Advertisement

ಅರುಣಾಚಲದ ಗಡಿಯಲ್ಲಿ ಮತ್ತೆ ಭಾರತ-ಚೀನ ಸೈನಿಕರ ಘರ್ಷಣೆ

09:18 PM Dec 12, 2022 | Team Udayavani |

ತವಾಂಗ್ : ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಡಿಸೆಂಬರ್ 09 ರಂದು ಭಾರತದ ಸೈನಿಕರು ಮತ್ತು ಚೀನ ಸೈನಿಕರ ನಡುವೆ ಘರ್ಷಣೆ ನಡೆದಿರುವ ಬಗ್ಗೆ ತಿಳಿದು ಬಂದಿದೆ.

Advertisement

ತವಾಂಗ್ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆ ಉದ್ದಕ್ಕೂ ಇರುವ ಕೆಲವು ಪ್ರದೇಶಗಳಲ್ಲಿ ಎರಡೂ ಸೇನೆಯ ಕಡೆಯವರು ತಮ್ಮ ಹಕ್ಕು ರೇಖೆಗಳವರೆಗೆ ಪ್ರದೇಶದಲ್ಲಿ ಗಸ್ತು ತಿರುಗುತ್ತಾರೆ. ಇದು 2006 ರಿಂದ ನಡೆದುಕೊಂಡು ಬರುತ್ತಿದೆ.

ಪಿಎಲ್ ಎ ಪಡೆಗಳು ತವಾಂಗ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯನ್ನು ಸಂಪರ್ಕಿಸಿದವು, ಇದನ್ನು ದೃಢವಾದ ಧೈರ್ಯದೊಂದಿಗೆ ಭಾರತದ ಪಡೆಗಳು ಎದುರಿಸಿದ್ದು, ಈ ಮುಖಾಮುಖಿಯಲ್ಲಿ ಎರಡೂ ಕಡೆಯ ಕೆಲವು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಎರಡೂ ಕಡೆಯವರು ತಕ್ಷಣವೇ ಆ ಪ್ರದೇಶದಿಂದ ನಿರ್ಗಮಿಸಿದ್ದು, ಘಟನೆಯ ಅನುಸರಣೆಯಾಗಿ, ಪ್ರದೇಶದಲ್ಲಿನ ಕಮಾಂಡರ್ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ರಚನಾತ್ಮಕ ಕಾರ್ಯವಿಧಾನಗಳಿಗೆ ಅನುಗುಣವಾಗಿ ಸಮಸ್ಯೆಯನ್ನು ಚರ್ಚಿಸಲು ಧ್ವಜ ಸಭೆಯನ್ನು ನಡೆಸಿದ್ದಾರೆ.

“ಈ ಮುಖಾಮುಖಿಯು ಎರಡೂ ಕಡೆಯ ಕೆಲವು ಸಿಬಂದಿಗೆ ಸಣ್ಣಪುಟ್ಟ ಗಾಯಗಳಿಗೆ ಕಾರಣವಾಯಿತು. ಎರಡೂ ಕಡೆಯವರು ತಕ್ಷಣವೇ ಪ್ರದೇಶದಿಂದ ನಿರ್ಗಮಿಸಿದರು,” ಎಂದು ಮೂಲವೊಂದು ತಿಳಿಸಿದೆ.

Advertisement

ಚೀನದ ಕಮ್ಯುನಿಸ್ಟ್ ಪಕ್ಷದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಖಾಮುಖಿಯಾದ ಸ್ಥಳಕ್ಕೆ 300 ಕ್ಕೂ ಹೆಚ್ಚು ಸೈನಿಕರನ್ನು ಕಳುಹಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. ಸುದ್ದಿ ಸಂಸ್ಥೆಯ ಪ್ರಕಾರ, ನೈಜ ನಿಯಂತ್ರಣ ರೇಖೆ ಬಳಿ ನಡೆದ ಘರ್ಷಣೆಯಲ್ಲಿ ಚೀನದ ತಂಡವು ಭಾರತಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

“ತವಾಂಗ್‌ನಲ್ಲಿ ಮುಖಾಮುಖಿಯಾದ ಪ್ರದೇಶದಲ್ಲಿ ಭಾರತೀಯ ಸೈನಿಕರು ಚೀನದ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಗಾಯಗೊಂಡಿರುವ ಚೀನೀ ಸೈನಿಕರ ಸಂಖ್ಯೆ ಭಾರತೀಯ ಸೈನಿಕರಿಗಿಂತ ಹೆಚ್ಚು” ಎಂದು ಏಜೆನ್ಸಿಯ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next