Advertisement

ಶೀಘ್ರ ಭಾರತ, ಪಾಕ್‌ ಚೀನ ಸಮರಾಭ್ಯಾಸ

09:50 AM Apr 30, 2018 | Karthik A |

ಹೊಸದಿಲ್ಲಿ, /ಇಸ್ಲಾಮಾಬಾದ್‌: ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ಥಾನ ಸೇನಾ ಸಮರಾಭ್ಯಾಸ ನಡೆಸಲಿವೆ. ಈ ವರ್ಷದ ಸೆಪ್ಟಂಬರ್‌ ನಲ್ಲಿ ರಷ್ಯಾದ ಉರಾಲ್‌ ಪರ್ವತ ಪ್ರದೇಶಗಳಲ್ಲಿ ನಡೆಯಲಿರುವ ಬಹುರಾಷ್ಟ್ರಗಳ ಸೇನಾ ಕವಾಯತಲ್ಲಿ ಭಾರತ ಮತ್ತು ಪಾಕ್‌ ಸೇನೆಯೂ ಭಾಗಿಯಾಗಲಿವೆ. ಜತೆಗೆ ಡೋಕ್ಲಾಂ ಬಿಕ್ಕಟ್ಟಿನ ಬಳಿಕ ಚೀನದ ಜತೆಗೂ ಮಿಲಿಟರಿ ಸಮರಾಭ್ಯಾಸಕ್ಕೆ ಚಾಲನೆ ಸಿಗಲಿದೆ.

Advertisement

ಕಳೆದ ವಾರ ಬೀಜಿಂಗ್‌ನಲ್ಲಿ ಮುಕ್ತಾಯದ ಶಾಂಘೈ ಸಹಕಾರ ಒಕ್ಕೂಟ (SCO)ದ ರಕ್ಷಣಾ ಸಚಿವರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಭಾರತದ ಭಾಗವಹಿಸುವಿಕೆಯನ್ನು ಇಲ್ಲಿ ಖಚಿತಪಡಿಸಿದ್ದರು. ಅದರಲ್ಲಿ ಒಕ್ಕೂಟದ ಇತರ ಸದಸ್ಯ ರಾಷ್ಟ್ರಗಳಾಗಿರುವ ತಜಿಕಿಸ್ಥಾನ, ಉಜ್ಬೇಕಿಸ್ತಾನ, ರಷ್ಯಾ, ಚೀನ, ಕಜಕಿಸ್ಥಾನ, ಕಿರ್ಗಿಜ್‌ ರಿಪಬ್ಲಿಕ್‌ನ ಸೇನೆಯೂ ಭಾಗಿಯಾಗಲಿದೆ.

ಹಿಂದೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಜಂಟಿಯಾಗಿ ಭಾಗವಹಿಸಿದ್ದು ಬಿಟ್ಟರೆ ಎರಡೂ ರಾಷ್ಟ್ರಗಳು ಒಟ್ಟಾಗಿ ಕವಾಯತು ನಡೆಸಿದ ಉದಾಹರಣೆಗಳಿಲ್ಲ. ಚೀನಾ ಜತೆಗಿನ ಸಮರಾಭ್ಯಾಸದ ಬಗ್ಗೆ ಎ.27, 28ರಂದು ವುಹಾನ್‌ನಲ್ಲಿ ಮುಕ್ತಾಯವಾದ ಅನೌಪಚಾರಿಕ ಮಾತುಕತೆ ವೇಳೆ ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಚರ್ಚಿಸಿದ್ದರು.

ಭಾರತದ ಮೇಲೆ ನಿಗಾಕ್ಕೆ ಪಾಕ್‌ ಯೋಜನೆ
ಭಾರತದ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿಯೇ ಪಾಕಿಸ್ತಾನ ಹಲವು ಬಾಹ್ಯಾಕಾಶ ಯೋಜನೆಗಳನ್ನು ಹಾಕಿಕೊಂಡಿದೆ. ಇದುವರೆಗೆ ಭಾರತದ ಮೇಲೆ ನಿಗಾ ಇರಿಸಲು ಪಾಕಿಸ್ಥಾನವು ಅಮೆರಿಕ, ಫ್ರಾನ್ಸ್‌ ಸೇರಿದಂತೆ ಹಲವು ರಾಷ್ಟ್ರಗಳ ಉಪಗ್ರಹಗಳನ್ನು ಬಳಕೆ ಮಾಡುತ್ತಿತ್ತು. ಅದಕ್ಕಾಗಿ ತನ್ನದೇ ಆಗಿರುವ ಉಪಗ್ರಹ ಮತ್ತು ಬಾಹ್ಯಾಕಾಶ ವ್ಯವಸ್ಥೆಯನ್ನು ಹಾಲಿ ಹಣಕಾಸು ವರ್ಷದಿಂದ ಹೊಂದಲು ನಿರ್ಧರಿಸಿದೆ. ಅದಕ್ಕಾಗಿ 4.70 ಶತಕೋಟಿ ರೂ.ಗಳನ್ನು ವೆಚ್ಚ ಮಾಡಲು ಮುಂದಾಗಿದೆ. ಬಹೂಪಯೋಗಿ ಉಪಗ್ರಹಕ್ಕಾಗಿ 1.35 ಶತಕೋಟಿ ರೂ., ಇನ್ನೂ ಮೂರು ಹೊಸ ಯೋಜನೆಗಳಿಗಾಗಿ 2.55 ಶತಕೋಟಿ ವೆಚ್ಚ ಮಾಡಲು ಮುಂದಾಗಿದೆ. ಈ ಉದ್ದೇಶಕ್ಕಾಗಿ 2005ರಿಂದ ಪಾಕಿಸ್ಥಾನದ ಬಾಹ್ಯಾಕಾಶ ಸಂಸ್ಥೆ ಶೈಕ್ಷಣಿಕ ಸಂಸ್ಥೆಗಳಲ್ಲಿ ತನ್ನ ಯೋಜನೆಗಳ ಬಗ್ಗೆ ಪ್ರಚಾರ ನಡೆಸುತ್ತಾ ಬರುತ್ತಿದೆ. ಕರಾಚಿ ಸಮೀಪ ಬಾಹ್ಯಾಕಾಶ ಸಂಶೋಧನಾ ಕೇಂದ್ರವನ್ನು ಆರಂಭಿಸುವುದು ಕೂಡ ಈ ಯೋಜನೆಯಲ್ಲಿ ಸೇರಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next