Advertisement

ಕೊರೊನಾ ಕಳವಳ: ಈ ದೇಶಗಳ ಜನರು ಭಾರತಕ್ಕೆ ಬರುವಂತಿಲ್ಲ

11:53 PM Mar 20, 2020 | keerthan |

ಹೊಸದಿಲ್ಲಿ: ಚೀನಾದ ವುಹಾನ್ ಪಟ್ಟಣದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಈಗ ವಿಶ್ವದಾದ್ಯಂತ ಹಬ್ಬಿದ್ದು, ನೂರಕ್ಕೂ ಹೆಚ್ಚಿನ ದೇಶಗಳು ಈ ವೈರಸ್ ನಿಂದ ಸಂಕಷ್ಟ ಅನುಭವಿಸುತ್ತಿದೆ. ಈ ಹಿನ್ನಲೆಯಲ್ಲಿ ದೇಶಗಳು ಜನರ ವಿದೇಶ ಪ್ರಯಾಣ ಅಥವಾ ವಿದೇಶದಿಂದ ಆಗಮಿಸುವ ಜನರ ಮೇಲೆ ಕಣ್ಣಿಟ್ಟಿದ್ದು, ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.

Advertisement

ಈ ಹಿನ್ನಲೆಯಲ್ಲಿ ವೈರಸ್ ವ್ಯಾಪಕವಾಗಿ ಹರಡಿರುವ ಫ್ರಾನ್ಸ್, ಸ್ಪೈನ್ ಮತ್ತು ಜರ್ಮನಿಯ ಜನರು ಭಾರತಕ್ಕೆ ಆಗಮಿಸುವಂತಿಲ್ಲ ಎಂದು ಭಾರತ ನಿರ್ಬಂಧ ಹೇರಿದೆ.

ಮಂಗಳವಾರ ರಾತ್ರಿಯ ಮಾಹಿತಿವರೆಗೆ ಸ್ಪೇನ್ ನಲ್ಲಿ 1512, ಫ್ರಾನ್ಸ್ ನಲ್ಲಿ 1412 ಮತ್ತು ಜರ್ಮನಿಯಲ್ಲಿ 1281 ಪ್ರಕರಣಗಳು ದೃಢವಾಗಿದೆ. ಈ ಹಿನ್ನಲೆಯಲ್ಲಿ ಮಾರ್ಚ್ 11ರಂದು ಮತ್ತು ಅದಕ್ಕೂ ಮೊದಲು ಈ ದೇಶದ ಪ್ರಜೆಗಳಿಗೆ ನೀಡಲಾಗಿದ್ದ ಇ-ವೀಸಾಗಳನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗದೆ.

ಅದಲ್ಲದೆ ಭಾರತೀಯ ಪ್ರಜೆಗಳು ಕೂಡ ಈ ದೇಶಗಳಿಗೆ ಪ್ರಯಾಣಿಸುವುದನ್ನು ಕಡಿಮೆ ಮಾಡಬೇಕೆಂದು ಹೇಳಿದೆ ಎಂದು ಬ್ಯೂರೋ ಆಫ್ ಎಮಿಗ್ರೇಶನ್ ಹಳಿದೆ.

Advertisement

Udayavani is now on Telegram. Click here to join our channel and stay updated with the latest news.

Next