Advertisement

ಮೊಹಾಲಿ: ಕೊಹ್ಲಿ ಜತೆ ಎಲ್ಲರೂ ಸಿಡಿಯಲಿ

12:35 AM Mar 10, 2019 | Team Udayavani |

ಮೊಹಾಲಿ: ಆಸ್ಟ್ರೇಲಿಯ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಸೋತು ಸರಣಿ 2-1 ಅಂತರಕ್ಕೆ ತಂದಿರುವ ಭಾರತಕ್ಕೆ ರವಿವಾರ ನಡೆಯಲಿರುವ 4ನೇ ಪಂದ್ಯದಿಂದ ಸರಣಿ ಜಯಿಸುವ ಅವಕಾಶ ದೊರಕಿದೆ. ಅಂತೆಯೇ ಈ ಪಂದ್ಯದಲ್ಲೂ ಗೆದ್ದ ಸರಣಿ ಸಮಬಲಗೊಳಿಸುವ ಇರಾದೆ ಆಸ್ಟ್ರೇಲಿಯ ತಂಡದಲ್ಲಿದೆ.

Advertisement

ವಿಶ್ವಕಪ್‌ ಕ್ಯಾಪ್‌ ತೊಡಲು ಕಾತುರರಾಗಿರುವ ಆಟಗಾರರಿಗೆ ಒಂದು ಅವಕಾಶ ನೀಡುವ ಯೋಜನೆಯಲ್ಲಿರುವ ನಾಯಕ ವಿರಾಟ್‌ ಕೊಹ್ಲಿ ಹಾಗೂ ಟೀಂ ಮ್ಯಾನೆಜ್‌ಮೆಂಟ್‌ ಉಳಿದಿರುವ 2 ಪಂದ್ಯಗಳಿಗಾಗಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದೆ.

ತಂಡದಲ್ಲಿ 2 ಬದಲಾವಣೆ
ಮಹೇಂದ್ರ ಸಿಂಗ್‌ ಧೋನಿ ತವರಿನಂಗಳದಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿ ಉಳಿದೆರಡು ಪಂದ್ಯಗಳಿಂದ ವಿಶ್ರಾಂತಿ ಪಡೆದರೆ, ರಿಷಬ್‌ ಪಂತ್‌ ತಂಡಕ್ಕೆ ಮರಳಿದ್ದು, ವಿಶ್ವಕಪ್‌ಗೆ ಟಿಕೆಟ್‌ ಪಡೆಯುವ ಅವಕಾಶವನ್ನು ಕಲ್ಪಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಏಕದಿನ ಪಂದ್ಯಗಳಲ್ಲಿ ಪಂತ್‌ ಕೇವಲ ಬ್ಯಾಟ್ಸ್‌ಮನ್‌ ಆಗಿ ಮೈದಾನಕ್ಕಿಳಿದಿದ್ದರು. ಈ ಬಾರಿ ಧೋನಿಗೆ ವಿಶ್ರಾಂತಿ ನೀಡಿರುವುದರಿಂದ ಕೀಪರ್‌ ಸ್ಥಾನ ಕೂಡ ರಿಷಬ್‌ಗ ಲಭಿಸಿದೆ. ಇದರೊಂದಿಗೆ ಬೌಲರ್‌ ಮೊಹಮ್ಮದ್‌ ಶಮಿ ಗಾಯಾಳಾಗಿ ತಂಡದಿಂದ ಹೊರ ಉಳಿದಿದ್ದು, ಅವರ ಬದಲಿಗೆ ಭುವನೇಶ್ವರ್‌ ಕುಮಾರ್‌ ತಂಡದಲ್ಲಿದ್ದಾರೆ.

