Advertisement

ಹೂಡಿಕೆದಾರರಲ್ಲಿ ಖುಷಿಯ ನಗು ತಂದ ಸೂಚ್ಯಂಕ

01:09 AM Dec 15, 2020 | mahesh |

ಮುಂಬಯಿ: ಬಾಂಬೆ ಷೇರು ಪೇಟೆಯ ಹೂಡಿಕೆದಾರರಲ್ಲಿ ಸೋಮವಾರ ಖುಷಿಯ ನಗು ಮಿಂಚಿತ್ತು. ವಾರದ ಆರಂಭ ದಲ್ಲಿ ಬಿಎಸ್‌ಇ ವಹಿವಾಟು ಸೂಚ್ಯಂಕ 154.54 ಪಾಯಿಂಟ್ಸ್‌ ಗಳಷ್ಟು ಏರಿಕೆಯಾಗಿದೆ. ನಿಫ್ಟಿಯೂ ಕೂಡ 44.30 ರಷ್ಟು ಪುಟಿದೆದ್ದಿದೆ. ಬಿಎಸ್‌ಇ ಸೂಚ್ಯಂಕ ಮಧ್ಯಂತರ ವಹಿವಾಟಿ ನಲ್ಲಿ 46, 373.34 ಪಾಯಿಂಟ್ಸ್‌ ವರೆಗೆ ಏರಿಕೆಯಾಗಿ, ದಿನಾತ್ಯಕ್ಕೆ 46, 253.46ರಲ್ಲಿ ಮುಕ್ತಾಯವಾಗಿದೆ. ನಿಫ್ಟಿ ಕೂಡ ವಹಿ  ವಾಟಿನ ಒಂದು ಹಂತದಲ್ಲಿ 13, 597.50ರ ವರೆಗೆ ಏರಿಕೆ  ಯಾಗಿ ದಿನಾಂತ್ಯಕ್ಕೆ 13, 558.15ರಲ್ಲಿ ಮುಕ್ತಾಯ ವಾಯಿತು. ಈ ಮೂಲಕ ಬಿಎಸ್‌ಇ, ನಿಫ್ಟಿ ಸೂಚ್ಯಂಕ ಗಳು ಏರಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದವು.

Advertisement

ಬಿಎಸ್‌ಇಯಲ್ಲಿ ಒಎನ್‌ಜಿಸಿ ಷೇರುಗಳು ಹೆಚ್ಚಿನ ರೀತಿಯಲ್ಲಿ ಬಿಕರಿಯಾದವು. ಅನಂತರದ ಸ್ಥಾನಗಳಲ್ಲಿ ಎಲ್‌ ಆ್ಯಂಡ್‌ ಟಿ, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್‌, ಸನ್‌ ಫಾರ್ಮಾ, ಎಚ್‌ಸಿಎಲ್‌ ಟೆಕ್‌, ಟೈಟನ್‌ ಮತ್ತು ಏಷ್ಯನ್‌ ಪೇಂಟ್ಸ್‌ ಇವೆ. ಇಷ್ಟಾದರೂ ಅಟೊ ಮೊಬೈಲ್‌ ಕ್ಷೇತ್ರದ ಷೇರುಗಳು ಚೇತರಿಕೆ ಕಂಡಿಲ್ಲ. ಶಾಂಘೈ, ಟೋಕ್ಯೋ ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿಯೂ ಸೂಚ್ಯಂಕ ಹಸುರಾ ಗಿಯೇ ಮುಕ್ತಾಯಗೊಂಡಿದೆ. ಐರೋಪ್ಯ ಒಕ್ಕೂಟ ದಲ್ಲಿಯೂ ಚೇತೋಹಾರಿಯಾಗಿಯೇ ನಡೆದಿತ್ತು ವಹಿವಾಟು.

ಹಣದುಬ್ಬರ ದರ ಏರಿಕೆ
ಸಗಟು ಮಾರಾಟ ಕ್ಷೇತ್ರದ ಹಣದುಬ್ಬರ 9 ತಿಂಗಳ ಗರಿಷ್ಠಕ್ಕೆ ಅಂದರೆ, ಶೇ.1.55ಕ್ಕೆ ಜಿಗಿದಿದೆ. ನವೆಂಬರ್‌ಗೆ ಸಂಬಂಧಿಸಿದ ಮಾಹಿತಿ ಇದಾಗಿದೆ. ಅಕ್ಟೋಬರ್‌ನಲ್ಲಿ ಅದರ ಪ್ರಮಾಣ ಶೇ.1.48 ಆಗಿತ್ತು. 2019 ನವೆಂಬರ್‌ನಲ್ಲಿ ಶೇ.0.58 ಇತ್ತು. ತರಕಾರಿ, ಆಲೂಗಡ್ಡೆ ದರ ಏರಿಕೆ ಪ್ರಮಾಣ ಕ್ರಮವಾಗಿ ಶೇ.12.24 ಮತ್ತು ಶೇ.115.12 ಆಗಿದ್ದವು. ಆಹಾರೇತರ ವಸ್ತುಗಳ ದರ ಏರಿಕೆಯೂ ಶೇ.8.43 ಆಗಿದೆ.

ಕಾರಣಗಳೇನು?
ಬ್ರಿಟನ್‌- ಐರೋಪ್ಯ ಒಕ್ಕೂಟದ ನಡುವೆ ಬ್ರೆಕ್ಸಿಟ್‌ ಮಾತುಕತೆ ಸಮಯ ವಿಸ್ತರಣೆ. ಜಗತ್ತಿನ ಇತರೆಡೆ ಉತ್ತಮ ವಹಿವಾಟು
ವಿದೇಶಿ ಹೂಡಿಕೆದಾರರ ಸತತ ಬೆಂಬಲ
ಅಕ್ಟೋಬರ್‌ಗೆ ಸಂಬಂಧಿಸಿದ ಕೈಗಾರಿಕಾ ಸೂಚ್ಯಂಕದಲ್ಲಿ ಧನಾತ್ಮಕ ಬೆಳವಣಿಗೆಯಿಂದ ಹೂಡಿಕೆದಾರರಲ್ಲಿ ಉತ್ಸಾಹ

ರೂಪಾಯಿ ಜಿಗಿತ
ಅಮೆರಿಕದ ಡಾಲರ್‌ ಎದುರು ರೂಪಾಯಿ 9 ಪೈಸೆಯಷ್ಟು ಚೇತರಿಕೆ ಕಂಡಿದೆ. 73.62 ರೂ.ನಿಂದ ವಹಿವಾಟು ಶುರುವಾಗಿ ದಿನಾಂತ್ಯಕ್ಕೆ 73.55ರಲ್ಲಿ ಮುಕ್ತಾಯವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next