ಎಲ್ಲ ವೈವಿಧ್ಯಗಳನ್ನು ಒಂದೆಡೆ ಸೇರಿಸುವ “ಇಂಡಿಯಾ ಫ್ಯೂಷನ್’ ಎಂಬ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು, ಭಾರತದ ನಾಲ್ಕೂ ದಿಕ್ಕುಗಳ ಜಾನಪದ ಸಂಗೀತ ವೈಭವ ಇಲ್ಲಿ ಅನಾವರಣಗೊಳ್ಳಲಿದೆ.
ಭಾರತ, ಒಂದು ದೇಶವಾದರೂ, ಇಲ್ಲಿನ ಪ್ರತಿ ಪ್ರಾಂತ್ಯವೂ ವಿಭಿನ್ನ ಸಂಸ್ಕೃತಿ ಹೊಂದಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ ರಾಜ್ಯಗಳ ಭಾಷೆ, ವೇಷ ಭೂಷಣ, ಸಂಸ್ಕೃತಿ, ಸಂಗೀತ ಎಲ್ಲವೂ ಬೇರೆ ಬೇರೆ. ಈ ಎಲ್ಲ ವೈವಿಧ್ಯಗಳನ್ನು ಒಂದೆಡೆ ಸೇರಿಸುವ “ಇಂಡಿಯಾ ಫ್ಯೂಷನ್’ ಎಂಬ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು, ಭಾರತದ ನಾಲ್ಕೂ ದಿಕ್ಕುಗಳ ಜಾನಪದ ಸಂಗೀತ ವೈಭವ ಇಲ್ಲಿ ಅನಾವರಣಗೊಳ್ಳಲಿದೆ.
ಶನಿವಾರ ಸಂಜೆ “ಈಸ್ಟ್ ಇಂಡಿಯಾ ಮೀಟ್ಸ್ ವೆಸ್ಟ್ ಇಂಡಿಯಾ’ ಪರಿಕಲ್ಪನೆಯಲ್ಲಿ, ಮೂರಾಲಾಲಾ ಮಾರ್ವಾಡ ಎಂಬ ಗುಜರಾತಿ ಬ್ಯಾಂಡ್ ಪಶ್ಚಿಮವನ್ನು ಪ್ರತಿನಿಧಿಸಿದರೆ, ಪೂರ್ವ ಭಾಗದ “ಮತ್ಛರಂಗ’ ಎಂಬ ಬಂಗಾಳಿ ಬ್ಯಾಂಡ್ ತಮ್ಮ ಪ್ರಾಂತ್ಯದ ಸಂಗೀತ ಸುಧೆ ಹರಿಸಲಿದೆ. ಮರುದಿನ ಸಂಜೆ, “ನಾರ್ತ್ ಇಂಡಿಯಾ ಮೀಟ್ಸ್ ಸೌತ್ ಇಂಡಿಯಾ’ ಕಾರ್ಯಕ್ರಮದಲ್ಲಿ, ಭಕ್ತಿ ಪಂಥದ ಹಿಂದಿ ಹಾಡುಗಳನ್ನು ಹಾಡುವ “ಕಬೀರ್ ಕಫೆ’ ಬ್ಯಾಂಡ್ ಹಾಗೂ ನಮ್ಮ ಬೆಂಗಳೂರಿನ “ಮಂಟಾಲಾಯಿ’ ಎಂಬ ಕನ್ನಡ-ತಮಿಳು ಬ್ಯಾಂಡ್ ಪ್ರದರ್ಶನ ನೀಡಲಿವೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ.
ಎಲ್ಲಿ?: ದಿ ಫೋರಮ್ ನೇಬರ್‌ಹುಡ್ ಮಾಲ್, ಪ್ರಸ್ಟೀಜ್ ಓಝೊàನ್, ವೈಟ್‌ಫೀಲ್ಡ್
ಯಾವಾಗ?: ನ.17-18 ಸಂಜೆ 5.30-9 | ಪ್ರವೇಶ: ಉಚಿತ