Advertisement

ಬಾಹ್ಯಾಕಾಶ ತ್ಯಾಜ್ಯ ಇಳಿಕೆಯಲ್ಲಿ ಇಸ್ರೋ ನಿರತ; ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ವಿವರಣೆ

07:35 PM Apr 10, 2022 | Team Udayavani |

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ (ಇಸ್ರೋ) ಸೇರಿದ 217 ಯಂತ್ರಗಳು ಹಾಗೂ ಯಂತ್ರಗಳ ಅವಶೇಷಗಳು ಅಂತರಿಕ್ಷದಲ್ಲಿ ಭೂಮಿಯನ್ನು ಸುತ್ತುತ್ತಿವೆ ಎಂದು ಪ್ರಧಾನಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

Advertisement

ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಪ್ರಕಟಿಸಿದ “ಆರ್ಬಿಟಲ್‌ ಡೆಬ್ರಿಸ್‌ ಕ್ವಾರ್ಟರ್ಲಿ ನ್ಯೂಸ್‌’ ನಿಯತಕಾಲಿಕೆಯ ಮಾರ್ಚ್‌ ತಿಂಗಳ ಆವೃತ್ತಿಯಲ್ಲಿ ಭಾರತದ ಇಸ್ರೋಗೆ ಸೇರಿದ ಸೇವೆಯಲ್ಲಿರುವ ಅಥವಾ ಸೇವೆಯಲ್ಲಿರದ ಒಟ್ಟು 103 ಉಪಗ್ರಗಳು ಭೂಮಂಡಲವನ್ನು ಸುತ್ತುತ್ತಿವೆ. ಜೊತೆಗೆ, ಉರಿದು ಹೋದ ರಾಕೆಟ್‌ಗಳ ಬಿಡಿಭಾಗಗಳು ಸೇರಿ 114 ಬಾಹ್ಯಾಕಾಶ ಅವಶೇಷಗಳು ಭೂಮಿಯನ್ನು ಗಿರಕಿ ಹೊಡೆಯುತ್ತಿವೆ.

ಅಲ್ಲಿಗೆ, ಇಸ್ರೋಕ್ಕೆ ಸೇರಿದ 217 ಬಾಹ್ಯಾಕಾಶ ಪರಿಕರಗಳು ಭೂಮಿಯನ್ನು ಸುತ್ತುತ್ತಿರುವುದಾಗಿ ನಾಸಾ ನಿಯತಕಾಲಿಕೆಯಲ್ಲಿ ತಿಳಿಸಲಾಗಿದ್ದು, ತನ್ನ ಬಾಹ್ಯಾಕಾಶ ಅವಶೇಷಗಳನ್ನು ಕಡಿಮೆ ಮಾಡುವಲ್ಲಿ ಇಸ್ರೋ ನಿರತವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಂಕಿ-ಅಂಶ:
217-ಭೂಮಂಡಲ ಸುತ್ತುತ್ತಿರುವ ಇಸ್ರೋ ಪರಿಕರಗಳ ಸಂಖ್ಯೆ

103-ಬಳಕೆಯಲ್ಲಿರುವ, ಬಳಕೆಯಲ್ಲಿರದ ಇಸ್ರೋ ಉಪಗ್ರಹಗಳು

Advertisement

114-ರಾಕೆಟ್‌ ಅವಶೇಷ ಸೇರಿ ಇನ್ನಿತರ ಯಾಂತ್ರಿಕ ಅವಶೇಷಗಳು

Advertisement

Udayavani is now on Telegram. Click here to join our channel and stay updated with the latest news.

Next