Advertisement

ಗಾಂಧೀಜಿ, ಜೆಪಿ ತಂದುಕೊಟ್ಟ ಸ್ವಾತಂತ್ರ್ಯ ನಶಿಸಿ ಹೋಗುತ್ತಿದೆ : ಮಾಜಿ ಪ್ರಧಾನಿ ಎಚ್ ಡಿಡಿ

07:19 PM Oct 11, 2021 | Team Udayavani |

ಬೆಂಗಳೂರು : ಮಹಾತ್ಮ ಗಾಂಧೀಜಿ, ಜಯಪ್ರಕಾಶ್ ನಾರಾಯಣ್ ಅವರು ತಂದುಕೊಟ್ಟ ಸ್ವಾತಂತ್ರ್ಯ ನಶಿಸಿ ಹೋಗುತ್ತಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಶ್ರೀ ಜಯಪ್ರಕಾಶ್ ನಾರಾಯಣ್ ಅವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

1957 ರಲ್ಲಿ ಸಕ್ರೀಯ ರಾಜಕಾರಣದಲ್ಲಿ ಜೆಪಿಯವರನ್ನು ಮೊದಲ ಬಾರಿಗೆ ನೋಡಿದ್ದೆ, ಆಗ ಅವರು ವೈ.ವೀರಪ್ಪ ಎಂಬುವರ ಪರವಾಗಿ ಭಾಷಣ ಮಾಡಲು ನಮ್ಮ ಊರಿಗೆ ಬಂದಿದ್ದರು. ಒಂದು ಸುತ್ತು ಇಡೀ ದೇಶ ನೋಡಬೇಕು ಅಂದುಕೊಂಡು ಕರ್ನಾಟಕಕ್ಕೆ ಬಂದರು. ನಮ್ಮ ಹಳ್ಳಿಗಾಡಿನ ಪ್ರದೇಶ ನೋಡಿ ನೊಂದು ಕೊಂಡರು. ಆಗ ಹಲವಾರು ವಿಚಾರ ಚರ್ಚೆ ಮಾಡಿದ್ದೆವು ಎಂದರು.

ಕೆಆರ್ ಎಸ್ ಡ್ಯಾಂ ಕಟ್ಟಿದ ಬಗ್ಗೆಯೂ ಕೇಳಿದ್ದರು. ಅವರ ಮನಸ್ಸಲ್ಲಿ ಆಳವಾದ ಭಾವನೆ ಇತ್ತು. ಇರುವ ಸಂಪನ್ಮೂಲ ಬಳಸಿಕೊಳ್ಳುವ ಬಗ್ಗೆ ಆಲೋಚನೆ ಇತ್ತು ಎಂದರು.

ಅವರಿಗೆ ಅನಾರೋಗ್ಯ ತುಂಬಾ ಕಾಡಿತ್ತು, ನಾನು ಅವರನ್ನು ನೋಡಲು ಆಸ್ಪತ್ರೆಗೆ ಹೋದಾಗ ಅವರ ಸ್ಥಿತಿ ನೋಡಿ ಅಳು ಬಂದಿತ್ತು ಎಂದರು.

Advertisement

ಮಹಾತ್ಮ ಗಾಂಧಿ ಅದ್ದೂರಿ ಜೀವನ ಮಾಡಲಿಲ್ಲ, ಕುಟೀರ ಮಾಡಿ ಬಂದವರಿಗೆ ವ್ಯವಸ್ಥೆ ಮಾಡಿದ್ದರು. ತುಂಡು ಪಂಚೆ  ಉಟ್ಟು  ಸ್ವತಂತ್ರ ತಂದು ಕೊಟ್ಟರು.ಮಹಾತ್ಮ ಗಾಂಧಿ ಅವರು ದೇಶಕ್ಕೆ ಮೊದಲ ಸ್ವಾತಂತ್ರ್ಯ ತಂದುಕೊಟ್ಟರೆ , ಜೆಪಿ ಅವರು ಮತ್ತೊಂದು ಹಂತದ ಸ್ವಾತಂತ್ರ್ಯ ತಂದುಕೊಟ್ಟರು. ಜೆಪಿ ಅವರು ತಂದು ಕೊಟ್ಟ ಮತ್ತೊಂದು ಸ್ವಾತಂತ್ರ್ಯ ಕೂಡ ನಶಿಸಿ ಹೋಗುತ್ತಾ ಇದೆ ಎಂದರು.

ನಾನು ಈಗಿನ ರಾಜಕೀಯ ಹಾಗೂ ಆಗ ಇದ್ದ ರಾಜಕೀಯದ ಬಗ್ಗೆ ತುಲನೆ ಮಾಡುತ್ತಿದ್ದೇನೆ. ನಾನು ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುವುದಿಲ್ಲ ವಾಸ್ತವಾಂಶ ಹೇಳುತ್ತೇನೆ ಎಂದರು.

ಗಾಂಧಿಯ ಕಾಂಗ್ರೆಸ್ ಈಗ ಏನಾಗುತ್ತಾ ಇದೆ? ಯಾರನ್ನು ನೋಡಿದರೂ ಅಧಿಕಾರ, ಅಧಿಕಾರ..ಅಧಿಕಾರಕ್ಕೆ ಹಾತೊರೆಯುವ ಈ ವ್ಯವಸ್ಥೆಯಲ್ಲಿ ನಾನು ಜೆಪಿ ಹೆಸರು ಪಕ್ಷದ ಕಟ್ಟಡಕ್ಕೆ ಇಟ್ಟಿದ್ದೇನೆ ಎಂದರು.

ಇನ್ನು ಮುಂದಾದರು ನಾವೆಲ್ಲ ಯುವ ಪೀಳಿಗೆಗೆ ಜೆಪಿ ಅವರ ನಾಯಕತ್ವದ ಬಗ್ಗೆ ತಿಳಿಸಿ, ಅವರ ಹಾದಿಯಲ್ಲಿ ನಡೆಯುವಂತೆ ಕಾರ್ಯಕ್ರಮಗಳನ್ನ ರೂಪಿಸಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next