Advertisement

ಆಹಾರ ಉತ್ಪಾದನೆ ದಾಖಲೆ?

06:55 AM Dec 18, 2017 | Harsha Rao |

ಹೊಸದಿಲ್ಲಿ: ಕಳೆದ ವರ್ಷದಂತೆಯೇ ಪ್ರಸಕ್ತ ಸಾಲಿನಲ್ಲಿಯೂ ಆಹಾರ ಧಾನ್ಯಗಳ ಉತ್ಪಾದನೆ 275 ದಶಲಕ್ಷ ಟನ್‌ ತಲುಪುವ ನಿರೀಕ್ಷೆಯಿದೆ. ಉತ್ತಮ ಪ್ರಮಾಣದಲ್ಲಿ ಸುರಿದ ಮಳೆ ಕೂಡ ಇದಕ್ಕೆ ಕಾರಣ.

Advertisement

ಆದರೆ, ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಪ್ರಮಾಣದಲ್ಲಿ ಬೆಲೆ ಕುಸಿತವಾದೀತೇ ಎನ್ನುವುದು ರೈತರ ಆತಂಕವಾಗಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು 90 ಸಾವಿರ ಕೋಟಿ ರೂ.ಗಳಷ್ಟು ಸಾಲ ಮನ್ನಾ ಮಾಡುವ ಮೂಲಕ ತಮ್ಮ ತಮ್ಮ ರಾಜ್ಯಗಳಲ್ಲಿನ ರೈತರಿಗೆ ನೆರವಾಗಿವೆ ಎನ್ನುವುದು ಗಮನಾರ್ಹ. ಕಳೆದ 2 ವರ್ಷಗಳಿಂದ ಆಹಾರ ಉತ್ಪಾದನೆ ಪ್ರಮಾಣ ಗರಿಷ್ಠವಾಗಿದ್ದರೂ, ರೈತರ ಆದಾಯದಲ್ಲಿ ಸುಧಾರಣೆ ಕಂಡಿಲ್ಲ ಎನ್ನುತ್ತಾರೆ ತಜ್ಞರು.

ಕರ್ನಾಟಕ,  ಛತ್ತೀಸ್‌ಗಢ ಮತ್ತು ತಮಿಳುನಾಡಿನ ಕೆಲ ಭಾಗಗಳಲ್ಲಿ ಕೊಂಚ ಬರದ ಛಾಯೆ ಕಂಡು ಬಂದಿದ್ದರೆ, ಅಸ್ಸಾಂ, ಬಿಹಾರ, ಗುಜರಾತ್‌ ಮತ್ತು ರಾಜಸ್ಥಾನಗಳಲ್ಲಿ ಧಾರಾಕಾರ ಮಳೆಯಾಗಿ ಪ್ರವಾಹ ಉಂಟಾಗಿತ್ತು. ಇದರ ಹೊರತಾಗಿಯೂ ದೇಶದಲ್ಲಿ ಆಹಾರ ಉತ್ಪಾದನೆ ಗರಿಷ್ಠ ಪ್ರಮಾಣದಲ್ಲಿತ್ತು. ಕೇಂದ್ರ ಕೃಷಿ ಖಾತೆ ಕಾರ್ಯದರ್ಶಿ ಶೋಭನಾ ಕೆ ಪಟ್ಟನಾಯಕ್‌ ಮಾತನಾಡಿ, 2018ನೇ ವರ್ಷ ಕೃಷಿ ಕ್ಷೇತ್ರಕ್ಕೆ ಅತ್ಯಂತ ಹೆಚ್ಚು ಆಶಾದಾಯಕ ವರ್ಷವಾಗಲಿದೆ. ಬೇಡಿಕೆ ಮತ್ತು ಬೆಲೆಯ ನಡುವೆ ಸಮಾನತೆ ಇರಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next