Advertisement
ಡೆಪ್ಸಾಂಗ್ನಲ್ಲಿ 5 ಮತ್ತು ಡೆಮ್ಚಾಕ್ನಲ್ಲಿ 2 ಗಸ್ತು ಕೇಂದ್ರಗಳು ಇದ್ದು, ಈಗ ಇಲ್ಲಿ ಗಸ್ತು ಪ್ರಕ್ರಿಯೆ ಆರಂಭವಾಗಿದೆ. 2020ರ ಗಾಲ್ವಾನ್ ಘರ್ಷಣೆ ಬಳಿಕ ಚೀನ ಸೈನಿಕರು ಭಾರತೀಯ ಯೋಧರ ಗಸ್ತು ಪ್ರಕ್ರಿಯೆಗೆ ತಡೆಯೊಡ್ಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಕೂಡ ಚೀನದ ಗಸ್ತಿಗೆ ತಡೆ ಉಂಟುಮಾಡಿದ್ದರು. ಹೀಗಾಗಿ, ಎಲ್ಎಸಿಯ ವಿವಾದಿತ ಪ್ರದೇಶದಲ್ಲಿ ಗಸ್ತು ಸಂಪೂರ್ಣ ಸ್ಥಗಿತಗೊಂಡಿತ್ತು.
ಎರಡೂ ಕಡೆಯ ಸೈನಿಕರು ವಾಪಸಾಗಿರುವುದನ್ನು ಉಭಯ ದೇಶಗಳು ದೃಢಪಡಿಸಿಕೊಂಡ ಬಳಿಕ ಗುರುವಾರ ದೀಪಾವಳಿ ಹಬ್ಬದ ಅಂಗವಾಗಿ ಪೂರ್ವ ಲಡಾಖ್ ಸೇರಿದಂತೆ ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್ಎಸಿ)ಯ ಹಲವು ಗಡಿ ಕೇಂದ್ರಗಳಲ್ಲಿ ಭಾರತ-ಚೀನ ಯೋಧರು ಸಿಹಿ ವಿನಿಮಿಯ ಮಾಡಿಕೊಂಡಿದ್ದಾರೆ. ಲಡಾಖ್ನ ಚುಶುಲ್- ಮೋಲ್ಡೋ, ದೌಲತ್ ಬೇಗ್ ಓಲ್ಡಿ ಗಡಿ, ಅರುಣಾಚಲದ ಬಮ್ ಲಾ ಮತ್ತು ವಾಚಾ, ಸಿಕ್ಕಿಂನ ನಾಥುಲಾ ಸೇರಿದಂತೆ ಒಟ್ಟು 5 ಪ್ರದೇಶಗಳಲ್ಲಿ ಸಿಹಿ ವಿನಿಮಯ ಮಾಡಿಕೊಳ್ಳಲಾಗಿದೆ.