ಮೆಲ್ಬರ್ನ್: ಪಾಕಿಸ್ಥಾನ, ಚೀನ ಮತ್ತು ಉತ್ತರ ಕೊರಿಯಾಕ್ಕೆ ಎಚ್ಚರಿಕೆ ರವಾನೆಯಾಗಿದೆ.. ಸದಾ ತಕರಾರು ತೆಗೆಯುವ ಈ ಮೂರೂ ರಾಷ್ಟ್ರಗಳ ಹೆಸರನ್ನು ಎತ್ತದೆಯೇ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ಶುಕ್ರವಾರ ನಡೆದ ಕ್ವಾಡ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ, ಇಂಡೋ-ಪೆಸಿಫಿಕ್ ವಲಯದಲ್ಲಿನ ಶಾಂತಿ ಹಾಗೂ ಸ್ಥಿರತೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಈ ಮೂರೂ ದೇಶಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ಜತೆಗೆ ಬೇರೆ ದೇಶಗಳ ಮೇಲೆ ದಾಳಿ ನಡೆಸಲು ಉಗ್ರರಿಗೆ ಕುಮ್ಮಕ್ಕು ನೀಡುವುದನ್ನು ಖಂಡಿಸಲಾಗಿದ್ದು, ಭಯೋತ್ಪಾದಕರ ಸ್ವರ್ಗಗಳನ್ನು ನಿರ್ಮೂಲನೆ ಮಾಡಲು ಒಗ್ಗೂಡಿ ಹೋರಾಡುವ ನಿರ್ಧಾರಕ್ಕೂ ಬರಲಾಗಿದೆ.
ಇಂಡೋ-ಪೆಸಿಫಿಕ್ ವಲಯ ಮುಕ್ತವಾಗಿ ಇರುವಂತಾಗಬೇಕು ಎಂದು ಕ್ವಾಡ್ ರಾಷ್ಟ್ರಗಳಾದ ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ನ ವಿದೇಶಾಂಗ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಈ ವಲಯದಲ್ಲಿ ಈಗಾಗಲೇ ಚೀನ ತನ್ನ ಕಂಬಂಧಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಮಾತುಗಳು ಮಹತ್ವ ಪಡೆದಿವೆ.
ಇದನ್ನೂ ಓದಿ:ಫೆ.16ವರೆಗೆ ಪದವಿ ಕಾಲೇಜು ರಜೆ: ಸಚಿವ ಅಶ್ವತ್ಥನಾರಾಯಣ
ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತನಾಡಿ, ಅಂತಾರಾಷ್ಟ್ರೀಯ ನಿಯಮಗಳಿಗೆ ಅನ್ವಯವಾಗುವಂತೆ ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತೆ ಮತ್ತು ನೌಕಾಯಾನದ ಸ್ವಾತಂತ್ರ್ಯ ಇರಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. 2021ರ ಫೆಬ್ರವರಿಯಲ್ಲಿ ಕ್ವಾಡ್ ವಿದೇಶಾಂಗ ಸಚಿವರ ಸಮ್ಮೇಳನದ ಅನಂತರ ಜಗತ್ತಿನ ಆರ್ಥಿಕ ಮತ್ತು ರಾಜಕೀಯ ವಿಚಾರ ಮತ್ತು ವೇದಿಕೆಗಳು ಮತ್ತಷ್ಟು ಸಂಕೀರ್ಣಗೊಂಡಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಂಧವ್ಯದಲ್ಲಿ ರಕ್ಷಣೆ ಮತ್ತು ಭದ್ರತಾ ವಿಚಾರಗಳೇ ಪ್ರಧಾನವಾಗಿ ಪ್ರಸ್ತಾವವಾಗಿವೆ.