Advertisement

ಸುನಾಮಿ ಭವಿಷ್ಯ

08:20 AM May 07, 2018 | Karthik A |

2004ರ ಸುನಾಮಿ ಯಾರಿಗೆ ನೆನಪಿಲ್ಲ ಹೇಳಿ? ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡ ಈ ರಕ್ಕಸ ಅಲೆಗಳ ರೌದ್ರಾವತಾರಕ್ಕೆ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಇಂಥ ಸುನಾಮಿ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಸಿಗದೇ ಇದ್ದುದೇ ಅಪಾರ ಸಾವು ನೋವಿಗೆ ಕಾರಣ. ಈಗ ಭೂವಿಜ್ಞಾನ ಇಲಾಖೆ ಅಡಿ ಬರುವ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರ (INCOIS) ಸುನಾಮಿ ಕುರಿತು ನಿರ್ದಿಷ್ಟ ಮುನ್ನೆಚ್ಚರಿಕೆ ನೀಡುವಂಥ ಹೊಸ ವ್ಯವಸ್ಥೆ ಅಭಿವೃದ್ಧಿಪಡಿಸಿದೆ.

Advertisement

ಏನಿದು ವ್ಯವಸ್ಥೆ?
ಸುನಾಮಿಯ ತೀವ್ರತೆ ಕುರಿತು ಲೆವೆಲ್‌-3 ಅಲರ್ಟ್‌ ನೀಡುವ ವ್ಯವಸ್ಥೆ ಇದಾಗಿದೆ. ಇದರಿಂದಾಗಿ ಸಂಭಾವ್ಯ ಸುನಾಮಿಯ ಬಗ್ಗೆ ಹಾಗೂ ಅದರಿಂದ ಉಂಟಾಗುವ ಅಪಾಯದ ಕುರಿತು ಮೊದಲೇ ಮಾಹಿತಿ ಸಿಗುತ್ತದೆ. ಮುಳುಗಡೆ ಆಗಬಹುದಾದ ಪ್ರದೇಶದ ವ್ಯಾಪ್ತಿಯ ವಿವರವೂ ಸಿಗುವ ಕಾರಣ, ಹೆಚ್ಚಿನ ಸಾವು-ನೋವು, ಆಸ್ತಿಪಾಸ್ತಿ ನಾಶವನ್ನು ತಪ್ಪಿಸಬಹುದಾಗಿದೆ. ಪ್ರಸಕ್ತ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಸೇವೆ ಕಾರ್ಯಾರಂಭ ಆಗಲಿದೆ.

ಯಾವ್ಯಾವ ಮಾಹಿತಿ ನೀಡಬಹುದು?
– ಲೆವೆಲ್‌ 3 ಅಲರ್ಟ್‌: ರಕ್ಕಸ ಅಲೆಯು ತೀರಕ್ಕೆ ಅಪ್ಪಳಿಸಿದ ಬಳಿಕ ಎಷ್ಟು ದೂರ ಸಾಗಬಹುದು ಎಂಬ ಮಾಹಿತಿ

– ಲೆವೆಲ್‌ 2 ಅಲರ್ಟ್‌: ಸಂಭಾವ್ಯ ಸುನಾಮಿಯ ಬಗ್ಗೆ , ಅದರ ಅಲೆಗಳ ಎತ್ತರದ ಬಗ್ಗೆ ಮಾಹಿತಿ

– ಲೆವೆಲ್‌ 1 ಅಲರ್ಟ್‌: ಸುನಾಮಿಯ ತೀವ್ರತೆಯ ವಿವರಣೆ ಸುನಾಮಿ ಅಪ್ಪಳಿಸುವಂಥ ನಿರ್ದಿಷ್ಟ ಪ್ರದೇಶಗಳ ಬಗ್ಗೆ ಮಾಹಿತಿ

Advertisement

2004ರಲ್ಲಿ ಸುನಾಮಿ ಕರಾವಳಿಯ ಎಷ್ಟು ಭಾಗವನ್ನು ಮುಳುಗಡೆ ಮಾಡಬಹುದು ಎಂದು ಹೇಳಲು ಸಾಧ್ಯ ಆಗಿರಲಿಲ್ಲ. ಆದರೆ, ಇನ್ನು ಅಲೆಗಳು ನೈಸರ್ಗಿಕ ಗಡಿ ದಾಟಿ ಎಷ್ಟು ಮುಂದೆ ಸಾಗಬಹುದು ಎಂದು ತಿಳಿಸಬಹುದು.
– SSC ಶೆಣೈ, ಐಎನ್‌ಸಿಒಐಎಸ್‌ ನಿರ್ದೇಶಕ

2004, ಡಿ.16ರಂದು ಸುನಾಮಿ ಅಪ್ಪಳಿಸುವ ವೇಳೆ ಉಂಟಾದ ಭೂಕಂಪದ ತೀವ್ರತೆ : 9.1ರಿಕ್ಟರ್‌ ಮಾಪಕದಲ್ಲಿ

ಆಗ ಅಲೆಗಳ ಎತ್ತರ : 30ಮೀಟರ್‌

ಅಂದಿನ ಸುನಾಮಿಯಲ್ಲಿ ಮೃತಪಟ್ಟವರ ಸಂಖ್ಯೆ: 02ಲಕ್ಷ

Advertisement

Udayavani is now on Telegram. Click here to join our channel and stay updated with the latest news.

Next