Advertisement
ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಳಿ ಶನಿವಾರ ನಡೆದ 74ನೇ ಸ್ವಾತಂತ್ರ್ಯೋತ್ಸವದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ರಾಷ್ಟ್ರಪತಿಯವರ ಭಾಷಣದಲ್ಲಿ ಪ್ರಸ್ತಾವಿಸಿದಂತೆ (ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸ್ವಾತಂತ್ರ್ಯೋತ್ಸವ ಮುನ್ನಾ ದಿನ ಮಾಡಿದ ಭಾಷಣ) 2020 ಅಸಾಮಾನ್ಯ ವರ್ಷವಾಗಿದೆ. ಭಾರತೀಯರಿಗೆ ಹಾಗೂ ಚೀನದಲ್ಲಿರುವ ನಮಗೂ ಇದು ಅನ್ವಯಿಸುತ್ತದೆ. ಈ ಎರಡು ಸವಾಲುಗಳನ್ನು ನಾವು ಎದುರಿಸಬೇಕಾಗಿದೆ. ಇದಕ್ಕಾಗಿ ಪರಿಶ್ರಮ ಹಾಗೂ ತ್ಯಾಗ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಸಾಕಷ್ಟು ವಲಸಿಗರ ಕುಟುಂಬದ ಸದಸ್ಯರು ವೀಸಾ ಸಮಸ್ಯೆಯಿಂದ ಭಾರತದಲ್ಲಿ ಸಿಲುಕಿಕೊಂಡಿದ್ದಾರೆ. ಕೋವಿಡ್ ಹಿನ್ನೆಲೆ ಯಲ್ಲಿ ವಿಮಾನಗಳ ವ್ಯತ್ಯಯದಿಂದ ಈ ರೀತಿ ಆಗಿದೆ ಎಂದು ತಿಳಿಸಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನ ಸರಕಾರ ಸಾಕಷ್ಟು ವಿಭಿನ್ನ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಇವುಗಳನ್ನು ನಾವು ಪಾಲಿಸ ಬೇಕಾಗಿದೆ. ಇಲ್ಲಿ ಸಾಕಷ್ಟು ಬದಲಾವಣೆ ಗಳಾ ಗಿವೆ. ಇವುಗಳು ನಮ್ಮ ನಿತ್ಯದ ಜೀವನದ ಮೇಲೆ ಪರಿಣಾಮ ಬೀರಲಿವೆ ಎಂದು ವಿಕ್ರಮ್ ಮಿಸ್ರಿ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಪಾಕಿಸ್ಥಾನದ ಕದನ ವಿರಾಮ ಉಲ್ಲಂಘನೆಯಿಂದ ರೋಸಿ ಹೋಗಿರುವ ಗಡಿ ಗ್ರಾಮದ ಜನರು ಸ್ವಾತಂತ್ರ್ಯ ದಿನವಾದ ಶನಿವಾರ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಪಾಕಿಸ್ಥಾನದ ಸೇನೆಗೆ ನಮ್ಮ ಯೋಧರನ್ನು ಎದುರಿಸುವ ತಾಕತ್ತಿಲ್ಲ. ಹೀಗಾಗಿ, ಅವರು ಗಡಿಗ್ರಾಮದ ಅಮಾಯಕ ಜನರನ್ನು ಕೊಲ್ಲುತ್ತಿದ್ದಾರೆ ಎಂದು ಜಮ್ಮು-ಕಾಶ್ಮೀರದ ಪೂಂಛ… ವಲಯದ ಗಡಿ ನಿಯಂತ್ರಣ ರೇಖೆ ಬಳಿಯ ಗ್ರಾಮಸ್ಥರು ಕಿಡಿಕಾರಿದ್ದಾರೆ. ಜತೆಗೆ, ಪಾಕ್ ನಡೆಸುತ್ತಿರುವ ಅಪ್ರಚೋದಿತ ದಾಳಿಗಳು ನಮ್ಮ ಬದುಕನ್ನೇ ದುಸ್ತರವಾಗಿಸಿದೆ ಎಂದೂ ನೋವು ತೋಡಿಕೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ನಾನು ನಮ್ಮ ಕುಟುಂಬದ ಮೂವರನ್ನು ಕಳೆದು ಕೊಂಡೆ. ಪಾಕಿಸ್ಥಾನದ ಸೇನೆ ಸಿಡಿಸಿದ ಶೆಲ್‌ನಿಂದಾಗಿ ಕುಟುಂಬದ ಮೂವರು ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದರು. ದಾಳಿ ನಡೆದ 6-7 ನಿಮಿಷಗಳಲ್ಲಿ ಯೋಧರು ಬಂದು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಿ ಅವರು ಅಸುನೀಗಿದ್ದರು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಪ್ರತಿ ಬಾರಿಯೂ ಪಾಕ್ ದಾಳಿ ನಡೆಸಿದಾಗ, ನಮ್ಮ ಸೇನೆಯೂ ತಕ್ಕ ಪ್ರತ್ಯುತ್ತರ ನೀಡುತ್ತದೆ. ಅಲ್ಲದೆ ಯೋಧರು ನಮ್ಮ ಸಹಾಯಕ್ಕೆ ತಕ್ಷಣ ಧಾವಿಸುತ್ತಾರೆ ಎಂದೂ ಪೂಂಛ…ನ ಜನರು ನುಡಿದಿದ್ದಾರೆ.