ನವದೆಹಲಿ: ಬ್ರಿಟನ್ ಅನ್ನು ಹಿಂದಿಕ್ಕಿ ಭಾರತ ಜಗತ್ತಿನ 5ನೇ ಅತೀದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿ ಹೊರಹೊಮ್ಮಿರುವುದಾಗಿ ವರದಿ ತಿಳಿಸಿದೆ. 2021ರ ಕೊನೆಯ ತ್ರೈಮಾಸಿಕ ವರದಿಯಲ್ಲಿ ಭಾರತದ ಜಗತ್ತಿನ 5ನೇ ಆರ್ಥಿಕತೆ ಹೊಂದಿದ ದೇಶವಾಗಿರುವುದಾಗಿ ಹೇಳಿದೆ.
ಇದನ್ನೂ ಓದಿ:ಮುಂದಿನ ಬಾರಿ ಮೋದಿಯವರನ್ನು ಶಿವಮೊಗ್ಗಕ್ಕೆ ಕರೆಸುತ್ತೇವೆ: ಯಡಿಯೂರಪ್ಪ ಹೇಳಿಕೆ
ಆರ್ಥಿಕತೆಯಲ್ಲಿ ಬ್ರಿಟನ್ 6ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಭಾರತ 5ನೇ ಸ್ಥಾನದಲ್ಲಿರುವುದಾಗಿ ವರದಿ ವಿವರಿಸಿದೆ. ಬ್ರಿಟನ್ ನಲ್ಲಿ ಜೀವನ ನಿರ್ವಹಣೆ ವೆಚ್ಚ ದುಬಾರಿಯಾಗುತ್ತಿರುವುದಾಗಿ ವರದಿ ತಿಳಿಸಿದೆ. ಆರ್ಥಿಕತೆಯಲ್ಲಿ ಭಾರತ ಎರಡನೇ ಬಾರಿ ಬ್ರಿಟನ್ ಅನ್ನು ಹಿಂದಿಕ್ಕಿದೆ. ಈ ಮೊದಲು 2019ರಲ್ಲಿ ಕೂಡಾ ಭಾರತ 5ನೇ ಸ್ಥಾನದಲ್ಲಿರುವುದಾಗಿ ತಿಳಿಸಿದೆ.
ಬ್ಲೂಮ್ ಬರ್ಗ್ ವರದಿಯ ಪ್ರಕಾರ, ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯಲ್ಲಿನ ಸಾಮಾನ್ಯ ನಗದು ಮೊತ್ತ 854.7 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟಿದ್ದು, ಅದೇ ರೀತಿ ಬ್ರಿಟನ್ ನಗದು ಮೊತ್ತ 814 ಬಿಲಿಯನ್ ಡಾಲರ್ ನಷ್ಟಿದೆ.
ಈ ಅಂಕಿಅಂಶವು ಅಮೆರಿಕನ್ ಡಾಲರ್ ಮೊತ್ತದಲ್ಲಿ ನಿಗದಿಪಡಿಸಲಾಗುತ್ತದೆ. ಅಂತಾಷ್ಟ್ರೀಯ ಹಣಕಾಸು ನಿಧಿಯ ಜಿಡಿಪಿಯ ಅಂಕಿಅಂಶದ ಆಧಾರದ ಮೇಲೆ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿಯೂ ಭಾರತ ಆರ್ಥಿಕತೆಯಲ್ಲಿ ಮುನ್ನಡೆ ಸಾಧಿಸಿದೆ.