Advertisement

ಗುಡ್ ನ್ಯೂಸ್: ಭಾರತದಲ್ಲಿ ಕೋವಿಡ್ ಸೋಂಕು-ಶೇ.90ರಷ್ಟು ಚೇತರಿಕೆ ಕಂಡ ಮೊದಲ ರಾಜ್ಯ ದೆಹಲಿ

03:18 PM Aug 26, 2020 | Nagendra Trasi |

ನವದೆಹಲಿ: ಇಡೀ ದೇಶದಲ್ಲಿಯೇ ಕೋವಿಡ್ 19ನ ಸೋಂಕಿತರಲ್ಲಿ ಶೇ.90ರಷ್ಟು ಗುಣಮುಖ ಹೊಂದಿದ ರಾಜ್ಯಗಳಲ್ಲಿ ದೆಹಲಿ ಪ್ರಥಮ ಸ್ಥಾನ ಪಡೆದಿದೆ. ಈವರೆಗೆ 1.62 ಲಕ್ಷ ಮಂದಿ ಸೋಂಕಿತರದಲ್ಲಿ 1.46ಲಕ್ಷಕ್ಕೂ ಅಧಿಕ ಜನರು ಗುಣಮುಖರಾಗಿರುವುದಾಗಿ ಘೋಷಿಸಿದೆ.

Advertisement

ಕೋವಿಡ್ 19 ಸೋಂಕಿನ ಅಟ್ಟಹಾಸದ ನಡುವೆ ತಮಿಳುನಾಡು, ಬಿಹಾರ ಮತ್ತು ಹರ್ಯಾಣ ರಾಜ್ಯಗಳಲ್ಲಿ ಶೇ.80ರಷ್ಟು ಗುಣಮುಖರಾಗುತ್ತಿರುವುದಾಗಿ ವರದಿ ತಿಳಿಸಿದೆ. ಇನ್ನುಳಿದ 13 ರಾಜ್ಯಗಳಲ್ಲಿ ಶೇ.70ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವಿವರಿಸಿದೆ.

ಕೋವಿಡ್ 19 ಸೋಂಕಿತರಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದನ್ನು ನಿಸರ್ಗದತ್ತ ಕೊಡುಗೆ ಎಂದು ಹೇಳಬೇಕೇ ವಿನಃ ಬೇರೆ ಯಾವ ಅರ್ಥವನ್ನೂ ಕಲ್ಪಿಸಿಕೊಳ್ಳುವಂತಿಲ್ಲ.

ರಾಷ್ಟ್ರರಾಜಧಾನಿ ಸೇರಿದಂತೆ ಭಾರತದಾದ್ಯಂತ ಆರಂಭದಲ್ಲಿ ಕೋವಿಡ್ 19 ಸೋಂಕಿತರ ಗುಣಮುಖರಾಗುವವರ ಸಂಖ್ಯೆ ತುಂಬಾ ಕಡಿಮೆ ಇತ್ತು. ಯಾಕೆಂದರೆ ಜನರು ಈಗಲೂ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. ಯಾವಾಗ ಸೋಂಕು ಕೊನೆಗೊಳ್ಳುತ್ತದೋ ಯಾರು ಸೋಂಕಿಗೆ ಒಳಗಾಗಿದ್ದಾರೋ ಅವರನ್ನು ಹೊರತುಪಡಿಸಿ ಪ್ರತಿಯೊಬ್ಬರು ಚೇತರಿಸಿಕೊಳ್ಳಲಿದ್ದಾರೆ ಎಂದು ವರದಿ ವಿವರಿಸಿದೆ.

Advertisement

ಕೋವಿಡ್ 19 ಪೀಡಿತ ಸೋಂಕಿತರಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ ಶೇ.1ಕ್ಕಿಂತ ಕಡಿಮೆಯಾಗಿರುವುದಾಗಿದೆ ತಿಳಿಸಿದೆ. ಸೋಂಕು ಕೊನೆಗೊಳ್ಳುವ ಹೊತ್ತಿನಲ್ಲಿ ಶೇ.99ರಷ್ಟು ಜನರು ಚೇತರಿಸಿಕೊಳ್ಳಲಿದ್ದಾರೆ ಎಂದು ಹೇಳಿದೆ.

ಈಗಿರುವ ಸೋಂಕಿತರು ಗುಣಮುಖರಾಗುತ್ತಿರುವಂತೆಯೇ ಅವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಯಾವ ರಾಜ್ಯಗಳಲ್ಲಿ ತುಂಬಾ ವೇಗವಾಗಿ ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚಿ, ಚಿಕಿತ್ಸೆ ನೀಡುತ್ತಿದ್ದಾರೋ ಆ ಪ್ರದೇಶದಲ್ಲಿ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದಾಗಿ ಹೇಳಿದೆ.

ಭಾರತದಲ್ಲಿ ಶೇ.76.3ರಷ್ಟು ಸೋಂಕಿತರು ಚೇತರಿಸಿಕೊಂಡಿದ್ದಾರೆ. ದೇಶದ ಸುಮಾರು 32.34 ಲಕ್ಷ ಸೋಂಕಿತರಲ್ಲಿ ಈವರೆಗೆ 26.67 ಲಕ್ಷ ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ 2,91,826 ಮಂದಿ ಸೋಂಕಿತರಿದ್ದು, ಈಗಾಗಲೇ 2,04, 439 ಜನರು ಗುಣಮುಖರಾಗಿದ್ದಾರೆ. ಈವರೆಗೆ 4,977 ಮಂದಿ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ 7,03,823 ಮಂದಿ ಸೋಂಕಿತರಿದ್ದು, ಇವರದಲ್ಲಿ 5,14,790 ಜನರು ಗುಣಮುಖರಾಗಿದ್ದಾರೆ. ಈವರೆಗೆ 23,112 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next