ಹೊಸದಿಲ್ಲಿ: ಕೋವಿಡ್ ದಿಂದಾಗಿ ತಾಂತ್ರಿಕವಾಗಿ ಮಹಾಕುಸಿತಕ್ಕೆ ಒಳಗಾಗಿದ್ದ ಭಾರತದ ಆರ್ಥಿಕತೆ ಪುಟಿದೆದ್ದಿದೆ. ಶುಕ್ರವಾರ ದೇಶದ ಮೂರನೇ ತ್ತೈಮಾಸಿಕ ಅವಧಿಯ ಜಿಡಿಪಿ ದರ ಶೇ. 04ರಷ್ಟಕ್ಕೆ ತಲುಪಿದ್ದು, ಋಣಾತ್ಮಕದಿಂದ ಧನಾತ್ಮಕ ಪ್ರಗತಿಗೆ ಬಂದಿದೆ.
ಕಳೆದ ಎರಡೂ ತ್ತೈಮಾಸಿಕಗಳಲ್ಲಿ ದೇಶದ ಆರ್ಥಿಕ ದರ ಋಣಾತ್ಮಕಕ್ಕೆ ಜಾರಿತ್ತು. ಅಂದರೆ ಮೊದಲ ತ್ತೈಮಾಸಿಕದಲ್ಲಿ ಶೇ.-24.4ಕ್ಕೆ ಕುಸಿದಿದ್ದರೆ,
ಎರಡನೇ ತ್ತೈಮಾಸಿಕದಲ್ಲಿ ಒಂದಷ್ಟು ಸುಧಾರಿಸಿ ಶೇ.-7.3ಕ್ಕೆ ಬಂದಿತ್ತು. ಈಗ ಮೂರನೇ ತ್ತೈಮಾಸಿಕದಲ್ಲಿ ಪ್ರಗತಿ ದರ ಮೈನಸ್‌ನಿಂದ ಪ್ಲಸ್‌ಗೆ ಏರಿಕೆಯಾಗಿದ್ದು, ಶೇ.0.4ಕ್ಕೆ ಏರಿಕೆಯಾಗಿದೆ. ಮೊದಲೆರಡು ತ್ತೈಮಾಸಿಕಗಳ ಮೇಲೆ ಕೊರೊನಾ ಹೊಡೆತ ಹೆಚ್ಚಾಗಿಯೇ ಬಿದ್ದಿತ್ತು. ಈಗ ಕೇಂದ್ರ ಸರಕಾರದ ಆರ್ಥಿಕ ಪ್ಯಾಕೇಜ್‌ಗಳ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಹಳಿಗೆ ಬರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಸರಕಾರದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಕೃಷಿ ಕ್ಷೇತ್ರದ ಬೆಳವಣಿಗೆ ಶೇ. 3.9ರಷ್ಟಿದ್ದರೆ, ಉತ್ಪಾದನಾ ವಲಯದ ಬೆಳವಣಿಗೆ ಶೇ. 16ರಷ್ಟಿದೆ ಎಂದಿದೆ. ನಿರ್ಮಾಣ ವಲಯದ ಬೆಳವಣಿಗೆ ಶೇ. 6.2, ವಿದ್ಯುತ್, ಅನಿಲ, ನೀರು ಪೂರೈಕೆ ಸೇರಿದಂತೆ ಇತರೆ ಸೇವಾ ವಲಯಗಳ ಬೆಳವಣಿಗೆ ದರ ಶೇ. 7.3ರಷ್ಟಿದೆ ಎಂದು ಇದು ಅಂದಾಜಿಸಿದೆ. ಒಟ್ಟಾರೆ 2020-21ರ ಹಣಕಾಸು ವರ್ಷದಲ್ಲಿ ಶೇ. -8ರಷ್ಟು ಅಭಿವೃದ್ಧಿ ಕಾಣಲಿದೆ ಎಂದೂ ಹೇಳಿದೆ.
ಷೇರುಪೇಟೆ ಮಹಾಕುಸಿತ :
ಮುಂಬಯಿ: ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಶುಕ್ರವಾರ ಮಹಾಕುಸಿತ ಸಂಭವಿಸಿದ್ದು, ಹೂಡಿಕೆದಾರರಿಗೆ ಸುಮಾರು 5.3 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಜಾಗತಿಕ ಬೆಳವಣಿಗೆಯಿಂದಾಗಿ ಭಾರೀ ಕುಸಿತವಾಗಿದೆ ಎಂದು ವಿಶ್ಲೇಷಿಸಲಾಗಿದೆ. ದಿನದಂತ್ಯಕ್ಕೆ 1,940 ಅಂಕಗಳ ಕುಸಿತವಾಗಿದ್ದು, 49,099ರಲ್ಲಿ ವಹಿವಾಟು ಮುಗಿಸಿದೆ. ನಿಫ್ಟಿಯಲ್ಲೂ 568 ಅಂಕ ಕುಸಿತವಾಗಿ 15 ಸಾವಿರಕ್ಕಿಂತ ಕೆಳಗೆ ಇಳಿದಿದೆ. ಅಂದರೆ 14,529.15 ಅಂಕಗಳಿಗೆ ವಹಿವಾಟು ಮುಗಿಸಿತು. ಕೇಂದ್ರ ಸಾಂಖೀÂಕ ಇಲಾಖೆ ಜಿಡಿಪಿ ದರ ಘೋಷಣೆ ಮಾಡುವ ಸುಳಿವು ನೀಡಿತ್ತು. ಅತ್ತ ಅಮೆರಿಕ ಸಿರಿಯಾ ಮೇಲೆ ದಾಳಿ ನಡೆಸಿದ್ದು, ಷೇರುಪೇಟೆಯಲ್ಲಿ ಆತಂಕಕ್ಕೆ ಕಾರಣವಾಯಿತು. ಹೀಗಾಗಿ, ಮೇ 4ರಂದು ಆಗಿದ್ದ ಮಹಾಕುಸಿತದ ಅನಂತರ, ಈಗ ಷೇರುಪೇಟೆ ಭಾರೀ ಆಘಾತ ಅನುಭವಿಸಿತು.