Advertisement

ಕೋವಿಡ್ ಪರಿಣಾಮ : ಭಾರತ-ಅಮೆರಿಕ ಏರ್‌ ಟಿಕೆಟ್‌ ದರ ಗಗನಕ್ಕೆ!

10:15 PM Apr 25, 2021 | Team Udayavani |

ನವದೆಹಲಿ: ಭಾರತದಲ್ಲಿ ಕೊರೊನಾದಿಂದ ದಿನೇದಿನೇ ಪರಿಸ್ಥಿತಿ ವಿಷಮಿಸುತ್ತಿದೆ. ಇದರ ಪರಿಣಾಮ ಭಾರತ-ಅಮೆರಿಕದ ನಡುವಿನ ವಿಮಾನ ಟಿಕೆಟ್‌ಗಳ ಬೆಲೆ ಈ ವಾರ ಗಗನಕ್ಕೇರಿದೆ.

Advertisement

ಮಾಮೂಲಿಯಾಗಿ ಎಕಾನಮಿ ದರ್ಜೆಯ ಟಿಕೆಟ್‌ಗಳ ಬೆಲೆ 50,000 ರೂ. ಇದೀಗ ದಿಢೀರನೆ 1.50 ಲಕ್ಷ ರೂ.ಗೆ ಮುಟ್ಟಿದೆ!

ಇದಕ್ಕೆಲ್ಲ ಕಾರಣ ಅಮೆರಿಕ ಸರ್ಕಾರ; ತನ್ನ ಪ್ರಜೆಗಳಿಗೆ ಭಾರತಕ್ಕೆ ಪ್ರವಾಸ ಮಾಡುವುದನ್ನು ನಿಯಂತ್ರಿಸಿ ಎಂದು ಸೂಚನೆ ನೀಡಿದ್ದು. ಈ ಸುದ್ದಿ ಹೊರಬರುತ್ತಿದ್ದಂತೆ ಭಾರತದಿಂದ ಅಮೆರಿಕಕ್ಕೆ ಹೋಗಬೇಕಾಗಿರುವ ಹಲವರು ಟಿಕೆಟ್‌ಗಳಿಗೆ ಒಮ್ಮೆಲೇ ಮುಗಿಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟರೆ ಭಾರತದಲ್ಲೇ ಸಿಕ್ಕಿಕೊಳ್ಳಬೇಕಾಗುತ್ತದೆ ಎಂಬ ಭೀತಿ ಇದರ ಹಿಂದಿದೆ.

ಇದನ್ನೂ ಓದಿ :ಅರಬ್ಬೀ ಸಮುದ್ರದಲ್ಲಿ “ಮರ್ಸಿಡಿಸ್‌’ ಹಡಗಿನ ಅವಶೇಷ : ನೌಕಾಪಡೆಯಿಂದ ತೀವ್ರ ತಪಾಸಣೆ

Advertisement

Udayavani is now on Telegram. Click here to join our channel and stay updated with the latest news.

Next