Advertisement
ಇದೇ ಸಂದರ್ಭದಲ್ಲಿ ಮೋದಿಯವರಿಗೆ ಪ್ಯಾಲೆಸ್ತೀನ್‌ನ ಪರಮೋನ್ನತ ನಾಗರಿಕ ಪುರಸ್ಕಾರ “ಗ್ರಾಂಡ್ ಕಾಲರ್ ಆಫ್ ದ ಸ್ಟೇಟ್ ಆಫ್ ಪ್ಯಾಲೆಸ್ತೀನ್’ ಅನ್ನು ಅಧ್ಯಕ್ಷ ಮೆಹಮೂದ್ ಅಬ್ಟಾಸ್ ಪ್ರದಾನ ಮಾಡಿದ್ದಾರೆ. ಅದನ್ನು ವಿನಮ್ರ ಭಾವದಿಂದ ಸ್ವೀಕರಿಸಿದ ಪ್ರಧಾನಿ, “ಈ ಗೌರವ ಭಾರತ ಮತ್ತು ಪ್ಯಾಲೆಸ್ತೀನ್‌ನ ಮಿತ್ರತ್ವಕ್ಕೆ ಸಂದ ಗೌರವ. ನನಗೆ ಈ ಗೌರವ ನೀಡಿದ್ದಕ್ಕಾಗಿ ನನ್ನ ದೇಶದ ಪರವಾಗಿ ಕೃತಜ್ಞತೆ ಸಲ್ಲಿಸುವೆ’ ಎಂದು ತಿಳಿಸಿದ್ದಾರೆ.
Related Articles
Advertisement
ನ್ಯಾಮ್ ಸದಸ್ಯನಾಗಲಿದೆ: ಅಲಿಪ್ತ ರಾಷ್ಟ್ರಗಳ ಒಕ್ಕೂಟಕ್ಕೆ ಪ್ಯಾಲೆಸ್ತೀನ್ ಸೇರ್ಪಡೆಯಾಗಲಿದೆ ಎಂಬ ಸುಳಿವು ನೀಡಿದ ಅಬ್ಟಾಸ್ ಇಸ್ರೇಲ್ ಜತೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ಅರಾಫತ್ ಮ್ಯೂಸಿಯಂಗೆ ಭೇಟಿ: ಪ್ಯಾಲೆಸ್ತೀನ್‌ಗೆ ಭೇಟಿ ನೀಡಿದ ತಕ್ಷಣ ಪ್ರಧಾನಿ ಮೋದಿ ಅವರು ಮಾಜಿ ಅಧ್ಯಕ್ಷ ದಿ. ಯಾಸರ್ ಅರಾಫತ್ ಅವರ ಸ್ಮಾರಕಕ್ಕೆ ಭೇಟಿ ನೀಡಿ, ಗೌರವ ವಂದನೆ ಸಲ್ಲಿಸಿದರು.
ಸೇನಾ ಕಾಪ್ಟರ್‌ನಲ್ಲಿ ಪ್ರಯಾಣ: ಶುಕ್ರವಾರ ನವದೆಹಲಿಯಿಂದ ಜೋರ್ಡಾನ್‌ಗೆ ಭೇಟಿ ನೀಡಿದ್ದ ಅವರು ಶನಿವಾರ ಸೇನೆಯ ಹೆಲಿಕಾಪ್ಟರ್‌ನಲ್ಲಿ ರಮಲ್ಲಾಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಖುದ್ದಾಗಿ ಅಧ್ಯಕ್ಷ ಅಬ್ಟಾಸ್ ಪ್ರಧಾನಿ ಮೋದಿಯವರನ್ನು ಬರ ಮಾಡಿಕೊಂಡಿದ್ದಾರೆ.
ಆರು ಒಪ್ಪಂದಪ್ರಧಾನಿ ನರೇಂದ್ರ ಮೋದಿ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷ ಅಬ್ಟಾಸ್ ಒಟ್ಟು ಆರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಮೂರು ಒಪ್ಪಂದಗಳು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವು. ಇದರ ಜತೆಗೆ 1,092 ಕೋಟಿ (30 ಮಿಲಿಯನ್ ಅಮೆರಿಕನ್ ಡಾಲರ್)ರೂ. ವೆಚ್ಚದಲ್ಲಿ ಬೇತ್ ಸಾಹೂರ್ ಎಂಬಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.