Advertisement
ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯವು ವಾರ್ಷಿಕ ನವೀಕರಣದ ಬಳಿಕ ತನ್ನ ರೇಟಿಂಗ್ ಅನ್ನು 113ರಿಂದ 118ಕ್ಕೇರಿಸಿ ಅಗ್ರಸ್ಥಾನಕ್ಕೇರಿದ್ದು ಪಾಕಿಸ್ಥಾನ ಮತ್ತು ಭಾರತಕ್ಕಿಂತ ಸ್ವಲ್ಪಮಟ್ಟಿನ ಮುನ್ನಡೆ ಗಳಿಸಿಕೊಂಡಿದೆ. 116 ಅಂಕ ಹೊಂದಿರುವ ಪಾಕಿಸ್ಥಾನ ದ್ವಿತೀಯ ಮತ್ತು ಭಾರತ (115 ಅಂಕ) ಮೂರನೇ ಸ್ಥಾನಕ್ಕೆ ಜಾರಿದೆ.ಐಸಿಸಿ ಬಿಡುಗಡೆ ಮಾಡಿದ ಪಟ್ಟಿಯಂತೆ ವಾರ್ಷಿಕ ರ್‍ಯಾಂಕಿಂಗ್ ನವೀಕರಣದ ಮೊದಲು ಆಸ್ಟ್ರೇಲಿಯಾವು 113 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು, ದಶಮಾಂಶ ಎಣಿಕೆಯಲ್ಲಿ ಭಾರತವು ಅವರ ಹಿಂದೆ ಇತ್ತು.