Advertisement

ಎಎಫ್ ಸಿ ಏಶ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌

11:15 PM Apr 05, 2020 | Sriram |

ಹೊಸದಿಲ್ಲಿ: ಭಾರತವು 2027ರಲ್ಲಿ ನಡೆಯಲಿರುವ ಎಎಫ್ ಸಿ ಏಶ್ಯನ್‌ ಕಪ್‌ ಫ‌ುಟ್‌ಬಾಲ್‌ ಕೂಟದ ಆತಿಥ್ಯ ವಹಿಸಲು ಅಧಿಕೃತವಾಗಿ ಬಿಡ್‌ ದಾಖಲೆಗಳನ್ನು ಸಲ್ಲಿಸಿದೆ ಎಂದು ಅಖೀಲ ಭಾರತ ಫ‌ುಟ್‌ಬಾಲ್‌ ಫೆಡರೇಶನ್‌ (ಎಐಎಫ್ಎಫ್)ನ ಉನ್ನತ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

Advertisement

ಒಂದು ವೇಳೆ ಈ ಬಿಡ್‌ನ‌ಲ್ಲಿ ಭಾರತ ಗೆಲುವು ಸಾಧಿಸಿದರೆ ದೇಶವು ಇದೇ ಮೊದಲ ಬಾರಿ ಏಶ್ಯ ಖಂಡದ ಈ ಮಹೋನ್ನತ ಕೂಟದ ಆತಿಥ್ಯ ವಹಿಸಲಿದೆ. ಫ‌ುಟ್‌ಬಾಲ್‌ ಕೂಟ ಆಯೋಜಿಸುವುದಕ್ಕೆ ನಮಗೆ ತೀವ್ರ ಆಸಕ್ತಿಯಿದೆ ಎಂದು ತಿಳಿಸುವ ಪತ್ರವನ್ನು ಎಎಫ್ ಸಿ (ಏಶ್ಯನ್‌ ಫ‌ುಟ್‌ಬಾಲ್‌ ಕಾನೆ#ಡರೇಶನ್‌)ಗೆ ಸಲ್ಲಿಸಿದ್ದೇವೆ. ಸದ್ಯ ಅವರಿಗೆ ಬೇಕಾದ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದು ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಕುಶಲ್‌ ದಾಸ್‌ ಹೇಳಿದ್ದಾರೆ.

ಕೋವಿಡ್  19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಎಎಫ್ ಸಿ ಬಿಡ್‌ಸಲ್ಲಿಸುವ ಸಮಯವನ್ನು ವಿಸ್ತರಿಸಿತ್ತು. ಮಾ. 31ರಿಂದ ಜೂ. 30ರ ನಡುವಣ 3 ತಿಂಗಳ ಅವಧಿಯ ಒಳಗಡೆ ಬಿಡ್‌ ಸಲ್ಲಿಸುವಂತೆ ಸೂಚಿಸಿತ್ತು.

2027ರ ಕೂಟದ ಆತಿಥ್ಯ ರಾಷ್ಟ್ರ ಯಾವುದೆಂದು ಎಎಫ್ ಸಿ  ಮುಂದಿನ ವರ್ಷದ ಆರಂಭದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಈ ಮೂಲಕ ಆತಿಥ್ಯ ರಾಷ್ಟ್ರಕ್ಕೆ ಹಲವು ರಾಷ್ಟ್ರಗಳು ಭಾಗವಹಿಸಲಿರುವ ಕಾಂಟಿನೆಂಟಲ್‌ ಕೂಟವನ್ನು ಸಂಘಟಿಸಲು ಬೇಕಾದ ಸಿದ್ಧತೆಗೆ ಬಹಳಷ್ಟು ಸಮಯಾವಕಾಶ ಸಿಗಲಿದೆ. 2019ರ ಎಎಫ್ಸಿ ಕೂಟವು ಯುಎಇನಲ್ಲಿ ನಡೆಯಲಿದ್ದು 24 ತಂಡಗಳು ಭಾಗವಹಿಸಲಿವೆ ಎಂದು ಎಎಫ್ಸಿ ತಿಳಿಸಿದೆ.

