Advertisement
ಇಂಡಿಯಾ ಮೈತ್ರಿಕೂಟದ ಮೇಲಿನ ತೀಕ್ಷ್ಣ ವಾಗ್ದಾಳಿಯಲ್ಲಿ, ”ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರೈಲ್ವೆ ಸಚಿವರಾಗಿರಿಲಿಲ್ಲವೇ? ಅದೇ ರೀತಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ತಂದೆ ಮತ್ತು ಮಾಜಿ ಸಿಎಂ ಎಂ. ಕರುಣಾನಿಧಿ ಅವರು ಆರು ವರ್ಷಗಳ ಕಾಲ ಬಿಜೆಪಿಯ ಮೈತ್ರಿ ಕೂಟದಲ್ಲಿದ್ದರು. ಅವರ ಅಳಿಯ ಅಂದಿನ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು.ಈಗ ಟಿಎಂಸಿ ಮತ್ತು ಡಿಎಂಕೆ ಇಂಡಿಯಾ ಮೈತ್ರಿಕೂಟದ ಭಾಗವಾಗಿಲ್ಲವೇ ” ಎಂದು ಪ್ರಶ್ನಿಸಿದರು.
Related Articles
Advertisement
“ಭಾರತದಲ್ಲಾಗಲಿ ಅಥವಾ ಹೊರಗಾಗಲಿ ಇಂದಿನ ವಾತಾವರಣವು ಮೋದಿಯವರಿಗೆ ಮನ್ನಣೆಯನ್ನು ನೀಡಿದೆ. ವಿರೋಧ ಪಕ್ಷಗಳು ಯಾವುದೇ ನಿಲುವು ಹೊಂದಿಲ್ಲ ಮತ್ತು ಸಂಬಂಧವಿಲ್ಲದ ವಿಷಯಗಳನ್ನು ಮಾತನಾಡುತ್ತಾರೆ. ನಾನು ಅವರ ಮೇಲೆ ಕಟುವಾಗಿ ವರ್ತಿಸಲು ಬಯಸುವುದಿಲ್ಲ. ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ” ಎಂದರು.
ಮೋದಿ ಇಂದು ಅತ್ಯಂತ ಎತ್ತರದ ನಾಯಕ ಎಂಬುದನ್ನು ಅರಿತುಕೊಳ್ಳಬೇಕು. ಇದನ್ನು ಜನರು ಒಪ್ಪಿಕೊಳ್ಳಬೇಕು ಎಂದು ವಿಪಕ್ಷಗಳಿಗೆ ಸಲಹೆ ನೀಡಿದರು.
ಬಿಜೆಪಿಯೊಂದಿಗೆ ಸೀಟು ಹಂಚಿಕೆ ಕುರಿತು ಪ್ರತಿಕ್ರಿಯಿಸಿ “ನಾಳೆ ಏನಾಗಲಿದೆ ಎಂದು ನಾನು ಊಹಿಸಲು ಸಾಧ್ಯವಿಲ್ಲ, ಕುಮಾರಸ್ವಾಮಿ ಪಕ್ಷದ ಪ್ರಶ್ನಾತೀತ ನಾಯಕ. ಅವರು ನಿರ್ಧರಿಸಬೇಕು. ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಎಲ್ಲದರ ಬಗ್ಗೆ ಚರ್ಚಿಸುತ್ತಾರೆ ಮತ್ತು ಸರಿಯಾದ ತಿಳುವಳಿಕೆಯೊಂದಿಗೆ ಬರುತ್ತಾರೆ ”ಎಂದರು.