Advertisement

IPL; ಫಿಲಿಪ್‌ ಸಾಲ್ಟ್ ಅಬ್ಬರ: ಕೋಲ್ಕತಾಗೆ 4ನೇ ಜಯ

09:16 PM Apr 14, 2024 | Team Udayavani |

 ಕೋಲ್ಕತ: ಫಿಲಿಪ್‌ ಸಾಲ್ಟ್ ಸ್ಫೋಟಕ ಬ್ಯಾಟಿಂಗ್‌, ಶ್ರೇಯಸ್‌ ಅಯ್ಯರ್‌ ನಾಯಕನ ಆಟದ ಜತೆಗೆ, ಮಿಚೆಲ್‌ ಸ್ಟಾರ್ಕ್‌ ಘಾತಕ ಬೌಲಿಂಗ್‌ಗೆ ಲಕ್ನೋ ಸೂಪರ್‌ ಜೈಂಟ್ಸ್‌ ಪಲ್ಟಿಯಾಗಿದೆ. ಭಾನುವಾರ, ತವರಿನಲ್ಲಿ ಕೆ.ಎಲ್‌.ರಾಹುಲ್‌ ಪಡೆಯ ವಿರುದ್ಧ 8 ವಿಕೆಟ್‌ಗಳ ಸುಲಭ ಜಯ ಗಳಿಸಿರುವ ಕೋಲ್ಕತ, ಈ ಆವೃತ್ತಿಯಲ್ಲಿ 4ನೇ ಗೆಲುವಿನ ಸಂಭ್ರಮಾಚರಿಸಿದೆ.

Advertisement

ಲಕ್ನೋ ನೀಡಿದ್ದ 162 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಕೋಲ್ಕತ, ಆರಂಭಿಕ ಬ್ಯಾಟರ್‌ ಸುನೀಲ್‌ ನಾರಾಯಣ್‌ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆದರೆ ಮತ್ತೂಬ್ಬ ಓಪನರ್‌ ಸಾಲ್ಟ್ , ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 47 ಎಸೆತಗಳಲ್ಲಿ ಬರೋಬ್ಬರಿ 14 ಬೌಂಡರಿ, 3 ಸಿಕ್ಸರ್‌ ಸಹಿತ ಅಜೇಯ 89 ರನ್‌ ಸಿಡಿಸಿದ ಸಾಲ್ಟ್, ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರ ಜತೆಗೆ ಅಯ್ಯರ್‌ (38) ಜವಾಬ್ದಾರಿಯುತ ಅಜೇಯ ಆಟ ಗೆಲುವಿನ ನೆಲೆಯಲ್ಲಿ ನೆರವಾಯಿತು. ಸಾಲ್ಟ್-ಅಯ್ಯರ್‌ 120 ರನ್‌ಗಳ ಜತೆಯಾಟ ತಂಡವನ್ನು ಮೇಲೆತ್ತಿತು. ಹೀಗಾಗಿ ಕೇವಲ 15.4 ಓವರ್‌ನಲ್ಲೇ ಗುರಿ ತಲುಪಿದ ಕೆಕೆಆರ್‌, ಗೆಲುವಿನ ಕೇಕೆ ಹಾಕಿತು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಕ್ನೋಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಂದ ಗಮನಾರ್ಹ ರನ್‌ ಕೊಡುಗೆ ಲಭಿಸಲಿಲ್ಲ. ಆದರೆ, ತಂಡದ ಪರ ಕೊಂಚ ಹೋರಾಟ ನಡೆಸಿದ ರಾಹುಲ್‌ (39), ಆಯುಷ್‌ ಬದೋನಿ (29), ನಿಕೋಲಸ್‌ ಪೂರನ್‌ (45), ತಂಡದ ಮೊತ್ತ 160ರ ಗಡಿ ದಾಟುವಂತೆ ನೋಡಿಕೊಂಡರು. ಲಕ್ನೋ ಇನ್ನಿಂಗ್ಸ್‌ನಲ್ಲಿ ವೇಗಿ ಸ್ಟಾರ್ಕ್‌ 3 ವಿಕೆಟ್‌ ಉರುಳಿಸಿ ನಿಯಂತ್ರಿಸಿದರು.

ಒಂದೇ ಓವರ್‌ನಲ್ಲಿ 10 ಎಸೆತ, 22 ರನ್‌
ಲಕ್ನೋ ಪರ ಕಣಕ್ಕಿಳಿದ ವೆಸ್ಟ್‌ ಇಂಡೀಸ್‌ನ ಯುವ ವೇಗಿ ಶಮಾರ್‌ ಜೋಸೆಫ್, ಕೆಟ್ಟ ದಾಖಲೆಯೊಂದಕ್ಕೆ ಕಾರಣರಾಗಿದ್ದಾರೆ. ಕೋಲ್ಕತ ಇನ್ನಿಂಗ್ಸ್‌ನ ಮೊದಲ ಒಂದೇ ಓವರ್‌ನಲ್ಲೇ ಶಮಾರ್‌, 2 ನೋ ಬಾಲ್‌, 2 ವೈಡ್‌ ಸಹಿತ ಒಟ್ಟ 10 ಎಸೆಗಳನ್ನು ಎಸೆದು 22 ರನ್‌ ನೀಡಿದರು. ಇದು ಐಪಿಎಲ್‌ನಲ್ಲಿ ಬೌಲರ್‌ ಒಬ್ಬ ಎಸೆದ ದೀರ್ಘ‌ ಓವರ್‌ ಆಗಿದೆ.

