Advertisement

‘ರೆಮ್‌ಡೆಸಿವಿರ್‌’ಔಷಧಿ ಪ್ರಾಯೋಗಿಕ ಬಳಕೆಗೆ ಭಾರತ ಸಿದ್ಧ

08:03 AM May 06, 2020 | Hari Prasad |

ನವದೆಹಲಿ: ಅಮೆರಿಕ ಸರಕಾರದಿಂದ ಒಪ್ಪಿಗೆ ಪಡೆದಿರುವ ರೆಮ್‌ಡೆಸಿವಿರ್‌ ಔಷಧಗಳನ್ನು ಪ್ರಾಯೋಗಿಕವಾಗಿ ಬಳಸಲು ಭಾರತ ಸಿದ್ಧವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ತಿಳಿಸಿದ್ದಾರೆ.

Advertisement

‘ಆ್ಯಂಟಿ ವೈರಲ್‌ ಗುಣ ಹೊಂದಿರುವ ಈ ಔಷಧದ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಆಗ್ರಹಿಸಿದೆ. ಭಾರತವೂ ಡಬ್ಲ್ಯು.ಎಚ್‌.ಒ. ಸಹಯೋಗಿ ರಾಷ್ಟ್ರವಾಗಿರುವುದರಿಂದ ಭಾರತಕ್ಕೆ ಒಂದು ಸಾವಿರ ರೆಮ್‌ ಡೆಸಿವಿರ್‌ ಔಷಧಗಳ ಸ್ಯಾಂಪಲ್‌ಗಳನ್ನು ಕಳುಹಿಸಲಾಗಿದೆ.

ಅವುಗಳನ್ನು ಆಯ್ದ ರಾಜ್ಯಗಳ ಆಯ್ದ ನಗರಗಳಲ್ಲಿ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ. ಈ ನಿಟ್ಟಿನಲ್ಲಿ ಭಾರತದ ಐಸಿಎಂಆರ್‌ ಹಾಗೂ ಸಿಎಸ್‌ಐಆರ್‌ ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ’ ಎಂದಿದ್ದಾರೆ.

‘ದಿಲ್ಲಿ ಮತ್ತು ಮುಂಬಯಿಗಳಲ್ಲಿನ ಜನರು ಲಾಕ್‌ಡೌನ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದೇ ಇದ್ದ ಹಿನ್ನೆಲೆಯಲ್ಲಿ ಆ ಮಹಾನಗರಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವಾಯಿತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next