ಭಾರತ ಮಾತ್ರವಲ್ಲದೇ ಸೌದಿ ಅರೇಬಿಯ ಕೂಡ ಬಿಡ್‌ ಸಲ್ಲಿಸುವ ಉದ್ದೇಶವಿದೆ ಎಂದು ಸಾರ್ವಜನಿಕವಾಗಿ ಪ್ರಕಟಿಸಿದೆ. ಆದರೆ ಸೌದಿ ಈ ಹಿಂದೆ ಮೂರು ಬಾರಿ ಬಿಡ್‌ನ‌ಲ್ಲಿ ಜಯ ಸಾಧಿಸಿದ್ದರೂ ಒಮ್ಮೆಯೂ ಕೂಟದ ಆತಿಥ್ಯ ವಹಿಸಿಲ್ಲ.

Advertisement

ಯಶಸ್ವಿ ಆಯೋಜನೆ
ಭಾರತವು 2017ರಲ್ಲಿ ಅಂಡರ್‌-17 ವಿಶ್ವಕಪ್‌ ಕೂಟವನ್ನು ಯಶಸ್ವಿಯಾಗಿ ಆಯೋಜಿಸಿದ್ದರಿಂದ ಈ ವರ್ಷದ ನವೆಂಬರ್‌ನಲ್ಲಿ ನಡೆಯುವ ಅಂಡರ್‌-17 ವನಿತಾ ವಿಶ್ವಕಪ್‌ ಆಯೋಜಿಸಲು ಅವಕಾಶ ನೀಡಲಾಗಿತ್ತು. ಆದರೆ ಇದೀಗ ಕೋವಿಡ್  19ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಕೂಟವನ್ನು ಮುಂದೂಡಲು ನಿರ್ಧರಿಸಲಾಗಿದೆ.

1964ರಲ್ಲಿ ರನ್ನರ್‌ ಅಪ್‌
ಎಎಫ್ ಸಿ ಏಶ್ಯನ್‌ ಕಪ್‌ ಕೂಟದಲ್ಲಿ ಭಾರತವ ನಾಲ್ಕು ಬಾರಿ ಭಾಗವಹಿಸಿದೆ. 1964ರಲ್ಲಿ ನಡೆದ ಕೂಟದ ವೇಳೆ ರನ್ನರ್‌ ಅಪ್‌ ಸ್ಥಾನ ಪಡೆದಿರುವುದು ಭಾರತದ ಇಷ್ಟರವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ. ಕೇವಲ ನಾಲ್ಕು ತಂಡಗಳು ಭಾಗವಹಿಸಿದ್ದ ಈ ಕೂಟವು ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆದಿತ್ತು. ಫೈನಲ್‌ ಪಂದ್ಯವಿರಲಿಲ್ಲ. ಆಬಳಿಕ ನಡೆದ 1984, 2011 ಮತ್ತು 2019ರ ಕೂಟಗಳ ವೇಳೆ ಭಾರತ ಬಣ ಹಂತದಿಂದ ಮುನ್ನಡೆಯಲು ವಿಫ‌ಲವಾಗಿತ್ತು.

2023ರ ಕೂಟ ಆತಿಥ್ಯಕ್ಕೆ ಬಿಡ್‌
2023ರ ಎಎಫ್ ಸಿ ಏಶ್ಯನ್‌ ಗೇಮ್ಸ್‌ ಆತಿಥ್ಯ ಸಲ್ಲಿಸುವ ಬಿಡ್‌ನ‌ಲ್ಲಿ ಭಾರತ ಸಹಿತ ಥಾçಲಂಡ್‌, ಚೀನ ಮತ್ತು ದಕ್ಷಿಣ ಕೊರಿಯ ಸೇರಿತ್ತು. ಆದರೆ 2018ರ ಆರಂಭದಲ್ಲಿ ಭಾರತ ಹಿಂದೆ ಸರಿದಿತ್ತು. ಆಬಳಿಕ ಥಾçಲಂಡ್‌ ಮತ್ತು ದಕ್ಷಿಣ ಕೊರಿಯ ಹಿಂದೆ ಸರಿದ ಕಾರಣ ಚೀನ ಏಕೈಕ ರಾಷ್ಟ್ರವಾಗಿ 2023ರ ಕೂಟ ಆಯೋಜಿಸಲಿದೆ. ಚೀನದ 10 ನಗರಗಳಲ್ಲಿ ಈ ಕೂಟದ ಪಂದ್ಯಗಳು ನಡೆಯಲಿವೆ. 2023ರ ವನಿತಾ ವಿಶ್ವಕಪ್‌ ಕೂಟವನ್ನು ಆಯೋಜಿಸುವ ದಕ್ಷಿಣ ಕೊರಿಯ ಕೂಡ 2027ರ ಕೂಟ ಆತಿಥ್ಯ ವಹಿಸಲು ಬಿಡ್‌ ಸಲ್ಲಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next