Advertisement

ಭಾರತ ಅತ್ಯಂತ ದುಬಾರಿ ತೆರಿಗೆ ದೇಶ: ಡೊನಾಲ್ಡ್ ಟ್ರಂಪ್

04:13 AM Mar 03, 2019 | |

ವಾಷಿಂಗ್ಟನ್: ಭಾರತ ಅತ್ಯಂತ ಹೆಚ್ಚಿನ ತೆರಿಗೆ ವಿಧಿಸುವ ದೇಶ. ಅಮೇರಿಕಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ದುಬಾರಿ ತೆರಿಗೆ ವಿಧಿಸುತ್ತದೆ. ಇದಕ್ಕೆ ಬದಲಿಯಾಗಿ ಅಮೇರಿಕಾ ಕೂಡಾ ಭಾರತದಿಂದ ಆಮದು ಮಾಡುವ ವಸ್ತುಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರತಿ ತೆರಿಗೆ ವಿಧಿಸುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Advertisement

ಇಲ್ಲಿನ ಮೇರಿಲ್ಯಾಂಡ್ ನಲ್ಲಿ ನಡೆದ ಕಂನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅಮೇರಿಕಾ ಅಧ್ಯಕ್ಷ, ಹಾರ್ಲೇ ಡೇವಿಡ್ ಸನ್ ಬೈಕ್ ನ ಉದಾಹರಣೆ ನೀಡುತ್ತಾ, ನಾವು ಭಾರತಕ್ಕೆ ಬೈಕ್ ಕಳುಹಿಸುವಾಗ ಭಾರತ 100% ತೆರಿಗೆ ಹಾಕುತ್ತಾರೆ. ಆದರೆ ಭಾರತದಿಂದ ಮೋಟಾರ್ ಬೈಕ್ ಅನ್ನು ಇಲ್ಲಿಗೆ ಕಳುಹಿಸಿದರೆ ಅದಕ್ಕೆ ನಾವು ಯಾವುದೇ ತೆರಿಗೆ ವಿಧಿಸುವುದಿಲ್ಲ. ಭವಿಷ್ಯದಲ್ಲಿ ಭಾರತದ ಅಧಿಕ ತೆರಿಗೆಗೆ ಪ್ರತಿಯಾಗಿ ನಾವು ಕೂಡ ಪ್ರತಿ ತೆರಿಗೆ ವಿಧಿಸಬೇಕು ಎಂದರು. 

ಶನಿವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್, ಭಾರತದ ಉದಾಹರಣೆ ನೀಡುತ್ತಾ ಹೇಗೆ ಇತರ ದೇಶಗಳು ಅಮೇರಿಕಾಗೆ ಹೆಚ್ಚಿನ ತೆರಿಗೆ ವಿಧಿಸುತ್ತಿವೆ ಎಂದು ವಿವರಿಸಿದರು. ಇಲ್ಲಿಯವರೆಗೆ ಇತರರು ನಮ್ಮ ಮೇಲೆ ತೆರಿಗೆ ವಿಧಿಸುತ್ತಿದ್ದರು, ಈಗ ನಮ್ಮ ಸಮಯ. ಅಮೇರಿಕಾ ಇನ್ನು ಬದಲಿ ತೆರಿಗೆ (reciprocal tax ) ವಿಧಿಸುತ್ತದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next