಲಿ ಮಿಂಚಿದ ಪ್ರತಿಭಾನ್ವಿತರ ಪಡೆಯೊಂದು ಇಲ್ಲಿ ಕಣಕ್ಕಿಳಿಯಲಿದೆ. ಮುಂಬರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಇವರ ಸಾಮರ್ಥ್ಯ ವನ್ನು ಪರೀಕ್ಷಿಸಲು ಇದೊಂದು ವೇದಿಕೆ.
ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಸರಣಿಯಲ್ಲಿ ಭಾರತ ಒಂದೇ ತಂಡವನ್ನು ಕಣಕ್ಕಿಳಿಸಿ ಅನೇಕ ಆಟಗಾರರನ್ನು ಬೆಂಚ್ ಮೇಲೆ ಕೂರಿಸಿತ್ತು. ಉಮ್ರಾನ್ ಮಲಿಕ್, ಆರ್ಷದೀಪ್ ಸಿಂಗ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ರವಿ ಬಿಷ್ಣೋಯಿ ಅವರನ್ನು ಬದಿಗಿರಿಸಿ ಟೀಕೆ ಗೊಳಗಾಗಿತ್ತು. ಐರ್ಲೆಂಡ್ ವಿರುದ್ಧದ ಸರಣಿಯಲ್ಲಾದರೂ ಇವರಿಗೆ ಅವಕಾಶ ಲಭಿಸೀತೇ ಎಂಬುದೊಂದು ನಿರೀಕ್ಷೆ. ಈ ತಂಡಕ್ಕೆ ಎನ್‌ಸಿಎ ಅಧ್ಯಕ್ಷ, ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿದ್ದು, ಇವರ ಕಾರ್ಯತಂತ್ರ ಹೇಗಿದ್ದೀತೆಂಬುದು ಕೂಡ ಕುತೂಹಲದ ಸಂಗತಿ. ರಾಹುಲ್ ದ್ರಾವಿಡ್‌ಗಿಂತ ಲಕ್ಷ್ಮಣ್ ಹೇಗೆ ಭಿನ್ನ ಎಂಬುದನ್ನು ಅರಿಯುವ ಕುತೂಹಲವೂ ಇದೆ.
Related Articles
ಸೂರ್ಯಕುಮಾರ್ ಯಾದವ್ ತಂಡಕ್ಕೆ ಮರಳಿರುವುದರಿಂದ ಹಾಗೂ ಐಪಿಎಲ್‌ನಲ್ಲಿ ಮಿಂಚಿದ ರಾಹುಲ್ ತ್ರಿಪಾಠಿ ಮೊದಲ ಸಲ ಅವಕಾಶ ಪಡೆದಿರುವುದರಿಂದ ಭಾರತದ ಬ್ಯಾಟಿಂಗ್ ಸರದಿಯಲ್ಲಿ ಒಂದಿಷ್ಟು ಬದಲಾ ವಣೆ ಸಂಭವಿಸುವುದರಲ್ಲಿ ಅನುಮಾ ನವಿಲ್ಲ. ಪಂತ್ ಜತೆಗೆ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಆಡಿದ ಶ್ರೇಯಸ್ ಅಯ್ಯರ್ ಕೂಡ ಟೆಸ್ಟ್ ತಂಡದಲ್ಲಿದ್ದಾರೆ. ಈ ಎರಡು ಸ್ಥಾನಕ್ಕಾಗಿ ಸಾಕಷ್ಟು ಪೈಪೋಟಿ ಇದೆ.
Advertisement
ಓಪನರ್ ಋತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ಫಾರ್ಮ್ ನಿರೀಕ್ಷಿತ ಮಟ್ಟ ದಲ್ಲಿಲ್ಲ. ಇವರ ಬ್ಯಾಟಿಂಗ್ ಸುಧಾರಣೆಗೆ ಮತ್ತೂಂದು ಅವಕಾಶ ಲಭಿಸಿದೆ.
ಐರ್ಲೆಂಡ್ ಟ್ರ್ಯಾಕ್ ವೇಗಿಗಳಿಗೆ ಹೆಚ್ಚಿನ ನೆರವು ನೀಡುವುದರಿಂದ ಅವಳಿ ಸ್ಪಿನ್ ಆಕ್ರಮಣ ಅನಗತ್ಯ ಎಂಬುದೊಂದು ಲೆಕ್ಕಾ ಚಾರ. ಹೀಗಾಗಿ ವೇಗಿ ಉಮ್ರಾನ್ ಮಲಿಕ್ ಅಥವಾ ಆರ್ಷದೀಪ್ ಸಿಂಗ್ ಅವರನ್ನು ಆಡಿಸುವುದರಿಂದ ಹೆಚ್ಚಿನ ಲಾಭವಿದೆ.
ಅಪಾಯಕಾರಿ ಐರ್ಲೆಂಡ್ಐರ್ಲೆಂಡ್ ಬಲಿಷ್ಠ ಅಲ್ಲವಾದರೂ ತವ ರಲ್ಲಿ ಅಪಾಯಕಾರಿಯಾಗಿ ಗೋಚರಿಸುವ ಸಾಧ್ಯತೆ ಇದೆ. ತಂಡದಲ್ಲಿ ಸಾಕಷ್ಟು ಮಂದಿ ಅನುಭವಿ ಆಟಗಾರರಿದ್ದಾರೆ. ಸ್ಟೀಫನ್ ಡೊಹೆನಿ, ಕಾನರ್ ಓಲ#ರ್ಟ್ ಅವರಂಥ ಹೊಸ ಮುಖಗಳೂ ಇವೆ. ರೋಹಿತ್, ಕೊಹ್ಲಿ, ಬುಮ್ರಾ ಅವರ ಗೈರಲ್ಲೂ ಭಾರತ ತಂಡ ಬಲಿಷ್ಠವಾಗಿದೆ; ಪಾಂಡ್ಯ ಪಡೆಯನ್ನು ಕಡೆಗಣಿಸುವುದಿಲ್ಲ ಎಂದಿದ್ದಾರೆ ನಾಯಕ ಆ್ಯಂಡ್ರೂé ಬಾಲ್‌ಬಿರ್ನಿ. ಸಂಭಾವ್ಯ ತಂಡಗಳು
ಭಾರತ: ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ (ನಾಯಕ), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್/ಉಮ್ರಾನ್ ಮಲಿಕ್/ಆರ್ಷದೀಪ್ ಸಿಂಗ್, ಯಜುವೇಂದ್ರ ಚಹಲ್. ಐರ್ಲೆಂಡ್: ಆ್ಯಂಡಿ ಬಾಲ್‌ಬಿರ್ನಿ (ನಾಯಕ), ಪಾಲ್ ಸ್ಟರ್ಲಿಂಗ್, ಗ್ಯಾರೆತ್ ಡೆಲಾನಿ, ಹ್ಯಾರಿ ಟೆಕ್ಟರ್, ಲಾರ್ಕಾನ್ ಟ್ಯುಕರ್ (ವಿ.ಕೀ.), ಕರ್ಟಿಸ್ ಕ್ಯಾಂಫರ್, ಆ್ಯಂಡಿ ಮೆಕ್‌ಬ್ರೈನ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೈರ್, ಬ್ಯಾರಿ ಮೆಕಾರ್ತಿ, ಜೋಶುವ ಲಿಟ್ಲ. ಆರಂಭ: ರಾತ್ರಿ 9.00, ಪ್ರಸಾರ: ಸೋನಿ ಸಿಕ್ಸ್