Advertisement

ಭಾರತ-ಐರ್ಲೆಂಡ್‌ ಮೊದಲ ಪಂದ್ಯ ಡ್ರಾ

12:30 AM Feb 03, 2019 | |

ಮುರ್ಸಿಯ: ಸ್ಪೇನ್‌ ವಿರುದ್ಧದ ಸರಣಿಯನ್ನು ಡ್ರಾ ಮಾಡಿಕೊಂಡ ಭಾರತ ವನಿತಾ ಹಾಕಿ ತಂಡ ಐರ್ಲೆಂಡ್‌ ವಿರುದ್ಧದ ಮೊದಲ ಸೌಹಾರ್ದ ಪಂದ್ಯವನ್ನು ಕೂಡ ಡ್ರಾ ಮಾಡಿಕೊಂಡಿದೆ.

Advertisement

ಶುಕ್ರವಾರ ರಾತ್ರಿ ನಡೆದ ಮೊದಲ ಪಂದ್ಯವನ್ನು ಭಾರತ 1-1 ಗೋಲಿನಿಂದ ಡ್ರಾ ಮಾಡಿಕೊಂಡಿದೆ. ರವಿವಾರ ನಡೆಯಲಿರುವ ಐರ್ಲೆಂಡ್‌ ವಿರುದ್ಧದ 2ನೇ ಸೌಹಾರ್ದ ಪಂದ್ಯದ ಬಳಿಕ ಭಾರತ ತಂಡದ 10 ದಿನಗಳ ಸ್ಪೇನ್‌ ಪ್ರವಾಸ ಕೊನೆಗೊಳ್ಳಲಿದೆ.

ಸ್ಪೇನ್‌ ವಿರುದ್ಧದ ಸರಣಿಯ ಬಳಿಕ ಉತ್ಸಾಹದಿಂದ ಐರ್ಲೆಂಡ್‌ ವಿರುದ್ಧ ಆಡಿದ ಭಾರತ ಉತ್ತಮ ಆರಂಭವನ್ನೇ ಪಡೆಯಿತು. 4ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಪಡೆದ ಭಾರತ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫ‌ಲವಾಯಿತು. ದ್ವಿತೀಯ ಕ್ವಾರ್ಟರ್‌ನಲ್ಲಿ ಮತ್ತೂಂದು ಪೆನಾಲ್ಟಿ ಕಾರ್ನರ್‌ ದೊರಕಿದರೂ ಗೋಲು ಹೊಡೆಯಲು ಸಾಧ್ಯವಾಗಿರಲಿಲ್ಲ. 18ನೇ ನಿಮಿಷದಲ್ಲಿ ಗುರ್‌ಜೀತ್‌ ಗೋಲು ಹೊಡೆದು ತಂಡಕ್ಕೆ 1-0 ಮುನ್ನಡೆ ಒದಗಿಸಿದರು. ಭಾರತದ ಮುನ್ನಡೆಯಿಂದ ಒತ್ತಡಕ್ಕೆ ಸಿಲುಕಿದ ಐರ್ಲೆಂಡ್‌ ತಂಡ ಚುರುಕಿನ ಆಟಕ್ಕಿಳಿಯಿತು. 

45ನೇ ನಿಮಿಷದಲ್ಲಿ ಸಾರಾ ಹವಾಕ್‌ಶಾ ಗೋಲು ಹೊಡೆದು 1-1 ಸಮಬಲಕ್ಕೆ ತಂದಿತ್ತರು. ಅಂತಿಮ ಕ್ವಾರ್ಟರ್‌ನಲ್ಲಿ ಎರಡು ತಂಡಗಳು ರಕ್ಷಣಾತ್ಮಕ ಆಟವಾಡಿತು. ಕೊನೆಯ ಕ್ಷಣದಲ್ಲಿ ಪೆನಾಲ್ಟಿ ಕಾರ್ನರ್‌ ಪಡೆದ ಐರ್ಲೆಂಡ್‌ ತಂಡದ ಚೆಂಡನ್ನು ತಡೆಯವಲ್ಲಿ ಯಶಸ್ವಿಯಾದ ಗೋಲು ಕೀಪರ್‌ ಸವಿತಾ ಭಾರತವನ್ನು ಸೋಲಿನಿಂದ ಹೊರ ತಂದರು.

Advertisement

Udayavani is now on Telegram. Click here to join our channel and stay updated with the latest news.

Next