Advertisement
ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗಾರರೊಂದಿಗೆ ಮಾತನಾಡಿ ” “ನಾವು ವರದಿಯನ್ನು ಗಮನಿಸಿದ್ದೇವೆ. ಹಿಂದಿನಂತೆ, ವರದಿಯು ಆಳವಾದ ಪಕ್ಷಪಾತ ಧೋರಣೆ ಹೊಂದಿದೆ, ಭಾರತದ ಸಾಮಾಜಿಕ ರಚನೆಯ ಬಗ್ಗೆ ತಿಳುವಳಿಕೆಯನ್ನು ಹೊಂದಿಲ್ಲ, ವೋಟ್‌ಬ್ಯಾಂಕ್ ಪರಿಗಣನೆಗಳು ಮತ್ತು ಸೂಚನೆಯ ದೃಷ್ಟಿಕೋನದಿಂದ ಗೋಚರಿಸುತ್ತದೆ’ ಎಂದು ಹೇಳಿದ್ದಾರೆ.
Related Articles
ಲೆಬನಾನ್ ಮೇಲೆ ಇಸ್ರೇಲ್ ಆಕ್ರಮಣಕ್ಕೆ ಸಜ್ಜಾಗಿರುವ ವೇಳೆ ಅಲ್ಲಿಯ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ರಣಧೀರ್ ಜೈಸ್ವಾಲ್ “2000-3000 ಭಾರತೀಯರು ಅಲ್ಲಿ ವಾಸಿಸುತ್ತಿದ್ದಾರೆ. ನಮ್ಮ ರಾಯಭಾರ ಕಚೇರಿ ಅವರೊಂದಿಗೆ ಸಂಪರ್ಕದಲ್ಲಿದೆ. ನಾವು ಪ್ರಯಾಣದ ಸಲಹೆಯನ್ನು ನೀಡಿಲ್ಲ ಆದರೆ ನಮ್ಮ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ನಮ್ಮವರಿಗೆ ಸಲಹೆ ನೀಡಿದ್ದೇವೆ” ಎಂದು ಹೇಳಿದ್ದಾರೆ.
Advertisement
ಮಾನವೀಯವಾಗಿ ನಡೆಸಿಕೊಳ್ಳಬೇಕುಉತ್ತರ ಇಟಲಿಯಲ್ಲಿ ಸಾವನ್ನಪ್ಪಿದ ಭಾರತೀಯ ಉದ್ಯೋಗಿ ಸತ್ನಾಮ್ ಸಿಂಗ್ ಕುರಿತು ಪ್ರತಿಕ್ರಿಯಿಸಿ ‘ಅವರಿಗೆ ವೈದ್ಯಕೀಯ ಆರೈಕೆಯನ್ನು ಒದಗಿಸಬೇಕಿದ್ದ ಅವರ ಉದ್ಯೋಗದಾತರನ್ನು ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ. ನಾವು ಘಟನೆಯನ್ನು ಖಂಡಿಸುತ್ತೇವೆ. ಕಾರ್ಮಿಕರನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕೆಂದು ನಾವು ಕರೆ ನೀಡುತ್ತೇವೆ. ಅವರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದ್ದೇವೆ’ ಎಂದರು. ಸೌಜನ್ಯದ ಭೇಟಿ
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನೀ ರಾಯಭಾರಿ ನಡೆಸಿದ ಭೇಟಿ ಕೇವಲ ಸೌಜನ್ಯದ ಭೇಟಿಯಾಗಿತ್ತು” ಎಂದು ರಣಧೀರ್ ಜೈಸ್ವಾಲ್ ಹೇಳಿದರು. ಮೀನುಗಾರರ ಕಲ್ಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ
ಶ್ರೀಲಂಕಾದಲ್ಲಿ ಸೆರೆಯಾಗಿರುವ ಭಾರತೀಯ ಮೀನುಗಾರರ ಬಗ್ಗೆ ಪ್ರತಿಕ್ರಿಯಿಸಿ “ನಾವು ಯಾವಾಗಲೂ ನಮ್ಮ ಮೀನುಗಾರರ ಕಲ್ಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದೇವೆ ಮತ್ತು ಅವರನ್ನು ಮರಳಿ ಕರೆತರಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ’ ಎಂದರು.