Advertisement
ಭಾರತ ಸೇರಿದಂತೆ ಒಟ್ಟು 15 ರಾಷ್ಟ್ರಗಳ ಬಗ್ಗೆ ನಡೆಸಲಾಗಿರುವ ಅಧ್ಯಯನದಲ್ಲಿ ಸದ್ಯ ವಿತ್ತೀಯ ಬಿಕ್ಕಟ್ಟಿಗೆ ತುತ್ತಾಗಿರುವ ಶ್ರೀಲಂಕಾಕ್ಕೆ ಶೇ.85ರಷ್ಟು ಆರ್ಥಿಕ ಹಿಂಜರಿತದ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಗಳು ಇವೆ. ಈ ಹಿಂದೆ ನಡೆಸಲಾಗಿದ್ದ ಸಮೀಕ್ಷೆಗಿಂತ ಶೇ.33ರಷ್ಟು ಅಧಿಕ ಪ್ರಮಾಣದಲ್ಲಿ ತೊಂದರೆಗೆ ಒಳಾಗಲಿದೆ. ನ್ಯೂಜಿಲೆಂಡ್, ತೈವಾನ್, ಆಸ್ಟ್ರೇಲಿಯಾ ಮತ್ತು ಫಿಲಿಪ್ಪೀನ್ಸ್‌ಗಳು ಕ್ರಮವಾಗಿ ಶೇ.33, ಶೇ.20, ಶೇ.20 ಮತ್ತು ಶೇ.8ರಷ್ಟು ವಿತ್ತೀಯ ಬಿಕ್ಕಟ್ಟಿಗೆ ತುತ್ತಾಗಲಿವೆ ಎಂದು ಅಧ್ಯಯನದಲ್ಲಿ ಉಲ್ಲೇಖೀಸಲಾಗಿದೆ. ಪಾಕಿಸ್ತಾನಕ್ಕೆ ಶೇ.20ರಷ್ಟು ಬಾಧಕವಾಗಲಿದೆ.
ಏಷ್ಯಾದ ಪ್ರಬಲ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚೀನ ಕೂಡ ಈ ಸಮಸ್ಯೆಗೆ ತುತ್ತಾಗಲಿದೆ. ಆ ದೇಶದ ವಿವಿಧ ಕ್ಷೇತ್ರಗಳಿಗೆ ಶೇ.20ರಷ್ಟು ಸಮಸ್ಯೆ ಉಂಟಾಗಲಿದೆ. ಇಂಧನ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬೆಲೆ ಏರಿಕೆಯಿಂದಾಗಿ ಜರ್ಮನಿ ಮತ್ತು ಫ್ರಾನ್ಸ್ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಸಮಸ್ಯೆ ಉಂಟಾಗಲಿದೆ.
Related Articles
ದೇಶ/ವಲಯ ಪ್ರಮಾಣ (ಶೇಕಡಾವಾರು)
ಭಾರತ 00
ಅಮೆರಿಕ 38
ಏಷ್ಯಾ 20-25
ಐರೋಪ್ಯ 50-55
ಶ್ರೀಲಂಕಾ 85
ಆಸ್ಟ್ರೇಲಿಯಾ 20
ಪಾಕಿಸ್ತಾನ 20
Advertisement