Advertisement

ಅಮೆರಿಕ ತಂಡಕ್ಕೆ ವೀಸಾ ನಿರಾಕರಿಸಿದ ಭಾರತ

07:48 AM Jun 13, 2020 | mahesh |

ಹೊಸದಿಲ್ಲಿ: ಭಾರತದಲ್ಲಿ ಇಸ್ಲಾಮೊಫೋಬಿಯಾ ಇದೆಯೆಂದು ಅಪಪ್ರಚಾರ ನಡೆಸಿದ್ದ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (ಯುಎಸ್‌ಸಿಐಆರ್‌ಎಫ್) ತಂಡಕ್ಕೆ ಭಾರತ ಸರಕಾರ ವೀಸಾ ನಿರಾಕರಿಸಿದೆ.

Advertisement

ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, “ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅಧ್ಯಯನಕ್ಕೆ ಭಾರತಕ್ಕೆ ಭೇಟಿ ನೀಡಲು ಯತ್ನಿಸುತ್ತಿರುವ ಯುಎಸ್‌ಸಿಐಆರ್‌ಎಫ್ ತಂಡಕ್ಕೆ ವೀಸಾ ನಿರಾಕರಿಸಿದ್ದೇವೆ. ವಿದೇಶಿ ತಂಡಗಳು ಬಂದು ಪೂರ್ವಗ್ರಹಪೀಡಿತ ವರದಿಗಳನ್ನು ನೀಡು ವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಭಾರತಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತಪ್ಪಾಗಿ ನಿರೂಪಿ ಸುವ ಇಂಥ ಪ್ರಯತ್ನಗಳನ್ನು ನಿರಾಕರಿಸು ತ್ತೇವೆ’ ಎಂದು ಖಡಕ್ಕಾಗಿ ಹೇಳಿದ್ದಾರೆ. ಫೆಬ್ರವರಿಯಲ್ಲಿ ದೆಹಲಿಯಲ್ಲಿ ಪೌರತ್ವ ತಿದ್ದು ಪಡಿ ಕಾಯ್ದೆ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆ ದಿತ್ತು. ಈ ಮಸೂದೆಗೆ ಯುಎಸ್‌ಸಿಐಆರ್‌ಎಫ್ ಮೊದಲಿಂದಲೂ ತೀವ್ರ ವಿರೋಧ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next