Advertisement

ಜು. 10ಕ್ಕೆ ಟೀಮ್‌ ಇಂಡಿಯಾ ಕೋಚ್‌ ಆಯ್ಕೆ: ಗಂಗೂಲಿ

03:45 AM Jul 02, 2017 | |

ಕೋಲ್ಕತಾ: ಮುಂಬಯಿಯಲ್ಲಿ ಜುಲೈ 10ರಂದು ಭಾರತ ತಂಡದ ನೂತನ ಕೋಚ್‌ ಆಯ್ಕೆಗಾಗಿ ಸಂದರ್ಶನ ನಡೆಯಲಿದೆ ಎಂದು ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಸದಸ್ಯ ಸೌರವ್‌ ಗಂಗೂಲಿ ಹೇಳಿದ್ದಾರೆ.

Advertisement

ಭಾರತ ತಂಡದ ಮಾಜಿ ನಾಯಕರೂ ಆಗಿರುವ ಗಂಗೂಲಿ ಸಿಎಸಿಯ ಮೂವರು ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಸಚಿನ್‌ ತೆಂಡುಲ್ಕರ್‌ ಮತ್ತು ವಿವಿಎಸ್‌ ಲಕ್ಷ್ಮಣ್‌ ಮತ್ತಿಬ್ಬರು ಸದಸ್ಯರಾಗಿದ್ದಾರೆ. ಮುಂಬಯಿಯಲ್ಲಿ ಜುಲೈ 10ರಂದು ಸಂದರ್ಶನ ನಡೆಯಲಿದೆ ಎಂದು ಗಂಗೂಲಿ ತಿಳಿಸಿದರು. 

ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 9 ಕೊನೆಯ ದಿನವಾಗಿದೆ. ಅನಿಲ್‌ ಕುಂಬ್ಳೆ ಹಠಾತ್‌ ರಾಜೀನಾಮೆ ನೀಡಿದ ಬಳಿಕ ಕೋಚ್‌ ಹುದ್ದೆಗೆ ಇನ್ನಷ್ಟು ಅರ್ಜಿ ಬರಲಿ ಎಂಬ ಉದ್ದೇಶದಿಂದ ಎರಡನೇ ಬಾರಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು,

Advertisement

Udayavani is now on Telegram. Click here to join our channel and stay updated with the latest news.

Next