Advertisement

ಸುಧಾರಣೆಗಿದ್ದ ಅತ್ಯುತ್ತಮ ಅವಕಾಶ ಹಾಳು: ರುಚಿರಾ ಕಾಂಬೋಜ್‌ ಕಿಡಿ

09:35 PM Jun 30, 2023 | Team Udayavani |

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆ, ಖಾಯಂ ಸದಸ್ಯತ್ವಕ್ಕಾಗಿ ಆಗ್ರಹಿಸುತ್ತಿರುವ ಭಾರತ, ವಿಶ್ವಸಂಸ್ಥೆಯ ಸ್ಥಿತಿಯಲ್ಲಿ ಬದಲಾವಣೆಯಾಗದಿರುವುದನ್ನು ಕಠಿಣ ಶಬ್ದಗಳಲ್ಲಿ ಟೀಕಿಸಿದೆ. ಭದ್ರತಾ ಸುಧಾರಣೆಗೆ ಸಂಬಂಧಿಸಿದಂತೆ ಐಜಿಎನ್‌ (ಇಂಟರ್‌ ಗವರ್ನಮೆಂಟಲ್‌ ನೆಗೋಷಿಯೇಶನ್ಸ್‌) ವ್ಯವಸ್ಥೆಯನ್ನೇ ಮುಂದುವರಿಸಲು ವಿಶ್ವಸಂಸ್ಥೆ ತೀರ್ಮಾನ ತೆಗೆದುಕೊಂಡಿದೆ. ಆದರೆ ಐಜಿಎನ್‌ನ ಒಳರಚನೆಯಲ್ಲಿ ಯಾವುದೇ ಮಹತ್ವದ ಬದಲಾವಣೆಗಳಾಗಿಲ್ಲ ಎಂದಿದೆ.

Advertisement

“ಎಂದಿನಂತೆ ನಡೆಯುತ್ತಿರುವ ಈ ಪ್ರಕ್ರಿಯೆಗಳಿಂದಾಗಿ ಒಂದು ದೊಡ್ಡ ಅವಕಾಶ ಹಾಳಾಗಿದೆ, ಇನ್ನೂ 75 ವರ್ಷ ಯಾವುದೇ ಮಹತ್ವವಾದದ್ದನ್ನು ಸಾಧಿಸದೇ ಹೀಗೆಯೇ ಮುಂದುವರಿಯಲಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ಕಿಡಿಕಾರಿದ್ದಾರೆ. ಒತ್ತಡಕ್ಕೆ ಮಣಿದು ಕೈಗೊಳ್ಳುವ ನಿರ್ಧಾರದಿಂದ ಪ್ರಯೋಜನವೇ ಇಲ್ಲವೆಂದಿದ್ದಾರೆ.

ಈ ವರ್ಷ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ 78ನೇ ಅಧಿವೇಶನ ನಡೆಯಲಿದೆ. ಪ್ರಸ್ತುತ ಇರುವ ಐಜಿಎನ್‌ ವ್ಯವಸ್ಥೆಯನ್ನೇ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next