Advertisement
ವೇಟ್‌ಲಿಫ್ಟಿಂಗ್‌ನಲ್ಲಿ ದಿನದ ಮತ್ತೂಂದು ಪದಕ ಹರಿಯಾಣದ 18ರ ಹರೆಯದ ದೀಪಕ್ ಲಾಥರ್‌ಗೆ ಒಲಿಯಿತು. ಅವರು ಪುರುಷರ 69 ಕೆಜಿ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ ಕಂಗೊಳಿಸಿದರು. ಗೇಮ್ಸ್ ಪದಕ ಗೆದ್ದ ಭಾರತದ ಅತೀ ಕಿರಿಯ ವೇಟ್‌ಲಿಫ್ಟರ್ ಎಂಬ ದಾಖಲೆಗೆ ದೀಪಕ್ ಪಾತ್ರರಾದರು.
ಸಂಜಿತಾ ಚಾನು ವನಿತೆಯರ 53 ಕೆಜಿ ವಿಭಾಗದಲ್ಲಿ ಒಟ್ಟು 192 ಕೆಜಿ ಭಾರವನ್ನೆತ್ತಿ ಬಂಗಾರದೊಂದಿಗೆ ಸಿಂಗಾರಗೊಂಡರು (84+108). ಒಟ್ಟು 182 ಕೆಜಿ ಎತ್ತಿದ (80+102) ಪಪುವಾ ನ್ಯೂ ಗಿನಿಯ ಲೋವಾ ದಿಕಾ ತೂವಾ ಬೆಳ್ಳಿ ಪದಕ ಗೆದ್ದರೆ, ಕೆನಡಾದ ರಶೆಲ್ ಲೆಬ್ಲಾಂಕ್ ಬಾಝಿನೆಟ್ 181 ಕೆಜಿಯೊಂದಿಗೆ ಕಂಚು ಪಡೆದರು (81+100). ಕಳೆದ ಕೆಲವು ದಿನಗಳಿಂದ ಬೆನ್ನು ನೋವಿನಿಂದ ಸಂಕಟ ಪಡುತ್ತಿದ್ದ ಸಂಜಿತಾ ಚಾನು, ಈ ಸಮಸ್ಯೆಯ ನಡುವೆಯೂ ಚಿನ್ನದ ಪದಕ ಗೆದ್ದದ್ದು ನಿಜಕ್ಕೂ ಅಸಾಮಾನ್ಯ ಸಾಧನೆಯಾಗಿದೆ. “ಈ ಗೇಮ್ಸ್‌ನಲ್ಲಿ ಸಂಜಿತಾಗೆ ಪದಕ ಗೆಲ್ಲಲು ಸಾಧ್ಯವಾಗದು. ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್ ವೇಳೆ ಕಾಡತೊಡಗಿದ ಬೆನ್ನುನೋವಿನಿಂದ ಇನ್ನೂ ಪೂರ್ತಿಯಾಗಿ ಚೇತರಿಸಿಲ್ಲ… ಎಂದೆಲ್ಲ ಜನರು ಆಡಿಕೊಳ್ಳುತ್ತಿದ್ದರು. ಅಲ್ಲದೇ ಸ್ಪರ್ಧೆಯ ದೃಢೀಕರಣ ಪ್ರಕರಣದಿಂದಾಗಿ ಫಿಸಿಯೋಗಳನ್ನು ನಮ್ಮೊಡನೆ ಸ್ಪರ್ಧಾ ತಾಣಕ್ಕೆ ಬಿಡುತ್ತಿರಲಿಲ್ಲ. ಆದರೆ ಈ ಎಲ್ಲ ಸಮಸ್ಯೆಗಳ ನಡುವೆಯೂ ಚಿನ್ನವನ್ನು ಗೆಲ್ಲುವ ಮೂಲಕ ನಾನೀಗ ಎಲ್ಲ ಒತ್ತಡಗಳಿಂದ ಮುಕ್ತಳಾಗಿದ್ದೇನೆ’ ಎಂದಿದ್ದಾರೆ ಸಂಜಿತಾ ಚಾನು.
Related Articles
Advertisement
ಚಿನ್ನ ಗೆದ್ದರೂ ಸಮಾಧಾನವಿಲ್ಲ !ಚಿನ್ನದ ಪದಕ ಗೆದ್ದರೂ ಪರಿಪೂರ್ಣ ಗೇಮ್ಸ್ ದಾಖಲೆಯನ್ನು ನಿರ್ಮಿಸಲಾಗಲಿಲ್ಲ ಎಂಬ ಕೊರಗು ಸಂಜಿತಾ ಚಾನು ಅವರನ್ನು ಕಾಡುತ್ತಿದೆ. ಸಂಜಿತಾ ಮುರಿದದ್ದು ಸ್ನ್ಯಾಚ್ ದಾಖಲೆ ಮಾತ್ರ (84 ಕೆಜಿ). ಆದರೆ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ಅವರಿಂದ ದಾಖಲೆ ಸ್ಥಾಪಿಸಲು ಸಾಧ್ಯವಾಗಲಿಲ್ಲ (108 ಕೆಜಿ). “ಕೊನೆಯ ಪ್ರಯತ್ನದಲ್ಲಿ ವಿಫಲವಾಗದೇ ಇರುತ್ತಿದ್ದಲ್ಲಿ ನಾನು ಕಾಮನ್ವೆಲ್ತ್ ಗೇಮ್ಸ್ ದಾಖಲೆ ನಿರ್ಮಿಸುತ್ತಿದ್ದೆ. ಗೇಮ್ಸ್ ದಾಖಲೆಯೇ ನನ್ನ ಗುರಿ ಆಗಿತ್ತು. ಇದು ಕೈಗೂಡದ ಬಗ್ಗೆ ಬೇಸರವಾಗಿದೆ. ಆದರೆ ಒಟ್ಟಾರೆ ಸಾಧನೆಯಿಂದ ಖುಷಿಯಾಗಿದೆ’ ಎಂದಿದ್ದಾರೆ ಸಂಜಿತಾ ಚಾನು. ಕ್ಲೀನ್ ಆ್ಯಂಡ್ ಜರ್ಕ್‌ನ ಕೊನೆಯ ಯತ್ನದಲ್ಲಿ 113 ಕೆಜಿ ಭಾರವೆತ್ತಲು ಪ್ರಯತ್ನಿಸಿದ ಸಂಜಿತಾ ಇದರಲ್ಲಿ ವಿಫಲರಾಗಿದ್ದರು. 112 ಕೆಜಿ ಎತ್ತಿ ದಾಖಲೆ ಸ್ಥಾಪಿಸುವುದು ತನ್ನ ಗುರಿಯಾಗಿತ್ತು ಎಂದು ಅವರು ಹೇಳಿದರು. “ಬೆನ್ನು ನೋವಿನ ಸಮಸ್ಯೆಯಿಂದಾಗಿ ನನಗೆ ಕಠಿನ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ. ಗೇಮ್ಸ್ ಗಾಗಿ ನಾನು ಅಭ್ಯಾಸ ಮಾಡಿದ್ದು ಕೇವಲ 15 ದಿನ ಮಾತ್ರ. ಆದರೆ ಉತ್ತಮ ಮಟ್ಟದ ಪ್ರೋತ್ಸಾಹ ಲಭಿಸಿದ್ದು ನನ್ನ ಪಾಲಿನ ಅದೃಷ್ಟ. ಹೀಗಾಗಿ ಚಿನ್ನ ಗೆಲ್ಲಲು ಸಾಧ್ಯವಾಯಿತು.