Advertisement

India: ಗಣರಾಜ್ಯೋತ್ಸವಕ್ಕೆ ಬೈಡೆನ್‌ ಬರಲ್ಲ- ಶ್ವೇತಭವನದ ಮೂಲಗಳಿಂದ ಮಾಹಿತಿ

12:32 AM Dec 13, 2023 | Pranav MS |

ವಾಷಿಂಗ್ಟನ್‌: ಮುಂದಿನ ತಿಂಗಳು 26ರಂದು ನಡೆಯಲಿರುವ ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ದಿಲ್ಲಿಗೆ ಭೇಟಿ ನೀಡುತ್ತಿಲ್ಲ.

Advertisement

ಈ ಬಗ್ಗೆ ಶ್ವೇತಭವನದ ಮೂಲಗಳು ಮಾಹಿತಿ ನೀಡಿವೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ರಿಪಬ್ಲಿಕನ್‌ಪಕ್ಷದಿಂದ ತೀವ್ರ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಮಯಾವಕಾಶದ ಕೊರತೆ ಕಾರಣಕ್ಕಾಗಿ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲು ಅಮೆರಿಕ ಅಧ್ಯಕ್ಷ, ಡೆಮಾಕ್ರಟಿಕ್‌ ಪಕ್ಷದ ನಾಯಕ ಜೋ ಬೈಡೆನ್‌ ಅವರಿಗೆ ಸಾಧ್ಯವಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next