ಕೊಲಂಬೊ: ಎಸಿಸಿ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ “ಎ’ ತಂಡ ಪಾಕಿಸ್ಥಾನ “ಎ’ ತಂಡವನ್ನು 8 ವಿಕೆಟ್‌ಗಳಿಂದ ಕೆಡವಿ ಅಜೇಯವಾಗಿ ಸೆಮಿಫೈನಲ್‌ಗೆ ಮುನ್ನುಗ್ಗಿದೆ.
ಬುಧವಾರ ನಡೆದ “ಬಿ’ ವಿಭಾಗದ ಬಹು ನಿರೀಕ್ಷೆಯ ಪಂದ್ಯದಲ್ಲಿ ಪಾಕಿ ಸ್ಥಾನ “ಎ’ 48 ಓವರ್‌ಗಳಲ್ಲಿ 205ಕ್ಕೆ ಆಲೌಟಾ ದರೆ, ಭಾರತ “ಎ’ 36.4 ಓವರ್‌ಗಳಲ್ಲಿ 2 ವಿಕೆಟಿಗೆ 210 ರನ್ ಬಾರಿಸಿತು.
ಚೇಸಿಂಗ್ ವೇಳೆ ಎಡಗೈ ಆರಂಭಕಾರ ಸಾಯಿ ಸುದರ್ಶನ್ ಅಜೇಯ ಶತಕ ಬಾರಿಸಿ ಪಾಕಿಸ್ಥಾನ ಬೌಲಿಂಗನ್ನು ಲೆಕ್ಕಕ್ಕಿಲ್ಲ ದಂತೆ ಮಾಡಿದರು. ಶಾನವಾಜ್ ದಹಾನಿ ಎಸೆತಗಳನ್ನು ಬೆನ್ನು ಬೆನ್ನಿಗೆ ಸಿಕ್ಸರ್‌ಗೆ ಬಡಿ ದಟ್ಟುವ ಮೂಲಕ ತಮ್ಮ ಶತಕ ಹಾಗೂ ಭಾರತದ ಗೆಲುವನ್ನು ಒಟ್ಟೊಟ್ಟಿಗೆ ಸಾರಿ ದರು. ಸಾಯಿ ಸುದರ್ಶನ್ ಕೊಡುಗೆ 110 ಎಸೆತಗಳಿಂದ ಅಜೇಯ 104 ರನ್. ಇದರಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. ಇವರ ಜತೆಗಾರ ಅಭಿಷೇಕ್ ಶರ್ಮ 20 ರನ್ ಮಾಡಿದರೆ, ನಿಕಿನ್ ಜೋಸ್ 53 ರನ್ ಬಾರಿಸಿದರು (64 ಎಸೆತ, 7 ಬೌಂಡರಿ). ಸಾಯಿ ಸುದರ್ಶನ್-ನಿಕಿನ್ ಜೋಸ್ 2ನೇ ವಿಕೆಟಿಗೆ 99 ರನ್ ಪೇರಿಸಿ ಭಾರತದ ಗೆಲುವನ್ನು ಸುಲಭಗೊಳಿಸಿದರು. ನಾಯಕ ಯಶ್ ಧುಲ್ 21 ರನ್ ಮಾಡಿ ಅಜೇಯರಾಗಿ ಉಳಿದರು.
ಬೌಲಿಂಗ್‌ನಲ್ಲಿ ಮಿಂಚು ಹರಿಸಿ ದವರು ಮಧ್ಯಮ ವೇಗಿ ರಾಜವರ್ಧನ್ ಹಂಗಗೇìಕರ್. ಅವರು 42 ರನ್ ವೆಚ್ಚದಲ್ಲಿ 5 ವಿಕೆಟ್ ಕೆಡವಿದರು. ಮಾನವ್ ಸುಥಾರ್ 3 ವಿಕೆಟ್ ಉರುಳಿಸಿದರು. ಪಾಕ್ ಸರದಿಯಲ್ಲಿ 48 ರನ್ ಮಾಡಿದ ಖಾಸಿಂ ಅಕ್ರಮ್ ಅವರದು ಸರ್ವಾಧಿಕ ಗಳಿಕೆ.
ಭಾರತ ತನ್ನ ಮೊದಲೆರಡು ಪಂದ್ಯಗಳಲ್ಲಿ ಯುಎಇ ಮತ್ತು ನೇಪಾಲವನ್ನು ಮಣಿಸಿತ್ತು. ಪಾಕಿಸ್ಥಾನಕ್ಕೆ ಇದು ಮೊದಲ ಸೋಲಾಗಿದೆ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ “ಎ’-48 ಓವರ್‌ಗಳಲ್ಲಿ 205 (ಖಾಸಿಂ ಅಕ್ರಮ್ 48, ಫರ್ಹಾನ್ 35, ಮುಬಾಸಿರ್ ಖಾನ್ 28, ಹಸೀಬುಲ್ಲ ಖಾನ್ 27, ಮೆಹ್ರಾನ್ ಮುಮ್ತಾಜ್ ಔಟಾಗದೆ 25, ಹಂಗಗೇìಕರ್ 42ಕ್ಕೆ 5, ಮಾನವ್ ಸುಥಾರ್ 36ಕ್ಕೆ 3). ಭಾರತ “ಎ’-36.4 ಓವರ್‌ಗಳಲ್ಲಿ 2 ವಿಕೆಟಿಗೆ 210 (ಸಾಯಿ ಸುದರ್ಶನ್ ಔಟಾಗದೆ 104, ನಿಕಿನ್ ಜೋಸ್ 53, ಯಶ್ ಧುಲ್ ಔಟಾಗದೆ 21, ಅಭಿಷೇಕ್ ಶರ್ಮ 20).