ಪಂದ್ಯದ ತಿರುವು: ಕೋಲ್ಕತ ಗೆಲುವಿಗೆ ಫಿಲಿಪ್‌ ಸಾಲ್ಟ್ ಸ್ಫೋಟಕ ಬ್ಯಾಟಿಂಗ್‌ಪ್ರಮುಖ ಕಾರಣ. ಆರಂಭದಿಂದಲೇ ಸಾಲ್ಟ್ ಅಬ್ಬರಿಸಿದ್ದರಿಂದ ಗುರಿ ತಲುಪುವುದು ಸುಲಭವಾಯಿತು. ಗೆಲುವಿನ ಗುರಿಯಲ್ಲಿ ಅರ್ಧದಷ್ಟು ರನ್‌, ಸಾಲ್ಟ್ ಒಬ್ಬರಿಂದಲೇ ಬಂದಿತು.

Advertisement

ಸ್ಕೋರ್‌ಪಟ್ಟಿ

ಲಕ್ನೋ ಸೂಪರ್‌ ಜೈಂಟ್ಸ್‌
ಕ್ವಿಂಟನ್‌ ಡಿ ಕಾಕ್‌ ಸಿ ನಾರಾಯಣ್‌ ಬಿ ಅರೋರ 10
ಕೆ.ಎಲ್‌. ರಾಹುಲ್‌ ಸಿ ರಮಣ್‌ದೀಪ್‌ ಬಿ ರಸೆಲ್‌ 39
ದೀಪಕ್‌ ಹೂಡಾ ಸಿ ರಮಣ್‌ದೀಪ್‌ ಬಿ ಸ್ಟಾರ್ಕ್‌ 8
ಆಯುಷ್‌ ಬದೋನಿ ಸಿ ರಘುವಂಶಿ ಬಿ ನಾರಾಯಣ್‌ 29
ಮಾರ್ಕಸ್‌ ಸ್ಟೋಯಿನಿಸ್‌ ಸಿ ಸಾಲ್ಟ್ ಬಿ ಚಕ್ರವರ್ತಿ 10
ನಿಕೋಲಸ್‌ ಪೂರಣ್‌ ಸಿ ಸಾಲ್ಟ್ ಬಿ ಸ್ಟಾರ್ಕ್‌ 45
ಕೃಣಾಲ್‌ ಪಾಂಡ್ಯ ಔಟಾಗದೆ 7
ಅರ್ಷದ್‌ ಖಾನ್‌ ಬಿ ಸ್ಟಾರ್ಕ್‌ 5
ಇತರ 8
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 161

ವಿಕೆಟ್‌ ಪತನ: 1-19, 2-39. 3-78, 4-95, 5-111, 6-155, 7-161.
ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌ 4-0-28-3
ವೈಭವ್‌ ಅರೋರ 3-0-34-1
ಹರ್ಷಿತ್‌ ರಾಣಾ 4-0-35-0
ಸುನೀಲ್‌ ನಾರಾಯಣ್‌ 4-0-17-1
ವರುಣ್‌ ಚಕ್ರವರ್ತಿ 4-0-30-1
ಆ್ಯಂಡ್ರೆ ರಸೆಲ್‌ 1-0-16-1

ಕೋಲ್ಕತಾ ನೈಟ್‌ರೈಡರ್
ಫಿಲಿಪ್‌ ಸಾಲ್ಟ್ ಔಟಾಗದೆ 89
ಸುನೀಲ್‌ ನಾರಾಯಣ್‌ ಸಿ ಸ್ಟೋಯಿನಿಸ್‌ ಬಿ ಮೊಹಿªನ್‌ 6
ಎ. ರಘುವಂಶಿ ಸಿ ರಾಹುಲ್‌ ಬಿ ಮೊಹ್ಸಿನ್‌ 7
ಶ್ರೇಯಸ್‌ ಅಯ್ಯರ್‌ ಔಟಾಗದೆ 38
ಇತರ 22
ಒಟ್ಟು (15.4 ಓವರ್‌ಗಳಲ್ಲಿ 2 ವಿಕೆಟಿಗೆ) 162

ವಿಕೆಟ್‌ ಪತನ: 1-22, 2-42.
ಬೌಲಿಂಗ್‌:
ಶಮರ್‌ ಜೋಸೆಫ್ 4-0-47-0
ಮೊಹ್ಸಿನ್‌ ಖಾನ್‌ 4-0-29-2
ಕೃಣಾಲ್‌ ಪಾಂಡ್ಯ 1-0-14-0
ಯಶ್‌ ಠಾಕೂರ್‌ 2-0-25-0
ಅರ್ಷದ್‌ ಖಾನ್‌ 2-0-24-0
ರವಿ ಬಿಷ್ಣೋಯಿ 2.4-0-17-0
ಪಂದ್ಯಶ್ರೇಷ್ಠ: ಫಿಲಿಪ್‌ ಸಾಲ್ಟ್

Advertisement

Udayavani is now on Telegram. Click here to join our channel and stay updated with the latest news.

Next