Advertisement

ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿ ಭಾರತ ‘ಎ’

12:04 AM Feb 04, 2024 | Team Udayavani |

ಅಹ್ಮದಾಬಾದ್‌: ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ “ಎ’ ಗೆಲುವಿನ ನಿರೀಕ್ಷೆಯಲ್ಲಿದೆ. ಜಯಕ್ಕೆ 403 ರನ್‌ ಸವಾಲು ಪಡೆದಿರುವ ಪ್ರವಾಸಿ ತಂಡ, 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟಿಗೆ 83 ರನ್‌ ಗಳಿಸಿದೆ.

Advertisement

7 ರನ್‌ ಹಿನ್ನಡೆಗೆ ಸಿಲುಕಿದ ಭಾರತ “ಎ’ ದ್ವಿತೀಯ ಸರದಿಯಲ್ಲಿ 409 ಪೇರಿಸಿತು. ಸಾಯಿ ಸುದರ್ಶನ್‌ 117 ರನ್‌ ಬಾರಿಸಿ ಮಿಂಚಿದರು. ಸಾರಾಂಶ್‌ ಜೈನ್‌ 63, ತಿಲಕ್‌ ವರ್ಮ 46, ಕುಮಾರ ಕುಶಾಗ್ರ 40, ರಿಂಕು ಸಿಂಗ್‌ 38, ಆಕಾಶ್‌ ದೀಪ್‌ 31 ರನ್‌ ಮಾಡಿದರು. ಇಂಗ್ಲೆಂಡ್‌ ಲಯನ್ಸ್‌ನ ಎರಡೂ ವಿಕೆಟ್‌ ಸಾರಾಂಶ್‌ ಜೈನ್‌ ಪಾಲಾಗಿದೆ. ಅಲೆಕ್ಸ್‌ ಲೀಸ್‌ 41 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next