ವಿಜಯವಾಡ: “ಎ’ ತಂಡಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ “ಎ’ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ನ್ಯೂಜಿಲ್ಯಾಂಡ್ “ಎ’ ತಂಡದ 211 ರನ್ನಿಗೆ ಉತ್ತರವಾಗಿ ದ್ವಿತೀಯ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 360 ರನ್ ಪೇರಿಸಿದೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಕಿತ್ ಭವೆ° ಅವರ ಆಜೇಯ ಶತಕ ಭಾರತದ ಸರದಿಯ ಆಕರ್ಷಣೆಯಾಗಿತ್ತು. ಭವೆ° 116 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 166 ಎಸೆತಗಳ ಈ ಬೀಸುಗೆಯಲ್ಲಿ 13 ಬೌಂಡರಿ ಹಾಗೂ 5 ಪ್ರಚಂಡ ಸಿಕ್ಸರ್ ಒಳಗೊಂಡಿದೆ.
ಭವೆ° ಜತೆ 56 ರನ್ ಮಾಡಿರುವ ಪಾರ್ಥಿವ್ ಪಟೇಲ್ ಕ್ರೀಸಿನಲ್ಲಿದ್ದಾರೆ. ಇವರಿಬ್ಬರು 5ನೇ ವಿಕೆಟಿಗೆ ಈಗಾಗಲೇ 154 ರನ್ ಪೇರಿಸಿದ್ದಾರೆ. 82 ರನ್ ಬಾರಿಸಿದ ಶ್ರೇಯಸ್ ಅಯ್ಯರ್ ಆತಿಥೇಯ ಸರದಿಯ ಮತ್ತೂಬ್ಬ ಬ್ಯಾಟಿಂಗ್ ಹೀರೋ (79 ಎಸೆತ, 10 ಬೌಂಡರಿ, 2 ಸಿಕ್ಸರ್).
ಆರಂಭಕಾರ ಪ್ರಿಯಾಂಕ್ ಪಾಂಚಾಲ್ 46 ಹಾಗೂ ನಾಯಕ ಕರುಣ್ ನಾಯರ್ 43 ರನ್ ಮಾಡಿ ಔಟಾದರು. ಕಿವೀಸ್ ಪರ ಐಶ್ ಸೋಧಿ 107ಕ್ಕೆ 2 ವಿಕೆಟ್ ಕಿತ್ತರು.
ಈಗಾಗಲೇ 149 ರನ್ ಮುನ್ನಡೆಯಲ್ಲಿರುವ ಭಾರತ “ಎ’ ಇದನ್ನು ಇನ್ನಷ್ಟು ದೊಡ್ಡ ಮೊತ್ತಕ್ಕೆ ವಿಸ್ತರಿಸಿದರೆ ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ.