Advertisement
ರೋಹಿತ್ ಶರ್ಮ ಅವರನ್ನು ಬೇಗನೇ ಕಳೆದುಕೊಂಡರೂ ಧವನ್ ಮತ್ತು ನಾಯಕ ವಿರಾಟ್ ಕೊಹ್ಲಿ ಬಹಳ ಎಚ್ಚರಿಕೆಯಿಂದ ಕಿವೀಸ್ ದಾಳಿಯನ್ನು ಎದುರಿಸಿದರು. ದ್ವಿತೀಯ ವಿಕೆಟಿಗೆ 57 ರನ್ನುಗಳ ಜತೆ ಯಾಟದಲ್ಲಿ ಪಾಲ್ಗೊಂಡ ಅವರಿಬ್ಬರು ಉತ್ತಮ ಅಡಿಪಾಯ ಹಾಕಿಕೊಟ್ಟರು. ಕೊಹ್ಲಿ 29 ರನ್ ಗಳಿಸಿ ಗ್ರ್ಯಾಂಡ್‌ಹೋಮ್‌ಗೆ ವಿಕೆಟ್ ಒಪ್ಪಿಸಿದರು.
Related Articles
ವೇಗಿ ಭುವನೇಶ್ವರ್ ಸಹಿತ ಭಾರತೀಯ ಬೌಲರ್‌ಗಳ ಉತ್ತಮ ಪ್ರಯತ್ನದ ಫಲವಾಗಿ ನ್ಯೂಜಿಲ್ಯಾಂಡ್ ಸಾಧಾರಣ ಮೊತ್ತ ಪೇರಿಸುವಂತಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ಆರಂಭದಲ್ಲಿಯೇ ಎಡವಿತು. ಭುವನೇಶ್ವವರ್, ಬುಮ್ರಾ ಮತ್ತು ಚಾಹಲ್ ಅವರ ನಿಖರ ದಾಳಿಯಿಂದಾಗಿ ರನ್ ಗಳಿಸಲು ಒದ್ದಾಡಿದ ಕಿವೀಸ್ ಆಟಗಾರರು 27 ರನ್ನಿಗೆ 3 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ರಾಸ್ ಟಯ್ಲರ್ ಮತ್ತು ಟಾಮ್ ಲಾಥಂ ಮತ್ತೆ ತಂಡವನ್ನು ಆಧರಿಸುವ ಸೂಚನೆ ಇತ್ತರು. ಆದರೆ ಅವರಿಬ್ಬರ ಜತೆಯಾಟ ಹೆಚ್ಚು ಹೊತ್ತು ನಿಲ್ಲಲಿಲ್ಲ.
Advertisement
ಟಯ್ಲರ್ ಮತ್ತು ಲಾಥಂ ನಾಲ್ಕನೇ ವಿಕೆಟಿಗೆ 31 ರನ್ ಪೇರಿಸಿದ ಬಳಿಕ ಬೇರ್ಪಟ್ಟರು. ಉತ್ತಮವಾಗಿ ಆಡುತ್ತಿದ್ದ ಟಯ್ಲರ್ 21 ರನ್ ಗಳಿಸಿದ ವೇಳೆ ಪಾಂಡ್ಯ ಬೌಲಿಂಗ್‌ನಲ್ಲಿ ಔಟಾದರು. ಆಬಳಿಕ ಲಾಥಂ ಮತ್ತು ಹೆನ್ರಿ ನಿಕೋಲ್ಸ್ ತಾಳ್ಮೆಯ ಆಟವಾಡಿ ಐದನೇ ವಿಕೆಟಿಗೆ 60 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಈ ಹಂತದಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಲಾಥಂ ಅಕ್ಷರ್ ಪಟೇಲ್ ಎಸೆತವನ್ನು ತಿಳಿಯಲು ವಿಫಲರಾಗಿ ಕ್ಲೀನ್‌ಬೌಲ್ಡ್ ಆದರು. ಅವರು 62 ಎಸೆತ ಎದುರಿಸಿ ಕೇವಲ 2 ಬೌಂಡರಿ ನೆರವಿನಿಂದ 38 ರನ್ ಹೊಡೆದಿದ್ದರು.
ಹೆನ್ನಿ ನಿಕೋಲ್ಸ್ ಮತ್ತು ಗ್ರ್ಯಾಂಡ್‌ಹೋಮ್ ಜವಾಬ್ದಾರಿಯಿಂದ ಆಡಿ ತಂಡದ ಮೊತ್ತ ಏರಿಸಲು ನೆರವಾದರು. ಆರನೇ ವಿಕೆಟಿಗೆ ಮತ್ತೆ 47 ರನ್ನುಗಳ ಜತೆಯಾಟ ದಾಖಲಾಯಿತು. ಇದರಿಂದ ನ್ಯೂಜಿಲ್ಯಾಂಡ್ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು. ನಿಕೋಲ್ಸ್ 62 ಎಸೆತಗಳಿಂದ 42 ರನ್ ಹೊಡೆದರು. ಇದು ನ್ಯೂಜಿಲ್ಯಾಂಡ್ ಆಟಗಾರನೋರ್ವನ ಶ್ರೇಷ್ಠ ಇನ್ನಿಂಗ್ಸ್ ಆಗಿದೆ. ಗ್ರ್ಯಾಂಡ್‌ಹೋಮ್ ಕೇವಲ 40 ಎಸೆತಗಳಲ್ಲಿ 41 ರನ್ ಸಿಡಿಸಿ ಜಾಹಲ್‌ಗೆ ವಿಕೆಟ್ ಒಪ್ಪಿಸಿದರು. ಬಿಗು ದಾಳಿ ಸಂಘಟಿಸಿದ ಭುವನೇಶ್ವರ್ 45 ರನ್ನಿಗೆ 3 ವಿಕೆಟ್ ಕಿತ್ತರೆ ಬುಮ್ರಾ ಮತ್ತು ಚಾಹಲ್ ತಲಾ ಎರಡು ವಿಕೆಟ್ ಪಡೆದರು.
ಸ್ಕೋರ್ಪಟ್ಟಿನ್ಯೂಜಿಲ್ಯಾಂಡ್
ಮಾರ್ಟಿನ್ ಗಪ್ಟಿಲ್ ಸಿ ಧೋನಿ ಬಿ ಕುಮಾರ್ 11
ಕಾಲಿನ್ ಮುನ್ರೊ ಬಿ ಕುಮಾರ್ 10
ಕೇನ್ ವಿಲಿಯಮ್ಸನ್ ಎಲ್‌ಬಿಡಬ್ಲ್ಯು ಬಿ ಬುಮ್ರಾ 3
ರಾಸ್ ಟಯ್ಲರ್ ಸಿ ಧೋನಿ ಬಿ ಪಾಂಡ್ಯ 21
ಟಾಮ್ ಲಾಥಂ ಬಿ ಅಕ್ಷರ್ 38
ಹೆನ್ರಿ ನಿಕೋಲ್ಸ್ ಬಿ ಕುಮಾರ್ 42
ಗ್ರ್ಯಾಂಡ್‌ಹೋಮ್ ಸಿ ಬುಮ್ರಾ ಬಿ ಚಾಹಲ್ 41
ಮೈಕಲ್ ಸ್ಯಾಂಟ್ನರ್ ಸಿ ಕೊಹ್ಲಿ ಬಿ ಬುಮ್ರಾ 29
ಆ್ಯಡಂ ಮಿಲೆ° ಎಲ್‌ಬಿಡಬ್ಲ್ಯು ಬಿ ಚಾಹಲ್ 0
ಟಿಮ್ ಸೌಥಿ ಔಟಾಗದೆ 25
ಟ್ರೆಂಟ್ ಬೌಲ್ಟ್ ಔಟಾಗದೆ 2 ಇತರ: 8
ಒಟ್ಟು ( 50 ಓವರ್‌ಗಳಲ್ಲಿ 9 ವಿಕೆಟಿಗೆ) 230
ವಿಕೆಟ್ ಪತನ: 1-20, 2-25, 3-27, 4-58, 5-118, 6-165, 7-188, 8-188, 9-220 ಬೌಲಿಂಗ್:
ಭುವನೇಶ್ವರ್ ಕುಮಾರ್ 10-0-45-3
ಜಸ್‌ಪ್ರೀತ್ ಬುಮ್ರಾ 10-2-38-2
ಕೇದಾರ್ ಜಾಧವ್ 8-0-31-0
ಹಾರ್ದಿಕ್ ಪಾಂಡ್ಯ 4-0-23-1
ಅಕ್ಷರ್ ಪಟೇಲ್ 10-1-54-1
ಯುಜ್ವೇಂದ್ರ ಚಾಹಲ್ 8-1-36-2 ಭಾರತ
ರೋಹಿತ್ ಶರ್ಮ ಸಿ ಮುನ್ರೊ ಬಿ ಸೌಥಿ 7
ಶಿಖರ್ ಧವನ್ ಸಿ ಟಯ್ಲರ್ ಬಿ ಮಿಲೆ° 68
ವಿರಾಟ್ ಕೊಹ್ಲಿ ಸಿ ಲಾಥಂ ಬಿ ಗ್ರ್ಯಾಂಡ್‌ಹೋಮ್ 29
ದಿನೇಶ್ ಕಾರ್ತಿಕ್ ಔಟಾಗದೆ 64
ಹಾರ್ದಿಕ್ ಪಾಂಡ್ಯ ಸಿ ಮಿಲೆ° ಬಿ ಸ್ಯಾಂಟ್ನರ್ 30
ಎಂಎಸ್ ಧೋನಿ ಔಟಾಗದೆ 18 ಇತರ 16
ಒಟ್ಟು (46 ಓವರ್‌ಗಳಲ್ಲಿ 4 ವಿಕೆಟಿಗೆ) 232
ವಿಕೆಟ್ ಪತನ: 1-22, 2-79, 3-145. 4-204 ಬೌಲಿಂಗ್:
ಟಿಮ್ ಸೌಥಿ 9-1-60-1
ಟ್ರೆಂಟ್ ಬೌಲ್ಟ್ 10-0-54-0
ಆ್ಯಡಂ ಮಿಲೆ° 8-1-21-1
ಮೈಕಲ್ ಸ್ಯಾಂಟ್ನರ್ 10-0-38-1
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 7-0-40-1
ಕಾಲಿನ್ ಮುನ್ರೊ 2-0-12-0
ಪಂದ್ಯಶ್ರೇಷ್ಠ: ಭುವನೇಶ್ವರ್ ಕುಮಾರ್