Advertisement

ಕಚ್ಚಾ ತೈಲ ಆಮದು ಕಡಿತ?

05:15 PM Sep 26, 2018 | Team Udayavani |

ನವದೆಹಲಿ: ವರ್ಷಾಂತ್ಯದ ಅವಧಿಗೆ ಜಾಗತಿಕ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ ತಲುಪುವ ಸಾಧ್ಯತೆ ಇದೆ. ಹೀಗಾಗಿ, ದೇಶದಲ್ಲಿರುವ ತೈಲೋತ್ಪನ್ನ ಕಂಪನಿಗಳು ಕಚ್ಚಾ ತೈಲ ಆಮದು ಪ್ರಮಾಣ ತಗ್ಗಿಸುವ ಬಗ್ಗೆ ಯೋಚನೆ ಮಾಡುತ್ತಿವೆ. 2014ರ ನ.21ರ ಬಳಿಕ  ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 81.39 ಡಾಲರ್‌ಗೆ ತಲುಪಿರುವ ಹಿನ್ನೆಲೆಯಲ್ಲಿ ಈ ಚಿಂತನೆ ನಡೆದಿದೆ.

Advertisement

ಇದೇ ವೇಳೆ ಅಮೆರಿಕದ ಟೆಕ್ಸಾಸ್‌ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 1.30 ಅಮೆರಿಕನ್‌ ಡಾಲರ್‌ನಷ್ಟು ಏರಿಕೆಯಾಗಿದೆ. ಅದಕ್ಕೆ ಪೂರಕವಾಗಿ ಇರಾನ್‌ನಿಂದ ನ.4ರ ಬಳಿಕ ಕಚ್ಚಾ ತೈಲ ಆಮದು ಮಾಡಿಕೊಳ್ಳಬಾರದು ಎಂದು ಅಮೆರಿಕ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಅಲ್ಲಿಂದ ಸಂಪೂರ್ಣವಾಗಿ ಖರೀದಿ ಪ್ರಕ್ರಿಯೆ ನಿಲ್ಲಲಿದೆ. ಅದಕ್ಕೆ ಪೂರಕವಾಗಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಕಾರಣ, ಕಚ್ಚಾ ತೈಲ ಆಮದಿಗೆ ಆಗುತ್ತಿರುವ ವೆಚ್ಚವು ಶೇ.47ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಏಕೆಂದರೆ ಇರಾನ್‌ಗೆ ಸಂಬಂಧಿಸಿದಂತೆ ಭಾರತ ಸರ್ಕಾರ ರೂಪಾಯಿಯಲ್ಲಿಯೇ ಪಾವತಿ ಮಾಡುತ್ತಿದೆ. ಉಳಿದಂತೆ ಅದು ಡಾಲರ್‌ನಲ್ಲಿಯೇ ಪಾವತಿ ಮಾಡುವುದರಿಂದ ಕೇಂದ್ರದ ಬೊಕ್ಕಸಕ್ಕೆ ಹೊರೆಯಾಗಲಿದೆ. ಪರಿಸ್ಥಿತಿ ನಿಭಾಯಿಸಲು ಕಚ್ಚಾ ತೈಲ ಆಮದು ತಗ್ಗಿಸಿ, ಈಗಾಗಲೇ ಸಂಗ್ರಹಿಸಲಾಗಿರುವುದನ್ನು ಬಳಕೆ ಮಾಡಲು ಚಿಂತನೆ ನಡೆಸಲಾಗಿದೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಅಧ್ಯಕ್ಷ ಸಂಜೀವ್‌ ಸಿಂಗ್‌ ಕೂಡ ಅದನ್ನು ಖಚಿತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next