ಅವರು ಶನಿವಾರ ನಗರದ ಟಿಎಂಎಸ್ ಸಭಾಂಗಣದಲ್ಲಿ ೭೦ನೇ ಸಹಕಾರಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ನಿಷ್ಠಾವಂತ ಸದಸ್ಯರಿಗೆ ಸಮ್ಮಾನ, ಉಪನ್ಯಾಸ, ಗಾನ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
Advertisement
ನಮ್ಮ ಭಾರತೀಯರ ದರ್ಶನವನ್ನು ಉಳಿದವರು ಕೂಡ ಜಾರಿಗೆ ತಂದಿರಬಹುದು. ಆದರೆ, ಇಡೀ ವಿಶ್ವಕ್ಕೆ ಸಹಕಾರಿ ತತ್ವ ಕೊಟ್ಟಿದ್ದು ಭಾರತ. ದುಡಿಯುವ ಮನಸ್ಸುಗಳು ಒಂದಾಗುವದೇ ಸಹಕಾರ. ಹಂಚಿ ತಿನ್ನುವ ಸಂಯಮ ಇಲ್ಲಿದೆ. ಟಿಎಂಎಸ್ ಸಂಸ್ಥೆ ಸಹಕಾರಿ ಕ್ಷೇತ್ರಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಯಾರೂ ಸೌಜನ್ಯ ಮರೆತು ಕೆಲಸ ಮಾಡುವದಿಲ್ಲ ಎಂದ ಕೆರೇಕೈ ಅವರು, ಟಿಎಂಎಸ್ ಸಂಘವನ್ನು ನಮ್ಮ ಸಂಘ ಎಂದು ಭಾವಿಸುತ್ತೆವೆ. ಟಿಎಂಎಸ್ ಹೇಗೆ ಇರುತ್ತದೋ ಹಾಗೇ ನಮ್ಮ ಮನೆ, ಹಾಗೂ ಮನಸ್ಸು ಇಟ್ಟವರು ಎಂದು ಭರವಸೆ ಇಟ್ಟವರು. ನಮ್ಮ ಮನಸ್ಸು ಹಾಳಾದರೆ ಮನೆ ಹಾಳಾಗುತ್ತದೆ. ಮನೆ ಹಾಳಾದರೆ ಊರು, ಸಂಘಗಳು ಹಾಳಾಗುತ್ತವೆ. ಇದು ಹಾಳಾಗದಂತೆ ನಾಗರೀಕ ಹೊಣೆಗಾರಿಕೆ ಆಗಿದೆ. ನಿಷ್ಠೆ ಹಾಗೂ ಸಹಕಾರದಿಂದಲೇ ಸಹಕಾರ ವ್ಯವಸ್ಥೆ ಬಲವಾಗಿ ಬೆಳೆದಿದೆ ಎಂದರು.
Related Articles
Advertisement
ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಎಲೆ ಚುಕ್ಕೆ ರೋಗ, ಹಳದಿ ಎಲೆ ಸಮಸ್ಯೆ ಇದೆ. ಬೆಟ್ಟ ಬ ಖರಾಬು ಸಮಸ್ಯೆ ಕೂಡ ಇದೆ. ಬೆಟ್ಟ ಸಮಸ್ಯೆ ನಿವಾರಣೆಗೆ, ಅಡಿಕೆ ರೋಗ ಸಮಸ್ಯೆಯ ಕುರಿತು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದು, ರೈತರು ನಿಶ್ಚಿಂತೆಯಿಂದ ಇರಲು ಸರಕಾರದಿಂದ ಎಷ್ಟು ಸಾಧ್ಯವೋ ಅಷ್ಟೂ ಸಹಕಾರ ನೀಡುತ್ತೇವೆ ಎಂದರು.
ಪ್ರಸಿದ್ಧ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ಟಿಎಂಎಸ್ ಸಹಕಾರಿ ವ್ಯವಸ್ಥೆಯಲ್ಲಿ ಮಾದರಿಯಾಗಿ ಕೆಲಸ ಮಾಡುತ್ತಿದೆ. ಹಿರಿಯ ನಿಷ್ಠಾವಂತ ಸದಸ್ಯರನ್ನು ಗೌರವಿಸುತ್ತಿರುವದು ಶ್ಲಾಘನೀಯ ಎಂದರು.
