Advertisement

ಗ್ರಾಮ ಸ್ವರಾಜ್‌ನಲ್ಲಿ ಹೊಸ ಮೈಲಿಗಲ್ಲು: ಪ್ರಧಾನಿ ಮೋದಿ

01:03 AM Jun 13, 2022 | Team Udayavani |

ಹೊಸದಿಲ್ಲಿ: ಕಳೆದ 8 ವರ್ಷಗಳಲ್ಲಿ ಭಾರತವು “ಗ್ರಾಮ ಸ್ವರಾಜ್ಯ’ ಮತ್ತು ಪಂಚಾಯತ್‌ಗಳ ಪ್ರಜಾಸತ್ತಾತ್ಮಕ ಸಶಕ್ತೀಕರಣದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಜತೆಗೆ ಕಲ್ಯಾಣ ಯೋಜನೆಗಳ ವ್ಯಾಪ್ತಿ ಹೆಚ್ಚಳ, ಜಲ ಸಂರಕ್ಷಣೆ ಮತ್ತು ಮುಂಬರುವ ಯೋಗ ದಿನವನ್ನು ವಿಶೇಷವಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಪಡುವಂತೆ ಸರಪಂಚರಿಗೆ ಕರೆ ನೀಡಿದ್ದಾರೆ.

ಸರಕಾರದ 8ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೇಶದ ಎಲ್ಲ ಸರಪಂಚರಿಗೂ ಪತ್ರ ಬರೆದಿರುವ ಮೋದಿ, ಕಳೆದ 8 ವರ್ಷಗಳಲ್ಲಿ ಗ್ರಾಮಗಳ ಮುಖ್ಯಸ್ಥರು ನೀಡಿರುವ ಕೊಡುಗೆಗಳನ್ನು ಶ್ಲಾ ಸುತ್ತಲೇ, ಮುಂದೆ ಯಾವ್ಯಾವ ವಿಚಾರಗಳಲ್ಲಿ ತಮಗೆ ಸರಪಂಚರ ಬೆಂಬಲ ಅಗತ್ಯವಿದೆ ಎಂಬ ಪಟ್ಟಿಯನ್ನೂ ಮಾಡಿದ್ದಾರೆ.

ಮಳೆ ನೀರು ಕೊಯ್ಲುವಿನಂಥ ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ ಗ್ರಾಮಗಳಲ್ಲಿ ಪ್ರತಿಯೊಂದು ಹನಿ ನೀರನ್ನೂ ಸಂರಕ್ಷಿಸುವ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ಮಾಡಿ. ಸರಕಾರದ ಯೋಜನೆಗಳು ಸೂಕ್ತ ಫ‌ಲಾ ನುಭವಿಗಳೆಲ್ಲರಿಗೂ ತಲುಪುವಂತೆ ಮಾಡಿ, ಸ್ವತ್ಛ ಭಾರತ ಯೋಜನೆಯನ್ನು ಗಂಭೀರ ವಾಗಿ ತೆಗೆದುಕೊಂಡು ಸ್ವತ್ಛತೆಯತ್ತ ಗಮನ ವಹಿಸಿ ಎಂದೂ ಮೋದಿ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next