Advertisement

ಬೇರೆ ದೇಶಗಳಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ: ಕಾಂಗ್ರೆಸ್‌

10:27 PM Oct 25, 2022 | Team Udayavani |

ನವದೆಹಲಿ: ಭಾರತವು ಬೇರೆ ದೇಶಗಳಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಈಗಾಗಲೇ ಅನೇಕ ಅಲ್ಪಸಂಖ್ಯಾತರು ದೇಶದ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ ಸೇರಿದಂತೆ ಅನೇಕ ಉನ್ನತ ಹುದ್ದೆಗಳನ್ನು ಆಲಂಕರಿಸಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ.

Advertisement

ಬ್ರಿಟನ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ರಿಶಿ ಸುನಕ್‌ ಅವರು ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಿದ ಮಾದರಿಯನ್ನು ಭಾರತ ಅನುಸರಿಸಬೇಕು ಎಂದು ಕಾಂಗ್ರೆಸ್‌ ನಾಯಕರಾದ ಪಿ.ಚಿದಂಬರಂ ಮತ್ತು ಶಶಿ ತರೂರ್‌ ಹೇಳಿಕೆ ನೀಡಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್‌ ಪಕ್ಷ ಮಂಗಳವಾರ ಹೇಳಿಕೆ ನೀಡಿದೆ.

ಈ ಬಗ್ಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, “ವೈವಿಧ್ಯತೆಯನ್ನು ಗೌರವಿಸುವುದು ಹಲವು ವರ್ಷಗಳಿಂದ ಭಾರತದ ವಿಶಿಷ್ಟ ಲಕ್ಷಣವಾಗಿದೆ. ದೇಶದ ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಅಲ್ಪಸಂಖ್ಯಾತರು ಆಲಂಕರಿಸಿದ್ದಾರೆ.

ಉದಾಹರಣೆಗೆ ಜಾಕೀರ್‌ ಹುಸೇನ್‌, ಫ‌ಕ್ರುದ್ದೀನ್‌ ಅಲಿ ಅಹಮದ್‌, ಎ.ಪಿ.ಜೆ.ಅಬ್ದಲ್‌ ಕಲಾಂ ರಾಷ್ಟ್ರಪತಿಗಳಾಗಿದ್ದಾರೆ. ಬರ್ಕತುಲ್ಲಾ ಖಾನ್‌, ಎ.ಆರ್‌.ಅಂಟುಲೆ ಮುಖ್ಯಮಂತ್ರಿಗಳಾಗಿದ್ದಾರೆ,’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next