Advertisement

2018ರ ಡೇವಿಸ್‌ ಕಪ್‌: ಮೊದಲ ಸುತ್ತು: ಭಾರತಕ್ಕೆ ಬೈ

09:45 AM Sep 22, 2017 | Team Udayavani |

ಲಂಡನ್‌: ಟೆನಿಸ್‌ನ ವಿಶ್ವಕಪ್‌ ಎಂದೇ ಹೇಳಲ್ಪಡುವ ಡೇವಿಸ್‌ ಕಪ್‌ ಸ್ಪರ್ಧೆಯ ಮುಂದಿನ ವರ್ಷದ ಸ್ಪರ್ಧೆಗಳ ಡ್ರಾ ನಡೆದಿದ್ದು ಏಶ್ಯ/ಓಶಿಯಾನಿಯಾ ಬಣ ಒಂದರಲ್ಲಿ ಅಗ್ರ ಶ್ರೇಯಾಂಕದ ಭಾರತಕ್ಕೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದೆ. ಎಡ್ಮಂಟನ್‌ನಲ್ಲಿ ನಡೆದ ವಿಶ್ವ ಬಣ ಪ್ಲೇ ಆಫ್ನಲ್ಲಿ ಆತಿಥೇಯ ಕೆನಡ ತಂಡ ದೆದುರು 2-3 ಅಂತರದಿಂದ ಸೋತ ಭಾರತವು ಏಶ್ಯ ವಲಯಕ್ಕೆ ಜಾರಿತ್ತು. 

Advertisement

ಡ್ರಾದ ಅಗ್ರ ಅರ್ಧದಲ್ಲಿ ಕಾಣಿಸಿ ಕೊಂಡಿರುವ ಚೀನವು ಆತಿಥೇಯ ನ್ಯೂಜಿಲ್ಯಾಂಡ್‌ ತಂಡವನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದೆ. ಈ ಹೋರಾಟ ಮುಂದಿನ ವರ್ಷದ ಫೆಬ್ರವರಿ 2ರಿಂದ 4ರ ವರೆಗೆ ನಡೆಯಲಿದೆ. ಈ ಹೋರಾಟ ದಲ್ಲಿ ಗೆಲುವು ಸಾಧಿಸುವ ತಂಡ ದ್ವಿತೀಯ ಸುತ್ತಿನಲ್ಲಿ ಭಾರತವನ್ನು ಎದುರಿಸಲಿದೆ.

ಭಾರತವು ಈಗಾಗಲೇ ಚೀನ (ಮಾರ್ಚ್‌ 2005-ಹೊಸದಿಲ್ಲಿ) ಮತ್ತು ನ್ಯೂಜಿಲ್ಯಾಂಡ್‌ (ಫೆಬ್ರವರಿ 2017- ಪುಣೆ) ತಂಡದ ಆತಿಥ್ಯ ವಹಿಸಿದ್ದರಿಂದ ಭಾರತವು ವಿದೇಶದಲ್ಲಿಯೇ ದ್ವಿತೀಯ ಸುತ್ತಿನ ಹೋರಾಟವನ್ನು ಆಡಬೇಕಾಗಿದೆ. ದ್ವಿತೀಯ ಸುತ್ತು ಎಪ್ರಿಲ್‌ 6ರಿಂದ 8ರವರೆಗೆ ನಡೆಯಲಿದೆ.

ಎಲೈಟ್‌ 16 ರಾಷ್ಟ್ರಗಳು ಭಾಗವಹಿಸುವ ಎಲೈಟ್‌ ವಿಶ್ವ ಬಣಕ್ಕೆ ತೇರ್ಗಡೆಯಾಗಲು ಭಾರತ ನಾಲ್ಕು ಬಾರಿ ಪ್ರಯತ್ನ ನಡೆ ಸಿತ್ತು. ಆದರೆ ಯಶಸ್ಸು ಪಡೆಯದೆ ನಿರಾಸೆ ಅನುಭವಿಸಿದೆ. ಭಾರತವು 2014ರಲ್ಲಿ ಸರ್ಬಿಯಾ, 2015ರಲ್ಲಿ ಜೆಕ್‌ ಗಣರಾಜ್ಯ ಮತ್ತು ಕಳೆದ ವರ್ಷ ಕೆನಡಕ್ಕೆ ಶರಣಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next