Advertisement

ಆಗರ್ಭ ಶ್ರೀಮಂತರು: ಭಾರತಕ್ಕೆ ಮೂರನೇ ಸ್ಥಾನ

08:03 PM Oct 23, 2022 | Team Udayavani |

ನವದೆಹಲಿ: ಜಗತ್ತಿನಲ್ಲಿ ಮೂರನೇ ಅತ್ಯಂತ ಹೆಚ್ಚಿನ ಸಂಖ್ಯೆಯ ಆಗರ್ಭ ಶ್ರೀಮಂತರು ಇರುವ ರಾಷ್ಟ್ರ ಭಾರತ. 2032ರ ವೇಳೆಗೆ ಅದು ಚೀನವನ್ನು ಹಿಂದಿಕ್ಕಲಿದೆ ಎಂದು ಹೊಸ ಅಧ್ಯಯನವೊಂದರಲ್ಲಿ ದೃಢಪಟ್ಟಿದೆ.

Advertisement

ಹೆನ್ಲೆ ಆ್ಯಂಡ್‌ ಪಾರ್ಟ್‌ನರ್ಸ್‌ ನಡೆಸಿದ ಅಧ್ಯಯನದ ಪ್ರಕಾರ ದೇಶದಲ್ಲಿ ತಾಂತ್ರಿಕ ಕ್ಷೇತ್ರದ ಉದ್ಯಮಿಗಳು, ವಿತ್ತೀಯ ಸಂಸ್ಥೆಗಳ ಮುಖ್ಯಸ್ಥರು, ಸಿಇಒಗಳು ಸೇರಿದಂತೆ 1,132 ಮಂದಿ ಸಿರಿವಂತರು ಇದ್ದಾರೆ.

ಇದೇ ಮೊದಲ ಬಾರಿಗೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸಿರಿವಂತರ ಬಗ್ಗೆ ಅಧ್ಯಯನ ನಡೆಸಲಾಗಿದೆ. 830 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವವರನ್ನು ಆಗರ್ಭ ಶ್ರೀಮಂತರು ಎಂದು ಪರಿಗಣಿಸಲಾಗಿದೆ. ಈ ಪಟ್ಟಿಯಲ್ಲಿ ಅಮೆರಿಕ ಮತ್ತು ಚೀನ ಮೊದಲೆರಡು ಸ್ಥಾನಗಳನ್ನು ಗಳಿಸಿದ್ದರೆ, ಭಾರತ 3ನೇ ಸ್ಥಾನದಲ್ಲಿದೆ.

ಮುಂದಿನ ಹತ್ತು ವರ್ಷಗಳಲ್ಲಿ ಅಂದರೆ 2032ರ ವೇಳೆಗೆ ಅತ್ಯಂತ ಹೆಚ್ಚು ಸಿರಿವಂತರನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ, ಚೀನವನ್ನು ಹಿಂದಿಕ್ಕಲಿದೆ ಎಂದು ಅಧ್ಯಯನ ವರದಿ ಹೇಳಿದೆ. ಜಗತ್ತಿನಲ್ಲಿ ಸರಿ ಸುಮಾರು 25,490 ಮಂದಿ ಆಗರ್ಭ ಸಿರಿವಂತರು ಇದ್ದು, ಈ ಪೈಕಿ ಅಮೆರಿಕದಲ್ಲಿ 9,730 ಮಂದಿ ಇದ್ದಾರೆ. ಯು.ಕೆ.ಯಲ್ಲಿ 968 ಮಂದಿ ಸಿರಿವಂತರು ಇದ್ದು, ನಾಲ್ಕನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next