ಬೀಜಿಂಗ್: ಯುದ್ಧಭೀತಿಯ ದಟ್ಟ ಕಾರ್ಮೋಡ ಕವಿದಿದ್ದ ಲಡಾ ಖ್‌ನ ಎಲ್ ಎಸಿ ಯಲ್ಲಿ ಕೊನೆಗೂ ಶಾಂತಿಯ ಬಿಳಿ ಮೋಡ ತೇಲುವಂತಾಗಿದೆ. ಪ್ಯಾಂಗಾಂಗ್‌ನ ಉತ್ತರ ಮತ್ತು ದಕ್ಷಿಣ ದಂಡೆ ಯಲ್ಲಿ ನಿಯೋಜಿಸಿದ್ದ ತುಕಡಿಗಳ ವಾಪಸಾತಿ ಪ್ರಕ್ರಿ ಯೆಯನ್ನು ಭಾರ ತ- ಚೀನಾ ಏಕಕಾಲದಲ್ಲಿ ಆರಂಭಿಸಿವೆ ಎಂದು ಬೀಜಿಂಗ್ ತಿಳಿಸಿದೆ.
ಇದನ್ನೂ ಓದಿ:ಶಿರೂರು: ಅತೀ ವೇಗದಿಂದ ಬೈಕ್ ಚಲಾಯಿಸಿದ 15ರ ಬಾಲಕ; ಡಿವೈಡರ್ ಗೆ ಢಿಕ್ಕಿ, ಸ್ಥಳದಲ್ಲೇ ಸಾವು!
ಚೀನಾದ ಸರ್ಕಾರಿ ಮಾಧ್ಯಮ “ಗ್ಲೋಬಲ್ ಟೈಮ್ಸ್’ ರಕ್ಷಣಾ ಇಲಾಖೆಯ ಹೇಳಿಕೆ ಆಧ ರಿಸಿ, ಇಂಥ ದ್ದೊಂದು ಸುದ್ದಿ ಬಿತ್ತರಿಸಿದೆ. ಜ.24ರಂದು ನಡೆದ 9ನೇ ಸುತ್ತಿನ ಮಿಲಿಟರಿ ಕಮಾಂಡರ್ ಗಳ ಮಾತುಕತೆ ವೇಳೆ ಈ ಒಮ್ಮ ತದ ವರದಿಯನ್ನು ಉಭಯ ರಾಷ್ಟ್ರಗಳು ಪರಸ್ಪರ ಬದಲಿ ಸಿ ಕೊಂಡಿವೆ.
ಎರಡೂ ರಾಷ್ಟ್ರಗಳು ಬುಧವಾರದಿಂದ ಏಕಕಾಲದಲ್ಲಿ ಮತ್ತು ಸಂಘಟನಾ ತ್ಮಕವಾಗಿ ಈ ಪ್ರಕ್ರಿಯೆ ಆರಂಭಿಸಿವೆ ಎಂಬ ರಕ್ಷಣಾ ಸಚಿವಾಲಯ ವಕ್ತಾರ ಕ್ಯಾ. ವು ಖೀಯಾನ್ ಹೇಳಿಕೆಯನ್ನು ಗ್ಲೋಬಲ್ ಟೈಮ್ಸ್ ಟ್ವೀಟಿಸಿದೆ.
ಹೊರಟ ಚೀನಾ: ಪ್ಯಾಂಗಾಂಗ್ ತಟದ ವಾಸ್ತವ ನಿಯಂತ್ರಣ ರೇಖೆ ಯಿಂದ ಶಸ್ತ್ರಾಸ್ತ್ರ ವಾಹನ ಗಳು, ಯುದ್ಧ ಟ್ಯಾಂಕರ್ ಗ ಳನ್ನು ಪಿಎ ಲ್‌ಎ ಹಿಂಪಡೆದಿದೆ. ಝೆಡ್ ಟಿ ಝೆ ಡ್ -99, ಝೆಡ್ ಟಿ ಝೆ ಡ್-88 ಒಳಗೊಂಡಂತೆ 350ಕ್ಕೂ ಅಧಿಕ ಟ್ಯಾಂಕ್ ಗಳನ್ನು ಚೀನಾ ವಾಪಸು ತೆಗೆದುಕೊಂಡಿದೆ ಎಂದು “ಟೈಮ್ಸ್ ನೌ ವರದಿ’ ಮಾಡಿದೆ.
ಭಾರತ ಏನು ಹೇಳುತ್ತೆ?: ಸೇನೆ ವಾಪಸಾತಿ ಕುರಿತಾಗಿ ಭಾರತ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಸಂಸತ್ ನಲ್ಲಿ ಗುರು ವಾರ ನಡೆಯಲಿರುವ ಕಲಾಪದಲ್ಲಿ ಭಾರತ ಅಧಿಕೃತ ವಾಗಿ ಹೇಳಿಕೆ ನೀಡಲಿದೆ ಎಂದು ಹೇಳಲಾಗಿದೆ.
ಪಾನಮತ್ತರಾಗಿದ್ದ ಚೀನೀ ಸೈನಿಕರು!:
ಚೀನಾ ಸೈನಿಕರ ದಕ್ಷತೆ ಬಗ್ಗೆ ಅನುಮಾನ ಹುಟ್ಟಿಸುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಜನವರಿಯಲ್ಲಿ, ಕಳೆದ ವರ್ಷದ ಅಕ್ಟೋಬರ್ ನಲ್ಲಿ ಭಾರತದ ಗಡಿ ದಾಟಿ ಬಂದು, ಸೆರೆಯಾಗಿದ್ದ ಇಬ್ಬರು ಚೀನೀ ಸೈನಿಕರ ವಿಲಕ್ಷಣ ನಡೆ ಇದಕ್ಕೆ ಪುಷ್ಟಿ ನೀಡಿದೆ. “ಸೆರೆಯಾದ ಸೈನಿಕರು ಪಾನಮತ್ತರಾಗಿದ್ದರು. ಶೂಗಳ ಲೇಸ್ ಅನ್ನೂ ಕಟ್ಟಿ ಕೊಂಡಿರಲಿಲ್ಲ. ಗೂಢಚಾರಿಗೆ ಇರುವಂಥ ಪ್ರಾಥಮಿಕ ಲಕ್ಷಣಗಳೂ ಅವರಲ್ಲಿ ಇರಲಿಲ್ಲ. ಯಾವ ಕೌಶಲವೂ ಇಲ್ಲ ದಂಥ ವ್ಯಕ್ತಿಗಳಂತೆ ಇದ್ದ ರು. ಅವರ ಬಳಿ ಇದ್ದ ಮೊಬೈಲ್ ಗಳಲ್ಲೂ ಸ್ಪೈ ಚಟುವಟಿಕೆ ಕುರಿತ ದಾಖಲೆಗಳಿರಲಿಲ್ಲ’ ಎಂದು ಸೇನೆಯ ಮೂಲಗಳು ತಿಳಿಸಿವೆ.