ಇಂದೋರ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲಿ ಭಾರತ ಸುಲಭ ಜಯ ಸಾಧಿಸಿದೆ. ಈ ಮೂಲಕ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ವಶಪಡಿಸಿಕೊಂಡಿದೆ.
ಇಲ್ಲಿನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 399 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಶತಕ ಬಾರಿಸಿದರೆ, ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿದರು.
ಈ ಪಂದ್ಯದಲ್ಲಿ ಭಾರತವು 18 ಸಿಕ್ಸರ್ ಬಾರಿಸಿತು. ಗಿಲ್ ನಾಲ್ಕು, ಅಯ್ಯರ್ ಮತ್ತು ರಾಹುಲ್ ತಲಾ ಮೂರು, ಇಶಾನ್ ಕಿಶನ್ ಎರಡು ಮತ್ತು ಸೂರ್ಯ ಆರು ಸಿಕ್ಸರ್ ಹೊಡೆದರು. ಇದೇ ವೇಳೆ ಏಕದಿನ ಕ್ರಿಕೆಟ್ ನಲ್ಲಿ ಮೂರು ಸಾವಿರ ಸಿಕ್ಸರ್ ಬಾರಿಸಿದ ಮೊದಲ ದೇಶ ಎಂಬ ದಾಖಲೆ ಬರೆಯಿತು.
ಇದನ್ನೂ ಓದಿ:Jawan:ಕ್ಷುಲ್ಲಕ ವಿಚಾರಕ್ಕೆ ಜಗಳ; ಯೋಧನಿಂದ ಕಪಾಳಮೋಕ್ಷ, ಸ್ಥಳದಲ್ಲೇ ಪ್ರಾಣಬಿಟ್ಟ ವ್ಯಕ್ತಿ
ವೆಸ್ಟ್ ಇಂಡೀಸ್ 2953 ಸಿಕ್ಸರ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 2566 ಸಿಕ್ಸರ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆಶ್ಚರ್ಯಕರವಾಗಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ತಂಡಗಳು ಆಕ್ರಮಣಕಾರಿ ಕ್ರಿಕೆಟ್‌ಗೆ ಹೆಸರುವಾಸಿಯಾಗಿದ್ದರೂ ಈ ಶ್ರೇಯಾಂಕದಲ್ಲಿ ಮೊದಲ ಮೂರರಲ್ಲಿಲ್ಲ.