Advertisement

ಭಾರತದಲ್ಲಿ ಸಹಸ್ರ ಗಡಿ ದಾಟಿದ ಕೋವಿಡ್ 19 ಸೋಂಕಿತರ ಸಂಖ್ಯೆ ; 27 ಸಾವು

09:11 AM Mar 30, 2020 | Hari Prasad |

ನವದೆಹಲಿ: ಭಾರತದಲ್ಲಿ ಕೊವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟಿದೆ. ಭಾನುವಾರ ರಾತ್ರಿ 10 ಗಂಟೆಗಳವರೆಗಿನ ತಾಜಾ ವರದಿಯಂತೆ ಭಾರತದಲ್ಲಿ 1085 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

Advertisement

ಕೇರಳದಲ್ಲಿ ಅತೀ ಹೆಚ್ಚಿನ ಅಂದರೆ 202 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದರೆ ಆ ಬಳಿಕ ಮಹಾರಾಷ್ಟ್ರದಲ್ಲಿ 196 ಜನ ಕೋವಿಡ್ 19 ವೈರಸ್ ಸೋಂಕಿತರಾಗಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿ ಕರ್ನಾಟಕ ರಾಜ್ಯವಿರುವುದು ನಿಜವಾಗಿಯೂ ಕಳವಳಕಾರಿಯಾಗಿದೆ. ನಮ್ಮ ರಾಜ್ಯದಲ್ಲಿ ಇದುವರೆಗೆ 83 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಈ ಮೇಲಿನ ಮೂರು ರಾಜ್ಯಗಳನ್ನು ಹೊರತುಪಡಿಸಿದರೆ ಉತ್ತರ ಪ್ರದೇಶ (69), ತೆಲಂಗಾಣ (67), ಗುಜರಾತ್ (58), ರಾಜಸ್ಥಾನ (56), ತಮಿಳುನಾಡು (50) ಹಾಗೂ ದೆಹಲಿ (49) ಅತೀ ಹೆಚ್ಚಿನ ಸೋಂಕಿತರನ್ನು ಹೊಂದಿರುವ ರಾಜ್ಯಗಳಾಗಿವೆ.

ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 48 ವಿದೇಶಿಯರು ಕೋವಿಡ್ 19 ಸೋಂಕಿತರಾಗಿ ಐಸೊಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಅತೀ ಹೆಚ್ಚಿನ ಅಂದರೆ ಒಟ್ಟು 14 ವಿದೇಶಿಗರು ಹರ್ಯಾಣ ರಾಜ್ಯದಲ್ಲಿದ್ದಾರೆ. ಉಳಿದಂತೆ ತೆಲಂಗಾಣ (10), ಕೇರಳ (8), ತಮಿಳುನಾಡು (6), ಮಹಾರಾಷ್ಟ್ರ (3), ರಾಜಸ್ಥಾನ (2), ದೆಹಲಿ, ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಗೋವಾ ರಾಜ್ಯಗಳಲ್ಲಿ ತಲಾ ಒಬ್ಬೊಬ್ಬರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next