ಸಹಕಾರಿ ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ, ಮಾರಾಟ ಸಹಕಾರಿ ಸಂಘಗಳು ಕೇವಲ ಬೆಳೆ ಮಾರಾಟ ಮಾಡಿಸದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸದಸ್ಯರ ಸಂಪೂರ್ಣ ಹಿತ ಕಾಯುತ್ತಿವೆ ಎಂದರು. ಸಹಕಾರ ವ್ಯವಸ್ಥೆಯ ಕುರಿತು ಹಿರಿಯ ಸಹಕಾರಿ ಶ್ರೀನಿವಾಸ ಪಿ. ಶೆಟ್ಟಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಹಿರಿಯ ಸಹಕಾರಿ ಜಿ.ಟಿ.ಹೆಗಡೆ ತಟ್ಟಿಸರ ಇದ್ದರು. ಅಧ್ಯಕ್ಷತೆಯನ್ನು ಸಹಕಾರಿ ರತ್ನ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ವಹಿಸಿದ್ದರು.
ಮುಖ್ಯ ಕಾರ್ಯನಿರ್ವಾಹಕ ಎಂ.ಎ.ಹೆಗಡೆ ಸ್ವಾಗತಿಸಿದರು. ಎಂ.ಪಿ.ಹೆಗಡೆ ಹೊನ್ನೆಕಟ್ಟ ವಂದಿಸಿದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿದರು. ಇದೇ ವೇಳೆ ನಿಷ್ಠಾವಂತ ಸದಸ್ಯರಾದ ದಾಮೋದರ ಸ್ವಾದಿ ಆಲೇಸರ, ಕೇಶವ ಹೆಗಡೆ ಕೆಶಿನಮನೆ, ಗೋಪಾಲಕೃಷ್ಣ ಹೆಗಡೆ ಹೊರಾಲೆ, ಗೋವಿಂದ ಹೆಗಡೆ ಪುಟ್ಟಣಮನೆ, ಗಣೇಶ ಹೆಗಡೆ ಕಾಟಿಮನೆ, ಉಮಾಮಹೇಶ್ವರ.ತಿ. ಹೆಗಡೆ ಕೊಪ್ಪರಗದ್ದೆ, ಗಣಪತಿ ಹೆಗಡೆ ಕೊರ್ಟಿಬೈಲ್, ಮಹಾಬಲೇಶ್ವರ ಹೆಗಡೆ ಬಾಳೇಗದ್ದೆ, ರಘುಪತಿ ಭಟ್ಟ ನಿಡಗೋಡ, ರಾಮಚಂದ್ರ ಹೆಗಡೆ ಕಡಕಿನಬೈಲು, ಮಂಜುನಾಥ ಶೇಟ್ ಹೆಬ್ಬಳ್ಳಿ, ರಾಜಶೇಖರ ಗೌಡ ಲಿಂಗನಮಟ್ಟಿ, ವೆಂಕಟ್ರಮಣ ಭಟ್ಟ ಶಿರಗುಣಿ, ರಾಮನಾಥ ಹೆಗಡೆ ಬೆಂಗಳಿ ಓಣಿಕೇರಿ, ಭಾಸ್ಕರ ಹೆಗಡೆ ನಾಡಗುಳಿ, ಮೀಟು ಗಿಡ್ಡು ಮರಾಠಿ ಬೆಣಗಾಂವ, ಶ್ರೀಪಾದ ಹೆಗೆಡೆ ಚಿಳಗಾರ, ಸುಶೀಲಾ ಹೆಗಡೆ ಕೊಟ್ಟೆಗದೆ, ಖರೀದಿದಾರರಾದ ಗಣಪತಿ ಹೆಗಡೆ ಊರತೋಟ, ಅಷ್ಟಾಕ್ ಸಿದ್ಧಿಕ್ ಖೋಬ್ರಾ ಅವರನ್ನು ಗೌರವಿಸಲಾಯಿತು.
ಬಳಿಕ ಪ್ರಸಿದ್ಧ ಭಾಗವತ ಹಿಲ್ಲೂರು ರಾಮಕೃಷ್ಣ, ಶ್ರೀರಕ್ಷಾ ಬಾಗಿನಕಟ್ಟ ಅವರಿಂದ ಗಾನ ವೈಭವ ನಡೆಯಿತು. ಹಿಮ್ಮೇಳದಲ್ಲಿ ಅನಿರುದ್ಧ ವರ್ಗಾಸರ, ಪ್ರಸನ್ನ ಭಟ್ಟ ಹೆಗ್ಗಾರ ಸಹಕಾರ ನೀಡಿದರು. ಯಕ್ಷಗಾನದ ಪ್ರಸಿದ್ಧ ಪದ್ಯಗಳು ಪ್ರೇಕ್ಷಕರಲ್ಲಿ ಮುದ ನೀಡಿದವು.