Advertisement

ಎಪ್ರಿಲ್ 2: ಭಾರತೀಯ ಕ್ರಿಕೆಟ್ ನ ಸುವರ್ಣ ದಿನ, ವಿಶ್ವಕಪ್ ಗೆಲುವಿಗೆ 9 ವರ್ಷ

09:15 AM Apr 03, 2020 | keerthan |

ಮುಂಬೈ: “ಇಂಡಿಯಾ ಲಿಫ್ಟ್ ದಿ ವರ್ಲ್ಡ್ ಕಪ್. ಆಫ್ಟರ್ 28 ಇಯರ್ಸ್.. ” ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದೂ ಮರೆಯದ ಸಾಲುಗಳಿವು. ಮುಂಬೈ ವಾಂಖೆಡೆ ಅಂಗಳದಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಲಂಕಾದ ಕುಲಶೇಖರನ ಬಾಲ್ ಗೆ ಸಿಕ್ಸ್ ಬಾರಿಸಿ ಜಯ ತಂದಿತ್ತರೆ, ಇಡೀ ದೇಶವೇ ಹುಚ್ಚೆದ್ದು ಕುಣಿದಿತ್ತು. ಭಾರತದ ಏರಡನೇ ವಿಶ್ವಕಪ್ ಸಂಭ್ರಮಕ್ಕೆ ಈಗ ಒಂಬತ್ತು ವರ್ಷದ ಸಂಭ್ರಮ.

Advertisement

2011 ಎಪ್ರಿಲ್ 2ರಂದು ಭಾರತ ಲಂಕಾ ವಿರುದ್ಧ ಆರು ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ ಜಯವರ್ಧನೆ ಶತಕದ ನೆರವಿನಿಂದ 275 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಬ ಭಾರತ, ಗೌತಮ್ ಗಂಭೀರ್ ಅವರ 97 ರನ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 91 ರನ್ ನೆರವಿನಿಂದ ಜಯಭೇರಿ ಬಾರಿಸಿತ್ತು.

ತನ್ನ ಕೊನೆಯ ವಿಶ್ವಕಪ್ ಆಡಿದ ಸಚಿನ್ ತೆಂಡೂಲ್ಕರ್ ಅವರನ್ನು ಟೀಂ ಇಂಡಿಯಾ ಆಟಗಾರರು ಮೈದಾನದ ಸುತ್ತ ಹೆಗಲಲ್ಲಿ ಹೊತ್ತು ಮೆರವಣಿಗೆ ನಡೆಸಿದ್ದರು. ಭಾರತದ 28 ವರ್ಷಗಳ ಬಳಿಕ 50 ಓವರ್ ಗಳ ವಿಶ್ವಕಪ್ ಗೆದ್ದು ಬೀಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next