ಹೂಗ್ಲಿ: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಪಂಚಾಯತಿ ಚುನಾವಣೆಗೆ ಮತದಾನ ನಡೆಯುತ್ತಿದ್ದಾಗ ಸ್ವತಂತ್ರ ಅಭ್ಯರ್ಥಿಯೊಬ್ಬರ ಮಗಳ ಹಣೆಗೆ ಗುಂಡು ಹಾರಿಸಿದ ಘಟನೆ ತಾರಕೇಶ್ವರದಲ್ಲಿ ಈ ಘಟನೆ ನಡೆದಿದ್ದು, ಪ್ರದೇಶದಲ್ಲಿ ಆತಂಕ ಮೂಡಿಸಿದೆ.
ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಆಡಳಿತಾರೂಢ ತೃಣಮೂಲ ಈ ಆರೋಪಗಳನ್ನು ತಳ್ಳಿ ಹಾಕಿದೆ.
20 ವರ್ಷದ ಚಂದನಾ ಸಿಂಗ್ ಅವರನ್ನು ಕೋಲ್ಕತ್ತಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಅಪರಾಧಿಗಳ ಗುಂಪೊಂದು ಅವರ ಮನೆಗೆ ನುಗ್ಗಿ ಅವರ ಕುಟುಂಬ ಸದಸ್ಯರನ್ನು ಬಂದೂಕಿನಿಂದ ಥಳಿಸಿದ್ದಾರೆ ಎಂದು ಆಕೆಯ ತಂದೆ ಪಿಂಟು ಸಿಂಗ್ ಆರೋಪಿಸಿದ್ದಾರೆ.
ಘಟನಾ ಸ್ಥಳದಿಂದ ಗುಂಡುಗಳು ಮತ್ತು ಬಾಂಬ್ ಗಳ ಶೆಲ್ ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದರೂ, ಪೊಲೀಸರು ಸ್ಥಳದಿಂದ ಬುಲೆಟ್ ಗಳು ಮತ್ತು ಬಾಂಬ್ ಗಳನ್ನು ವಶಪಡಿಸಿಕೊಳ್ಳಲು ಯಾವುದೇ ತ್ವರಿತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ:Ashes: ಹೇಡಿಂಗ್ಲೆ ಮೈದಾನದೊಳಗೆ ಕೋಚ್ ಬ್ರೆಂಡನ್ ಮೆಕಲಮ್ ಗೆ ಪ್ರವೇಶ ನಿರಾಕರಣೆ
ಆಡಳಿತಾರೂಢ ಟಿಎಂಸಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಪಿಂಟು ಸಿಂಗ್ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆಗೆ ಶನಿವಾರ ಮತದಾನ ನಡೆಯುತ್ತಿದ್ದು, ಚುನಾವಣಾ ಸಂಬಂಧಿತ ಹಿಂಸಾಚಾರದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆ ಸಂಬಂಧಿತ ಹಿಂಸಾಚಾರದಲ್ಲಿ ಐವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು, ಒಬ್ಬ ಬಿಜೆಪಿ ಪೋಲಿಂಗ್ ಏಜೆಂಟ್ ಮತ್ತು ಒಬ್ಬ ಸಿಪಿಐಎಂ ಕಾರ್ಯಕರ್ತ ಸಾವನ್ನಪ್ಪಿದ್ದಾರೆ.