*ಮತ್ತೆ, ಮತ್ತೆ ಕೈಕೊಡುತ್ತಿದೆ ಅಗ್ರ ಕ್ರಮಾಂಕ
ಈ ಸರಣಿಯಲ್ಲಿ ಭಾರತಕ್ಕೆ ತಲೆನೋವಾಗಿರುವುದು ಟಾಪ್‌ ಆರ್ಡರ್‌ ಬ್ಯಾಟಿಂಗ್‌. ಕಳೆದ 3 ಪಂದ್ಯಗಳಲ್ಲಿ ಆರಂಭಕಾರರಾಗಿ ಕಣಕ್ಕಿಳಿದ ಆಟಗಾರರು ಸಂಪೂರ್ಣ ವಿಫ‌ಲರಾಗಿದ್ದು, ಮಾಧ್ಯಮ ಕ್ರಮಾಂಕದ ಆಟಗಾರರ ಮೇಲೆ ಒತ್ತಡದ ಬಿದ್ದಿದೆ. ಮೊದಲ ವಿಕೆಟಿಗೆ ಬರುವ ನಾಯಕ ಕೊಹ್ಲಿ ಆಸರೆಯಾಗಿ ನಿಂತಿದ್ದಾರೆ. ಕೊಹ್ಲಿ 3 ಪಂದ್ಯಗಳಲ್ಲಿ 2 ಶತಕ ಸೇರಿದಂತೆ 283 ರನ್‌ ಬಾರಿಸಿದ್ದರೆ, ದ್ವಿತೀಯ ಸ್ಥಾನವನ್ನು ಕೇಧಾರ್‌ ಜಾದವ್‌ ಅಲಂಕರಿಸಿದ್ದಾರೆ (118). ರೋಹಿತ್‌ ಶರ್ಮ ಅವರ ಒಟ್ಟು ಗಳಿಕೆ ಕೇವಲ 51 ರನ್‌. ಇದಕ್ಕಿಂತಲೂ ತೀರಾ ಕಳಪೆಯೆಂದರೆ ಶಿಖರ್‌ ಧವನ್‌, ಅಂಬಾಟಿ ರಾಯುಡು ಆಟ. ಈ ವೇಳೆ ಕೆ.ಎಲ್‌ ರಾಹುಲ್‌ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದು, ಧವನ್‌ ಅಥವಾ ರಾಯುಡು ಅವರ ಸ್ಥಾನ ಕಸಿದುಕೊಳ್ಳುವರೇ ಎಂಬುದು ಅನುಮಾನ ಕಾಡಿದೆ.. ವಿಶ್ವಕಪ್‌ಗ್ೂ ಮುನ್ನ ಬ್ಯಾಟಿಂಗ್‌ ಲೈನ್‌ಅಪ್‌ ಸಂಪೂರ್ಣವಾಗಿ ಬಲಿಷ್ಠವಾಗಬೇಕಾದ ಅನಿವಾರ್ಯತೆ ತಂಡದ ಮೇಲಿದೆ.

ತಂಡಕ್ಕೆ ನೆರವಾಗುವರೇ ಭುವಿ?
ಆರಂಭದಲ್ಲಿ ಧಾರಾಳಾವಾಗಿ ರನ್‌ ಬಿಟ್ಟುಕೊಡುವ ಬೌಲರ್ ಡೆತ್‌ ಓವರ್‌ಗಳಲ್ಲಿ ಬೌಲಿಂಗ್‌ ಮೇಲೆ ಹಿಡಿತ ಸಾಧಿಸಿಕೊಳ್ಳಲಾರಂಭಿಸಿದ್ದಾರೆ. ಇದು ಉತ್ತಮ ಅಂಶವಾಗಿದ್ದರೂ ಬೌಲಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ಅಗತ್ಯ. ಮೊಹಮ್ಮದ್‌ ಶಮಿ ತಂಡದಿಂದ ಹೊರಗಹೋಗಿದ್ದು, ಅವರ ಸ್ಥಾನಕ್ಕೆ ಭುವನೇಶ್ವರ್‌ ಕುಮಾರ್‌ ಆಗಮನವಾಗಿದೆ. ಈ ಬದಲಾವಣೆ ತಂಡಕ್ಕೆ ನೆರವಾಗುವುದೇ ಎಂಬುದು ಸದ್ಯ ಅಭಿಮಾನಿಗಳಲ್ಲಿರುವ ಕುತೂಹಲ.

Advertisement

ಆಸ್ಟ್ರೇಲಿಯ ಸಂಘಟಿತ ಪ್ರದರ್ಶನ
ಮೊದಲೆರಡು ಪಂದ್ಯಗಳ ಸೋಲಿನಿಂದ ಎಚ್ಚೆತ್ತಕೊಂಡಿರುವ ಫಿಂಚ್‌ ಪಡೆ 3ನೇ ಏಕದಿನದಲ್ಲಿ ಭರ್ಜರಿ ಪ್ರದರ್ಶನ ನೀಡಿತ್ತು. ನಾಯಕ ಫಿಂಚ್‌ ಫಾರ್ಮ್ಗೆ ಮರಳುತ್ತಿದ್ದರೆ, ಉಸ್ಮಾನ್‌ ಖ್ವಾಜಾ ಶತಕ ಬಾರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. 4ನೇ ಏಕದಿನದಲ್ಲೂ ಇದೇ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ. ಬೌಲಿಂಗ್‌ನಲ್ಲೂ ಕಾಂಗರು ಪಡೆ ಬಲಿಷ್ಠವಾಗಿ ತೋರ್ಪಟ್ಟಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿ ಸಮಬಲಕ್ಕೆ ತರುವ ನಿಟ್ಟಿನಲ್ಲಿ ಮೈದಾನಕ್ಕಿಳಿಯಲು ಆಸ್ಟ್ರೇಲಿಯ ಸಜ್ಜಾಗಿದೆ.

ಸಂಭಾವ್ಯ ತಂಡ
ಭಾರತ
: ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ (ನಾಯಕ), ಅಂಬಾಟಿ ರಾಯುಡು, ರಿಷಭ್‌ ಪಂತ್‌, ಕೇಧಾರ್‌ ಜಾದವ್‌, ವಿಜಯ್‌ ಶಂಕರ್‌, ಭುವನೇಶ್ವರ್‌ ಕುಮಾರ್‌, ಕುಲ್‌ದೀಪ್‌ ಯಾದವ್‌, ಯಜವೇಂದ್ರ ಚಾಹಲ್‌, ಮೊಹಮ್ಮದ್‌ ಶಮಿ/ಜಸ್‌ಪ್ರೀತ್‌ ಬುರ್ಮ.

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ), ಉಸ್ಮನ್‌ ಖ್ವಾಜಾ, ಶಾನ್‌ ಮಾರ್ಷ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಗ್ಲೆನ್‌ ಮಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ನಥನ್‌ ಲಿಯೋನ್‌, ಜೇ ರಿಚರ್ಡ್‌ಸನ್‌, ಆ್ಯಡಂ ಝಂಪ.

ಮೋಹಾಲಿಯ ಬಿಂದ್ರಾ ಸ್ಟೇಡಿಯಂ ಒಟ್ಟು 24 ಏಕದಿನ ಪಂದ್ಯ ನಡೆದಿದೆ. ಇದರಲ್ಲಿ ಭಾರತ 15 ಪಂದ್ಯಗಳನ್ನು ಆಡಿದ್ದು, 10ರಲ್ಲಿ ಜಯಿಸಿ, 5ರಲ್ಲಿ ಸೋತಿದೆ. ಐದರಲ್ಲಿ 3 ಪಂದ್ಯಗಳಲ್ಲಿ ಸೋತಿದ್ದು ಆಸ್ಟ್ರೇಲಿಯ ವಿರುದ್ಧವಾದರೇ ಉಳಿದೆರಡು ಪಂದ್ಯಗಳಲ್ಲಿ ಸಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧ ಮುಗ್ಗರಿಸಿದೆ. 1996ರಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಪಂದ್ಯವನ್ನು ಮಾತ್ರ ಗೆದ್ದಿರುವ ಭಾರತ ಆಸೀಸ್‌ ವಿರುದ್ಧ ಆನಂತರದ ಮೂರೂ ಪಂದ್ಯಗಳಲ್ಲೂ ಪರಾಭವಗೊಂಡಿದೆ. 1996ರ ಪಂದ್ಯದಲ್ಲಿ ಭಾರತ ಕಪ್ತಾನಾಗಿದ್ದವರು ಸಚಿನ್‌ ತೆಂಡುಲ್ಕರ್‌. ಇಲ್ಲಿ ಭಾರತ ತಂಡ ಆಸ್ಟ್ರೇಲಿಯಕ್ಕೆ 289 ರನ ಗುರಿ ನೀಡಿತ್ತು. ಆದರೆ ಆಸ್ಟ್ರೇಲಿಯ 284 ರನ್‌ಗೆ ಆಲೌಟ್‌ ಆಗಿ 5 ರನ್‌ಗಳ ಅಂತರದಿಂದ ಸೋತಿತು. 2006, 2009, 2013ರ ಪಂದ್ಯಗಳಲ್ಲಿ ಆಸ್ಟ್ರೇಲಿಯ ಭಾರತದ ಮೇಲೆ ಸವಾರಿ ಮಾಡಿತ್ತು.

ಮೋಹಾಲಿಯಲ್ಲಿ ಭಾರತ-ಆಸ್ಟ್ರೇಲಿಯ
ವರ್ಷ    ಫ‌ಲಿತಾಂಶ
1996    ಭಾರತಕ್ಕೆ 5 ರನ್‌ ಜಯ
2006    ಆಸ್ಟ್ರೇಲಿಯಕ್ಕೆ 6 ವಿಕೆಟ್‌ ಗೆಲುವು
2009    ಆಸ್ಟ್ರೇಲಿಯಕ್ಕೆ 24 ರನ್‌ ಜಯ
2013    ಆಸ್ಟ್ರೇಲಿಯಕ್ಕೆ 4 ವಿಕೆಟ್‌ ಗೆಲುವು

Advertisement

Udayavani is now on Telegram. Click here to join our channel and stay updated with the latest news.

Next